Home » Sasikanth Senthil: ದ.ಕದಲ್ಲಿ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್‌ ಸೆಂಥಿಲ್‌ ಭರ್ಜರಿ ಗೆಲುವು !!

Sasikanth Senthil: ದ.ಕದಲ್ಲಿ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್‌ ಸೆಂಥಿಲ್‌ ಭರ್ಜರಿ ಗೆಲುವು !!

0 comments

Sasikanth Senthil: ದಕ್ಷಿಣ ಕನ್ನಡದಲ್ಲಿ(Dakshina Kannada) ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಹಾಗೂ ಆನಂತರ ಸ್ವಯಂ ನಿವೃತ್ತಿ ಪಡೆದುಕೊಂಡು ಕಾಂಗ್ರೆಸ್‌ಗೆ(Congress)ಸೇರಿದ್ದ ಸಸಿಕಾಂತ್‌ ಸೆಂಥಿಲ್‌ ಭರ್ಜರಿ ಗೆಲುವು ಸಾಧಿಸಿದ್ದಾರೆ.

ತಮಿಳುನಾಡಿನ ತಿರುವಲ್ಲೂರು(Tiruvalluru) ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಟಿಕೆಟ್ ಪಡೆದು ಕಣಕ್ಕಿಳಿದಿದ್ದ ಸಸಿಕಾಂತ್ ಸೆಂಥಿಲ್, ಜಯಭೇರಿ ಬಾರಿಸಿದ್ದಾರೆ. ಅವರು ಡಿಎಂಕೆಯ ನಲ್ಲತಂಬಿ ಕೆ. ವಿರುದ್ಧ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ.

ಸಸಿಕಾಂತ್ ಸೆಂಥಿಲ್ ಕರ್ನಾಟಕದ(Karnataka) ದಕ್ಷಿಣ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿ ಹೆಸರುವಾಸಿಯಾಗಿದ್ದರು. ಸೆಂಥಿಲ್‌ ಅವರು ದಕ್ಷಿಣ ಕನ್ನಡದಲ್ಲಿ ಜಿಲ್ಲಾಧಿಕಾರಿಯಾಗಿದ್ದ ವೇಳೆ, ಅತ್ಯುತ್ತಮ ಹಾಗೂ ದಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಆನಂತರ ಅವರು ಸ್ವಯಂ ರಾಜೀನಾಮೆ ಪಡೆದು ರಾಜಕೀಯ ಪ್ರವೇಶಿಸಿದ್ದರು.

You may also like

Leave a Comment