Home » Weird Culture: ಈ ಜಾಗದಲ್ಲಿ ಬ್ರಾ ನೇತು ಹಾಕಿದ್ರೆ ಸಾಕು! ನಿಮ್ಮನ್ನು ಸಂಗಾತಿ ಹುಡುಕಿ ಬರೋದು ಗ್ಯಾರಂಟಿ!

Weird Culture: ಈ ಜಾಗದಲ್ಲಿ ಬ್ರಾ ನೇತು ಹಾಕಿದ್ರೆ ಸಾಕು! ನಿಮ್ಮನ್ನು ಸಂಗಾತಿ ಹುಡುಕಿ ಬರೋದು ಗ್ಯಾರಂಟಿ!

0 comments
Weird Culture

Weird Culture: ಪ್ರತಿ ದೇಶದಲ್ಲೂ ಆಚಾರ ವಿಚಾರ ರೂಢಿ ಸಂಪ್ರದಾಯಗಳ ಸೊಗಡು ಬೇರೆ ಬೇರೆ ಆಗಿರುತ್ತದೆ. ಆದ್ರೆ ಕೆಲವೊಂದು ದೇಶದ ಸಂಪ್ರದಾಯದ ಬಗ್ಗೆ ಕೇಳಿದ್ರೆ ಕೈ ಬೆರಳು ಬಾಯಿಗೆ ಇಡೋದು ಗ್ಯಾರಂಟಿ. ಹೌದು, ಈ ಒಂದು ಜಾಗದಲ್ಲಿ ಬ್ರಾ ನೇತು ಹಾಕಿದ್ರೆ ಸಾಕು. ನಿಮ್ಮನ್ನು ಸಂಗಾತಿ ಹುಡುಕಿ ಬರೋದು ಗ್ಯಾರಂಟಿ ಅಂತೆ. ಹಾಗಿದ್ರೆ ಏನಿದು ವಿಚಿತ್ರ ಸಂಪ್ರದಾಯ (Weird Culture) ಅನ್ನೋದು ನೋಡೋಣ ಬನ್ನಿ.

ನ್ಯೂಜಿಲ್ಯಾಂಡ್​ನ ಸೆಂಟ್ರಲ್ ಒಟಾಗೋದಲ್ಲಿ ಕಾರ್ಡೋನಾ ಎಂಬ ವಿಚಿತ್ರ ಪ್ರದೇಶದ ಬಗ್ಗೆ ನೀವು ತಿಳಿಯಲೇ ಬೇಕು. ಹೌದು, ನ್ಯೂಜಿಲ್ಯಾಂಡ್​ನ ಈ ಸ್ಥಳಕ್ಕೆ ಹೆಚ್ಚಿನವರು ಬ್ರಾ ನೇತು ಹಾಕಲೆಂದೇ ಬರುತ್ತಾರೆ. ಇಲ್ಲಿಗೆ ಬರುವ ಮಹಿಳೆಯರು ತಮ್ಮ ಬಟ್ಟೆಯೊಳಗಿನ ಬ್ರಾಗಳನ್ನು ತೆಗೆದು ಹಗ್ಗಕ್ಕೆ ನೇತು ಹಾಕುತ್ತಾರೆ. ಏನಾದರೂ ಬ್ಯಾಗಿನಲ್ಲಿ ಬ್ರಾ ತಂದಿಲ್ಲ ಅಂದರೆ, ತಮ್ಮ ಮೈಮೇಲಿನ ಬ್ರಾವನ್ನೇ ಬಿಚ್ಚಿ ತಂತಿಗೆ ನೇತು ಹಾಕುತ್ತಾರಂತೆ. ಹೆಚ್ಚಿನ ಪ್ರವಾಸಿಗರು ಈ ಸ್ಥಳಕ್ಕೆ ಬ್ರಾ ನೇತು ಹಾಕಲೆಂದೇ ಬರುತ್ತಾರಂತೆ. ಇದೇ ಕಾರಣಕ್ಕೆ ಈ ಸ್ಥಳವನ್ನು ನ್ಯೂಜಿಲ್ಯಾಂಡ್​ನ ಪ್ರಮುಖ ಪ್ರವಾಸಿ ತಾಣವನ್ನಾಗಿ ಪರಿವರ್ತಿಸಿಕೊಂಡಿದೆ.

ನ್ಯೂಜಿಲ್ಯಾಂಡ್​ನ ಕಾರ್ಡೊನಾ ಎಂಬ ಪ್ರದೇಶದಲ್ಲಿ ಈ ಬ್ರಾ ನೇತು ಹಾಕಲು ಅದರದೇ ಆದ ಕಾರಣವಿದೆಯಂತೆ. ಇಲ್ಲಿನ ತಂತಿಗೆ ಬ್ರಾ ನೇತು ಹಾಕಿದರೆ ಪ್ರೀತಿಸಿದ ವ್ಯಕ್ತಿ ಜೀವನ ಸಂಗಾತಿಯಾಗಿ ಸಿಗುತ್ತಾರೆ ಎಂಬುದು ಅಲ್ಲಿನ ಜನರ ನಂಬಿಕೆ. ಅದೇ ರೀತಿ ಒಳ್ಳೆಯ ಪತಿ ಸಿಗುತ್ತಾನೆ ಎಂಬ ನಂಬಿಕೆಯಿದೆ. ಇದನ್ನು ತಿಳಿದಿರುವ ಜನರು ಇಲ್ಲಿಗೆ ಬಂದು ಬ್ರಾ ನೇತು ಹಾಕುವ ಸಂಪ್ರದಾಯವನ್ನು ರೂಢಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Venu Swamy: ಭವಿಷ್ಯದಲ್ಲಿ ಇನ್ನೆಂದೂ ಯಾರಿಗೂ ಭವಿಷ್ಯ ನುಡಿಯಲಾರೆ ಎಂದ ಜ್ಯೋತಿಷಿ ವೇಣು ಸ್ವಾಮಿ

1999 ರಲ್ಲಿ ಮೊದಲ ಬಾರಿಗೆ ನಾಲ್ಕು ಬ್ರಾಗಳು ನೇತಾಡುತ್ತಿರುವುದು ಕಂಡುಬಂದಿದೆ ಎಂದು ಇಲ್ಲಿ ಸ್ಥಳೀಯರು ಹೇಳುತ್ತಾರೆ. ಅವುಗಳನ್ನು ಅಲ್ಲಿಗೆ ನೇತು ಹಾಕಿದವರು ಯಾರೆಂದು ಯಾರಿಗೂ ತಿಳಿದಿಲ್ಲ. ಆದರೆ ಆ ನಂತರ ತಂತಿಯಲ್ಲಿ ದಿನ ಹೋದಂತೆ ಹೆಚ್ಚುತ್ತಲೇ ಹೋಯಿತು. ಇದನ್ನು ನೋಡಿ ಅಲ್ಲಿ ನೆರೆದವರು ಈ ರೂಢಿ ಮಾಡಿಕೊಂಡರು. ತದನಂತರ ಇದು ಸಂಪ್ರದಾಯವಾಗಿ, ಇಂದಿಗೂ ಈ ಸಂಪ್ರದಾಯ ಚಾಲ್ತಿಯಲ್ಲಿದೆಯಂತೆ. ಇನ್ನು ಇಲ್ಲಿ ಕಳ್ಳರ ಕಾಟವೂ ಹೆಚ್ಚಾಗಿದೆ. ಆದ್ರೆ ಇಲ್ಲಿ ಬಂಗಾರ, ಹಣ ಕದಿಯೋದರ ಬದಲಿಗೆ ಬ್ರಾವನ್ನೇ ಕದ್ದುಕೊಂಡು ಹೋಗುತ್ತಾರೆ. ಕೆಲ ಕಳ್ಳರು ರಾತ್ರಿ ವೇಳೆ ಬಂದು ಇಲ್ಲಿ ಬ್ರಾ ಕದಿಯುತ್ತಿದ್ದರು. ಆ ಘಟನೆಗಳ ನಂತರ ಈ ಸ್ಥಳದ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು. ಬ್ರಾಗಳು ಕಳ್ಳತನವಾಗುತ್ತಿದ್ದಂತೆ ಮತ್ತಷ್ಟು ಮಂದಿ ಬಂದು ಮತ್ತೆ ಬ್ರಾಗಳನ್ನು ನೇತು ಹಾಕಿದ್ದಾರೆ.

ನ್ಯೂಜಿಲೆಂಡ್ನಿಂದ ಮಾತ್ರವಲ್ಲದೇ ವಿದೇಶಿ ಮಹಿಳಾ ಪ್ರವಾಸಿಗರೂ ಇಲ್ಲಿಗೆ ಬಂದು, ತಮ್ಮ ಬ್ರಾಗಳನ್ನು ತೆರೆದು ಮನಸ್ಸಿನಲ್ಲಿರುವ ತಮ್ಮ ಆಸೆಗಳನ್ನು ಹೇಳಿಕೊಂಡು ಬ್ರಾ ನೇತು ಹಾಕಿದ್ದಾರೆ. ಇವರಲ್ಲಿ ಸಾಕಷ್ಟು ಮಹಿಳೆಯರ ಆಸೆಗಳು ಈಡೇರಿವೆ.

ಜೊತೆಗೆ ಇಲ್ಲಿ ಮತ್ತೊಂದು ನಂಬಿಕೆಯಿದೆ. ಅದೇನೆಂದರೆ ಈ ಜಾಗದಲ್ಲಿ ಬ್ರಾ ನೇತು ಹಾಕುವುದು ಸ್ತನ ಕ್ಯಾನ್ಸರ್​ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ. ಒಟ್ಟಿನಲ್ಲಿ ಈ ಸ್ಥಳದ ಬಗ್ಗೆ ಬೇರೆ ಬೇರೆ ರೀತಿಯಲ್ಲಿ ಸುದ್ದಿಗಳು ಹರಿದಾಟುತ್ತಿರುತ್ತವೆ.

ಇದನ್ನೂ ಓದಿ: Lemon Water: ಯಾರು ಬೆಳಿಗ್ಗೆ ನಿಂಬೆ ನೀರನ್ನು ಕುಡಿಯಬಾರದು? ಆರೋಗ್ಯ ತಜ್ಞರು ಏನು ಹೇಳುತ್ತಾರೆ?

You may also like

Leave a Comment