Home » PM Modi: ಅಧಿಕಾರದ ಮೊದಲ ದಿನವೇ ರೈತರ ಖಾತೆಗೆ 20,000 ಕೋಟಿ ಜಮೆ ಮಾಡಿಸಿದ ಮೋದಿ !!

PM Modi: ಅಧಿಕಾರದ ಮೊದಲ ದಿನವೇ ರೈತರ ಖಾತೆಗೆ 20,000 ಕೋಟಿ ಜಮೆ ಮಾಡಿಸಿದ ಮೋದಿ !!

0 comments
PM Modi

PM Modi: ನರೇಂದ್ರ ಮೋದಿಯವರು 3ನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ದೇಶದ ರೈತರಿಗೆ ಭರ್ಜರಿ ಗಿಫ್ಟ್ ನೀಡಿ, ಗುಡ್ ನ್ಯೂಸ್ ಕೊಟ್ಟಿದ್ದಾರೆ.

Chandan – Niveditha: ನಿವೇದಿತಾ-ಚಂದನ್‌ ಶೆಟ್ಟಿ ಮಾಜಿ ದಂಪತಿಗಳಿಂದ ಜಂಟಿ ಪತ್ರಿಕಾಗೋಷ್ಠಿ

3ನೇ ಅವಧಿಗೆ ಮೋದಿ(PM Modi) ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹಲವು ಭರವಸೆಗಳನ್ನು ಜನ ಸರ್ಕಾರದ ಮೇಲಿರಿಸಿದ್ದಾರೆ. ನಿನ್ನೆ(ಜೂ.9) ತಾನೆ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿ 3ನೇ ಬಾರಿಗೆ ಪ್ರಧಾನಿಯಾಗಿ ಇಂದು ಕೆಲಸ ಆರಂಭಿಸಿದ್ದಾರೆ. ಇಂದು ಪ್ರಧಾನಿ ಕಚೇರಿಗೆ ಆಗಮಿಸುತ್ತಿದ್ದಂತೆ ಮೋದಿಯವರು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ರೈತರ ಖಾತೆಗೆ ಬರೋಬ್ಬರಿ 20,000 ಕೋಟಿ ರೂಪಾಯಿ ಜಮೆ ಮಾಡಿಸಿದ್ದಾರೆ. ಕಿಸಾನ್(PM Kissan samman) ನಿಧಿ ಸಮ್ಮಾನ್ 17ನೇ ಕಂತನ್ನು ಮೋದಿ ಬಿಡುಗಡೆ ಮಾಡಿದ್ದಾರೆ.

ಹೌದು, ಕಚೇರಿಗೆ ಆಗಮಿಸಿದ ಮೋದಿಗೆ ಸಿಬ್ಬಂದಿಗಳು ಅದ್ಧೂರಿ ಸ್ವಾಗತ ನೀಡಿದ್ದಾರೆ. ಚಪ್ಪಾಳೆ ತಟ್ಟಿ ಮೋದಿಯನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಮೋದಲ ದಿನವೇ ಮೋದಿ ಚುರುಕಿನ ಕೆಲಸಗಳು ಆರಂಭಗೊಂಡಿದೆ. ಈ ಬೆನ್ನಲ್ಲೇ ಮೋದಿಯವರು ತಮ್ಮ ಮೂರನೇ ಅವಧಿಯ ಮೊದಲ ದಿನವೇ ಬರೋಬ್ಬರಿ 9.3 ಕೋಟಿ ರೈತರ ಖಾತೆಗೆ 20 ಸಾವಿರ ಕೋಟಿ ರೂಪಾಯಿ ಜಮೆ ಮಾಡಿದ್ದಾರೆ. ಈ ಮೂಲಕ ಸರ್ಕಾರ ರೈತರ ಏಳಿಗೆ ಹಾಗೂ ಬೆಂಬಲಕ್ಕೆ ಸದಾ ನಿಲ್ಲಲಿದೆ ಅನ್ನೋ ಸಂದೇಶ ಸಾರಿದ್ದಾರೆ.

ಹಣ ಬಿಡುಗಡೆಯ ಬಳಿಕ ಮಾತನಾಡಿದ ಮೋದಿ ರೈತರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ರೈತರ ಕಲ್ಯಾಣಕ್ಕಾಗಿ ಸರ್ಕಾರ ಎಲ್ಲಾ ನೆರವು ನೀಡಲಿದೆ ಎಂದು ಹೇಳಿದ್ದಾರೆ.

Yuva Rajkumar Divorce: ಯುವ ರಾಜ್‌ಕುಮಾರ್‌ ವಿಚ್ಛೇದನಕ್ಕೆ ಖ್ಯಾತ ನಟಿಯೇ ಕಾರಣ?

You may also like

Leave a Comment