Home » Human finger found in ice cream : ಆನ್ಲೈನಲ್ಲಿ ಆರ್ಡರ್ ಮಾಡಿ ತರಿಸಿದ ಐಸ್ಕ್ರೀಮ್ ನಲ್ಲಿ ಮನುಷ್ಯನ ಬೆರಳು ಪತ್ತೆ !!

Human finger found in ice cream : ಆನ್ಲೈನಲ್ಲಿ ಆರ್ಡರ್ ಮಾಡಿ ತರಿಸಿದ ಐಸ್ಕ್ರೀಮ್ ನಲ್ಲಿ ಮನುಷ್ಯನ ಬೆರಳು ಪತ್ತೆ !!

0 comments
Human finger found in ice cream

Human finger found in ice cream : ಇಂದು ಕೂತಲ್ಲಿಗೇ ಎಲ್ಲವನ್ನೂ ತಂದಿರಿಸುತ್ತೆ ಈ ಆನ್ಲೈನ್ ಅನ್ನೋ ದೊಡ್ಡ ಜಾಲ. ಒಟ್ಟಿನಲ್ಲಿ ಎಲ್ಲದೂ ಆನ್ಲೈನ್ ಮಯ. ಅಂತೆಯೇ ಮಹಿಳೆಯೊಬ್ಬರು ಆನ್ಲೈನ್ ಅಲ್ಲಿ ಐಸ್ಕ್ರೀಮ್ ಆರ್ಡರ್ ಮಾಡಿದ್ದು, ಅದು ಮನೆ ಬರುತತಿದ್ದಂತೆ ಆಕೆಗೆ ಶಾಕ್ ಎದುರಾಗಿದೆ. ಯಾಕೆಂದರೆ ಅದರಲ್ಲಿ ಮಾನವನ ಬೆರಳು(Human finger found in ice cream) ಪತ್ತೆಯಾಗಿದೆ.

Renuka Swamy Murder: ದರ್ಶನ್ ಬಚಾವ್ ಮಾಡಲು ಸಚಿವರ ಭಾರೀ ಪ್ರಯತ್ನ- ಪೋಲೀಸರಿಗೆ 128 ಸಲ ಕರೆ !!

ಯಬ್ಬೋ.. ಇದೇನಪ್ಪಾ ಆಶ್ಚರ್ಯ, ಹೆದರಿಕೆ ಎಲ್ಲದೂ ಒಟ್ಟಿಗೆ ಆಗುತ್ತಿದೆ ಎಂದು ಭಾವಿಸ್ತೀದ್ದೀರಾ? ಇದು ಸತ್ಯ. ಹೌದು, ಇದುವರೆಗೂ ಆನ್ಲೈನ್ ಅಲ್ಲಿ ತರಿಸಿದ ಬಿರಿಯಾನಿ, ಊಟದಲ್ಲಿ ಹುಳ, ಜಿರಳೆ, ಕೀಟ ಏನಾದರೂ ಒಂದು ಇರುವುದು ಸುದ್ದಿಯಾಗುತ್ತಿತ್ತು. ಆದರೀಗ ಮಾನವನ ಬೆರಳೇ ಪತ್ತೆಯಾಗಿದೆ.

ಅಂದಹಾಗೆ ಮುಂಬೈನ(Mumbai) ಮಲಾಡ್​ ಎಂಬಲ್ಲಿ ಈ ಘಟನೆ ನಡೆದಿದೆ. ಮಲಾಡ್‌ನ(Malad) ನಿವಾಸಿ ಓರ್ಲೆಮ್ ಸಾರೊ ಎಂಬ ಮಹಿಳೆ ಆನ್‌ಲೈನ್ ಡೆಲಿವರಿ ಅಪ್ಲಿಕೇಶನ್‌ ಮೂಲಕ ಬಟರ್​ಸ್ಕಾಚ್ ಐಸ್‌ಕ್ರೀಮ್‌ ಕೋನ್‌ಗಳನ್ನು ಆರ್ಡರ್ ಮಾಡಿದ್ದರು. ಅರ್ಧದಷ್ಟು ಐಸ್​ಕ್ರೀಮ್(Ice Cream) ತಿಂದ ಬಳಿಕ ನಾಲಿಗೆಗೆ ಏನೋ ವಸ್ತು ತಾಗಿದಂತಾಗಿದೆ. ಬಳಿಕ ಏನೆಂದು ನೋಡಿದಾಗ ಎರಡು ಸೆಂಟಿಮೀಟರ್ ಉದ್ದದ ಬೆರಳು ಪತ್ತೆಯಾಗಿದೆ.

ಘಟನೆ ಸಂಬಂಧ ಮಹಿಳಾ ಗ್ರಾಹಕಿ ಮಲಾಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಸಿದ್ದು, ಯಮ್ಮೋ ಐಸ್​ಕ್ರೀಮ್​ ಕಂಪನಿ ವಿರುದ್ಧ ಐಪಿಸಿ ಸೆಕ್ಷನ್​ 272, 273 ಮತ್ತು 336ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಜತೆಗೆ ಐಸ್ಕ್ರೀಮ್​ ಮತ್ತು ಅದರಲ್ಲಿ ಪತ್ತೆಯಾದ ಬೆರಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮಲಾಡ್ ಪೊಲೀಸರು ಆನ್‌ಲೈನ್ ಡೆಲಿವರಿ ಅಪ್ಲಿಕೇಶನ್ ಮತ್ತು ಐಸ್​ಕ್ರೀಮ್ ತಯಾರಿಕಾ ಕಂಪನಿ ವಿರುದ್ಧ ತನಿಖೆ ನಡೆಸುತ್ತಿದ್ದಾರೆ.

Chanakya Niti: ಮಹಿಳೆಯರಿಗೆ ಹುಟ್ಟಿನಿಂದಲೇ ಕೆಲವು ಕೆಟ್ಟ ಬುದ್ಧಿ ಅಂಟಿಕೊಳ್ಳುತ್ತದೆ!

You may also like

Leave a Comment