Home » Crime News: ಮಾತು ಬಾರದ ಬುದ್ಧಿಮಾಂದ್ಯ ಮಗುವನ್ನು ಕತ್ತುಹಿಸುಕಿ ಕೊಂದ ತಾಯಿ

Crime News: ಮಾತು ಬಾರದ ಬುದ್ಧಿಮಾಂದ್ಯ ಮಗುವನ್ನು ಕತ್ತುಹಿಸುಕಿ ಕೊಂದ ತಾಯಿ

0 comments
Crime News

Crime News: ತಾನು ಹೆತ್ತ ಮಗುವನ್ನೇ ತಾಯಿಯೊಬ್ಬಳು ಅಮಾನುಷವಾಗಿ ಕೊಂದಿರುವ ಘಟನೆಯೊಂದು ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತನ್ನ ಮಗುವಿಗೆ ಮಾತು ಬರಲಿಲ್ಲ ಎಂಬ ಕಾರಣಕ್ಕೆ 3 ವರ್ಷ 10 ತಿಂಗಳ ಬುದ್ಧಿ ಮಾಂದ್ಯ ಹೆಣ್ಣು ಮಗುವಿನ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾಳೆ ಎನ್ನುವ ಆರೋಪ ಈ ಹೆತ್ತ ತಾಯಿಯ ಮೇಲಿದೆ.

Renuka Swamy murder case: ಬಚಾವ್ ಆಗಲು ದರ್ಶನ್ ನಿಂದ ಕೋಟಿ ಕೋಟಿ ಆಮಿಷ !!

ಚಿಕ್ಕಲ್ಲಸಂದ್ರದ ಮಂಜುನಾಥನಗರದ ಸಿರಿ ಅಪಾರ್ಟ್‌ಮೆಂಟ್‌ ನಿವಾಸಿ ರಮ್ಯಾ (35) ಎಂಬಾಕೆಯೇ ಕೊಲೆ ಮಾಡಿದವರು.

ಈ ಘಟನೆ ಗುರುವಾರ ಮಧ್ಯಾಹ್ನ 12.30 ಕ್ಕೆ ಈ ದುರ್ಘಟನೆ ನಡೆದಿದೆ. ಪೊಲೀಸರು ರಮ್ಯಾಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ರಮ್ಯಾ ಅವರು ವೆಂಕಟೇಶ್‌ ಕೃಷ್ಣನ್‌ ಅವರನ್ನು 10 ವರ್ಷಗಳ ಹಿಂದೆ ಮದುವೆಯಾಗಿದ್ದು. ಈ ದಂಪತಿಗೆ 3 ವರ್ಷ 10 ತಿಂಗಳ ಅವಳಿ ಹೆಣ್ಣು ಮಕ್ಕಳಿದ್ದರು. ಗಂಡ ಹೆಂಡತಿ ಇಬ್ಬರೂ ಸಾಫ್ಟ್‌ವೇರ್‌ ಎಂಜಿನಿಯರ್ಸ್‌. ಪತಿ ವೆಂಕಟೇಶ್‌ ನಾರ್ವೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ರಮ್ಯಾ ಕೆಲ ವರ್ಷ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ ಆಮೇಲೆ ಕೆಲಸ ಬಿಟ್ಟಿದ್ದರು.

ರಮ್ಯಾ ಅವರು ಪತಿ ವೆಂಕಟೇಶ್‌ ಅವರ ತಂದೆ-ತಾಯಿ ಹಾಗೂ ಸಹೋದರ ವಾಜರಹಳ್ಳಿಯಲ್ಲಿ ನೆಲೆಸಿದ್ದಾರೆ. ಅವಳಿ ಮಕ್ಕಳ ಪೈಕಿ ಪ್ರೀತಿಕಾ ಬುದ್ದಿಮಾಂದ್ಯೆ ಮಾತು ಬರುತ್ತಿರಲಿಲ್ಲ. ಇದರಿಂದ ಬೇಸರಗೊಂಡಿದ್ದ ರಮ್ಯಾ ಪ್ರೀತಿಕಾಳ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪ್ರೀತಿಕಾಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾಳೆ, ಅಲ್ಲಿ ವೈದ್ಯರು ಮಗು ಮೃತಪಟ್ಟಿರುವುದಾಗಿ ಹೇಳಿದ್ದಾರೆ.

ನಂತರ ವಾಜರಹಳ್ಳಿಯಲ್ಲಿ ಇರುವ ಮೈದುನಗೆ ಕರೆ ಮಾಡಿ ಕೊಲೆ ಮಾಡಿರುವ ವಿಷಯ ಹೇಳಿದ್ದಾರೆ. ಕೂಡಲೇ ಆತ ಆಸ್ಪತ್ರೆಗೆ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆರೋಪಿ ರಮ್ಯಾ ವಿರುದ್ಧ ಕೊಲೆ ಪ್ರಕರಣ ದಾಖಲು ಮಾಡಿ, ಬಂಧಿಸಿ ಕ್ರಮ ಕೈಗೊಂಡಿದ್ದಾರೆ ಪೊಲೀಸರು.

ದೇಶವ್ಯಾಪಿ ಮರುಪರೀಕ್ಷೆ ನಡೆಸಿ ; ತಪ್ಪಿದರೆ 2024 ಬ್ಯಾಚಿನ ವೈದ್ಯರನ್ನು ಜನ ‘ಕಳ್ಳ’ ರೆಂದು ಕರೆದಾರು; ಪ್ರತಿಭಾವಂತ ವಿದ್ಯಾರ್ಥಿಗಳ ಆಗ್ರಹ !

You may also like

Leave a Comment