Relationship: ಪತ್ನಿ ಆದವಳಿಗೆ ಗಂಡನ ಪ್ರೀತಿ ತನಗೆ ಮಾತ್ರ ಸಿಗಬೇಕು ಅನ್ನೋದು ಆಕೆಯ ಸಹಜವಾದ ಬಯಕೆ ಆಗಿರುತ್ತದೆ. ಗಂಡನ ಪ್ರೀತಿ, ಮತ್ತು ಆಕರ್ಷಣೆ ಪತ್ನಿ ಕಡೆಗೆ ಇರಲು ಆಕೆ ಉತ್ತಮ ಅಡುಗೆ ಮಾಡುವುದು, ಗಂಡನಿಗೆ ಬೇಕಾದ ಸೇವೆಗಳನ್ನು ಮಾಡುವುದು, ಆತನಿಗೆ ಇಷ್ಟ ಆಗುವ ರೀತಿಯಲ್ಲಿ ಇರಲು ಪತ್ನಿ ಆದವಳು ನಾನಾ ಪ್ರಯತ್ನ ಮಾಡುವುದು ಇದೆ. ಒಟ್ಟಾರೆ ಗಂಡ ಹೆಂಡತಿ ಸಂಬಂಧ (Relationship) ಚೆನ್ನಾಗಿರಬೇಕು ಅಂತ ಏನೇನೋ ಮಾಡೊ ಜನರನ್ನ ನೋಡಿದ್ದೀರಿ. ಆದ್ರೆ ಇತ್ತೀಚಿಗೆ ಕಾಲ ಕೆಟ್ಟಿದೆಯೇ ಅಥವಾ ಜನರ ಬುದ್ಧಿ ಕೆಟ್ಟಿದೆಯೋ ಅರ್ಥ ಆಗುತ್ತಿಲ್ಲ. ಹೌದು, ಇಲ್ಲೊಬ್ಬ ಮಹಿಳೆ ಒಳಉಡುಪಿನ ವಶೀಕರಣ ಮಾಡೊದನ್ನು ಹೇಳಿಕೊಟ್ಟಿದ್ದಾರೆ ನೋಡಿ.
ಗಂಡ ತನ್ನ ಬಳಿಯೇ ಉಳಿಯಬೇಕು ಅನ್ನೋ ಹೆಂಗಸರು ತಮ್ಮ ಗಂಡನನ್ನು ವಶದಲ್ಲಿಡಲು ಹೆಂಗಸರು ಏನೇನೋ ಟ್ರೈ ಮಾಡ್ತಾರೆ. ಅದೇ ರೀತಿ
ಇದೀಗ ಸೋಶಿಯಲ್ ಮಿಡಿಯಾದಲ್ಲಿ ಒಂದು ವಿಡೀಯೋ ವೈರಲ್ (Viral Video) ಆಗುತ್ತಿದೆ. ಇದರಲ್ಲಿ ಮಹಿಳೆಯೊಬ್ಬರು ಗಂಡನ ಗಮನ ಹೆಂಡ್ತಿನ ಬಿಟ್ಟು ಬೇರೆ ಕಡೆ ಹೋಗದೇ ಇರಲು ಏನು ಮಾಡಬೇಕು ಅನ್ನೋದನ್ನು ಹೇಳಿದ್ದಾರೆ.
ನೀವು ಗಂಡನ ಇಂಟ್ರೆಸ್ಟ್ ಸದಾ ನಿಮ್ಮ ಮೇಲೆ ಇರಬೇಕು ಅಂತಾಂದ್ರೆ ಗಂಡನ ಇನ್ನರ್ ವೇರ್ ಜೊತೆಗೆ, ನಿಮ್ಮ ಇನ್ನರ್ ವೇರ್ ಸೇರಿಸಿ ಕಟ್ಟಬೇಕು. ಆದರೆ ಅದನ್ನು ಮನೆಯ ನೈಋತ್ಯ ದಿಕ್ಕಿನಲ್ಲಿ ಯಾರಿಗೂ ಕಾಣದಂತೆ ಇಡಬೇಕು. ಇದರಿಂದ ಗಂಡನ ಗಮನ ನಿಮ್ಮ ಮೇಲಿಂದ ಬೇರೆ ಕಡೆ ಹೋಗೋದೆ ಇಲ್ಲ ಅಂದಿದ್ದಾಳೆ.
ಹೀಗೆ ಒಬ್ಬ ಎಕ್ಸ್ ಪರ್ಟ್ ಮಹಿಳೆ ಹೇಳಿರುವ ವಿಡೀಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದೀಗ ವಿಡಿಯೋ ನೋಡಿ ಜನ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡ್ತಿದ್ದಾರೆ.
ಹೀಗೆಲ್ಲ ಆಗೋದಾದ್ರೆ ಎಷ್ಟೋ ಡಿವೋರ್ಸ್ ಕೇಸ್ ಗಳು ಕೋರ್ಟ್ ಮೆಟ್ಟಿಲೇರುತ್ತಿರಲಿಲ್ಲ ಅಂದಿದ್ದಾರೆ. ಇನ್ನೂ ಕೆಲವರು ನಿಮ್ಮ ಗಂಡ ನಿಮ್ಮ ಜೊತೆಗೆ ಇರಬೇಕು ಅಂತ, ನೀವು ಈ ರೀತಿ ಮಾಡೋದಾದ್ರೆ, ಅಂತಹ ಗಂಡನ ಜೊತೆ ಇರೋದೇ ವೇಸ್ಟ್. ಅವರನ್ನು ಬಿಡೋದೆ ಒಳ್ಳೆಯದು ಎಂದು ಹೇಳಿದ್ದಾರೆ.
ಇನ್ನು ಕೆಲವ್ರು ಚಡ್ಡಿ (underwear) ವಿಷ್ಯಕ್ಕೆ ಜಗಳ ಆಗಿ ಡಿವೋರ್ಸ್ ಆಗೋದು ಗ್ಯಾರಂಟಿ ಎಂದಿದ್ದಾರೆ. ಕೆಲವ್ರು ನೀವು ಇಷ್ಟು ದಿವಸ ಎಲ್ಲಿ ಇದ್ರಿ. ಎಂದು ಪ್ರಶ್ನೆ ಮಾಡಿದ್ದಾರೆ. ಈ ತರ ಎಲ್ಲಾ ಐಡಿಯಾ ಎಲ್ಲಿಂದ ಸಿಗುತ್ತೆ ನಿಮಗೆ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.
