Home » Actor Darshan: ದರ್ಶನ್‌, ಪವಿತ್ರಾ ಗೌಡಗೆ ಡಿಎನ್‌ಎ ಟೆಸ್ಟ್‌

Actor Darshan: ದರ್ಶನ್‌, ಪವಿತ್ರಾ ಗೌಡಗೆ ಡಿಎನ್‌ಎ ಟೆಸ್ಟ್‌

0 comments
Actor Darshan arrested in Murder

Actor Darshan ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್‌, ಮತ್ತು ಪವಿತ್ರ ಸೇರಿ ಒಟ್ಟು 9 ಆರೋಪಿಗಳ ಡಿಎನ್‌ಎ ಪರೀಕ್ಷೆ ಮಾಡಲಾಗಿದೆ.

ವಾಹನ ಸವಾರರಿಗೆ ಗುಡ್‌ ನ್ಯೂಸ್!ಇನ್ನೂ HSRP ನಂಬರ್‌ ಪ್ಲೇಟ್‌ ಅಳವಡಿಕೆ ಮಾಡದವರಿಗೆ ಕೊನೆಯದಾಗಿ ಗಡುವು ವಿಸ್ತರಣೆ!

9 ಆರೋಪಿಗಳ ಸ್ಯಾಂಪಲ್ಸ್‌ ಪಡೆದುಕೊಳ್ಳಲಾಗಿದ್ದು, ಆರೋಪಿಗಳ ರಕ್ತ ಮತ್ತು ಕೂದಲಿನ ಮಾದರಿಯನ್ನು ಸಂಗ್ರಹಿಸಲಾಗಿದೆ. ರೇಣುಕಾ ಸ್ವಾಮಿ ಹತ್ಯೆಯಾದ ಸ್ಥಳದಲ್ಲಿ ಕೂದಲು, ರಕ್ತ ಪತ್ತೆಯಾಗಿದ್ದು, ಇದರ ಜೊತೆ ಮ್ಯಾಚ್‌ ಆಗುತ್ತದೆಯೇ ಎಂಬುವುದನ್ನು ಪರೀಕ್ಷಿಸಲಾಗುತ್ತದೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈಗಾಗಲೇ ಕೂದಲು ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದೆ. ಅದನ್ನು ಇನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಒಂದು ವೇಳೆ ರೇಣುಕಾಸ್ವಾಮಿ ಕೊಲೆಯಾದ ಜಾಗದಲ್ಲಿ ದೊರಕಿದ ಕೂದಲು, ರಕ್ತದ ಮಾದರಿಗಳು ಮ್ಯಾಚ್‌ ಆದರೆ ಇದು ಪ್ರಮುಖ ಸಾಕ್ಷ್ಯ ಆಗಲಿದೆ. ಹೀಗಾಗಿ 9 ಆರೋಪಿಗಳ ಡಿಎನ್‌ಎ ಪರೀಕ್ಷೆ ಇಂದು ಮಾಡಿಸಲಾಗಿದೆ.

Kadaba: ಇಲಾಖೆ ಮಾಡಿದ ತಪ್ಪನ್ನು ತಿದ್ದುಪಡಿ ಮಾಡಲು ಮೂರು ತಿಂಗಳಿನಿಂದ ಸತಾಯಿಸುತ್ತಿರುವ ಕಡಬ ಸರ್ವೆ ಇಲಾಖೆಯ ಅಧಿಕಾರಿಗಳು

You may also like

Leave a Comment