Home » 7th Pay Commission ಜಾರಿ – ಸರ್ಕಾರದಿಂದ ಗುಡ್ ನ್ಯೂಸ್ !!

7th Pay Commission ಜಾರಿ – ಸರ್ಕಾರದಿಂದ ಗುಡ್ ನ್ಯೂಸ್ !!

1,155 comments
7th Pay Commission

7th Pay Commission: ಇತ್ತೀಚೆಗೆ ಸಿಎಂ(CM) ನೇತೃತ್ವದ ಸಂಪುಟ ಸಭೆಯಲ್ಲಿ ಏಳನೇ ವೇತನ ಆಯೋಗದ (7th Pay Commission) ಶಿಫಾರಸುಗಳ ಜಾರಿ ವಿಚಾರವಾಗಿ ಚರ್ಚೆ ನಡೆದರೂ ಯಾವುದೇ ನಿರ್ಣಯ ಹೊರಬೀಳದಿದ್ದದ್ದು ಸರ್ಕಾರಿ ನೌಕರರಿಗೆ ಭಾರೀ ನಿರಾಶೆ ಮೂಡಿಸಿತ್ತು. ಆದರೀಗ ಈ ಬೆನ್ನಲ್ಲೇ ಸರ್ಕಾರವು ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದು 7ನೇ ವೇತನ ಆಯೋಗ ಜಾರಿಗೆ ಎಲ್ಲಾ ಸಿದ್ದತೆ ನಡೆಸಿದೆ.

ಹೌದು, ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ನೇತೃತ್ವದಲ್ಲಿ ನಡೆದ ಸಚಿವ ಸಂಪುಟ(Cabinet Meeting)ಸಭೆಯಲ್ಲಿ ಈ ಕುರಿತಾಗಿ ಚರ್ಚೆ ನಡೆಸಲಾಗಿದ್ದು, ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ 7ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದರ ಸಂಪೂರ್ಣ ಅಧಿಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಹಿಸಲಾಗಿದೆ.

ಮನೆಯ ಅಲಂಕಾರವೇ ಅದೃಷ್ಟ ತರುತ್ತೆ! ಅದಕ್ಕಾಗಿ ಇಲ್ಲಿದೆ ಸುಲಭ ಮಾರ್ಗ!

ಎಷ್ಟು ಹೆಚ್ಚಾಗಬಹುದು ವೇತನ?
ಆಯೋಗದ ಶಿಫಾರಸಿನಂತೆ ಶೇಕಡ 25ರಷ್ಟು ವೇತನ ಹೆಚ್ಚಳ ಮಾಡಲು ಕೆಲವು ಸಚಿವರು ಸಲಹೆ ನೀಡಿದ್ದು, ಅಂತಿಮವಾಗಿ ಆಯೋಗದ ಶಿಫಾರಸು ಜಾರಿ ಮಾಡುವ ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ ಸಂಪುಟ ಸಭೆ ನೀಡಿದೆ. ಮುಖ್ಯಮಂತ್ರಿಗಳು ಶೇಕಡ 27ರಷ್ಟು ವೇತನ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಮೂಲಕ ಸರ್ಕಾರಿ ನೌಕರರಿಗೆ ಬಂಪರ್ ಲಾಟ್ರಿ ಹೊಡೆದಂತಾಗುತ್ತದೆ.

ಅಂದಹಾಗೆ ಸರ್ಕಾರಿ ನೌಕಕರು ಲೋಕಸಭಾ ಚುನಾವಣೆಗೂ(Parliament Election)ಮೊದಲೇ 7 ನೇ ವೇತನ ಆಯೋಗದ ಜಾರಿ ಕುರಿತು ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಿದ್ದು, ಸರ್ಕಾರದ ವಿರುದ್ಧ ಹಲವಾರು ಭಾರಿ ಹೋರಾಟವನ್ನೂ ಕೂಡ ನಡೆಸಿದ್ದರು. ಅಂತೆಯೇ ಚುನಾವಣೆ ಆರಂಭವಾಗುವ ಸಮಯದಲ್ಲಿ ಸಲ್ಲಿಕೆಯಾಗಿದ್ದ 7ನೇ ವೇತನ ಆಯೋಗದ ಶಿಫಾರಸುಗಳನ್ನು ಸ್ವೀಕರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಅವರು, ಕೂಲಂಕಶವಾಗಿ ಅಧ್ಯಯನ ಮಾಡಿ ಸಲಹೆ ನೀಡಲು ಹಣಕಾಸು ಇಲಾಖೆಗೆ ಸೂಚಿಸಿದ್ದರು. ಇದೀಗ ಅದು ಸಂಪುಟ ಸಭೆಯ ಮುಂದೆ ಚರ್ಚೆ ಆಗಿದ್ದು, ಜಾರಿಗೆ ಇನ್ನು ಮುಹೂರ್ತ ಫಿಕ್ಸ್ ಮಾಡುವುದು ಒಂದು ಬಾಕಿ ಉಳಿದಿದೆ.

Parliment Speaker: ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಬಿಜೆಪಿ ಸಂಸದ ಭರ್ತೃಹರಿ ಆಯ್ಕೆ !!

You may also like

Leave a Comment