Home » Tarun Sudheer: ನಿರ್ದೇಶಕ ತರುಣ್ ಸುಧೀರ್ ಗೆ ಕೂಡಿ ಬಂದ ಕಂಕಣಭಾಗ್ಯ; ಕೈ ಹಿಡಿಯೋ ನಟಿ ಯಾರು?

Tarun Sudheer: ನಿರ್ದೇಶಕ ತರುಣ್ ಸುಧೀರ್ ಗೆ ಕೂಡಿ ಬಂದ ಕಂಕಣಭಾಗ್ಯ; ಕೈ ಹಿಡಿಯೋ ನಟಿ ಯಾರು?

0 comments

Tarun Sudheer: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ತರುಣ್‌ ಸುಧೀರ್‌ (Tarun Sudheer) ಶೀಘ್ರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಸದ್ಯಕ್ಕೆ ಕಿರುತೆರೆಯ ಮಹಾನಟಿ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಮೊದಲು ನಟರಾಗಿದ್ದ ತರುಣ್‌ ಸುಧೀರ್‌ ಚೌಕ ಚಿತ್ರದ ಮೂಲಕ ನಿರ್ದೇಶಕರಾದರು. ಚೌಕ ಸೂಪರ್‌ ಹಿಟ್‌ ಆದ ಬಳಿಕ ನಟ ದರ್ಶನ್ ಜೊತೆ ಬ್ಯಾಕ್ ಟು ಬ್ಯಾಕ್ ಎರಡು ಹಿಟ್ ಸಿನಿಮಾಗಳನ್ನು ನೀಡಿದ್ದು, ಸದ್ಯ 4ನೇ ಸಿನಿಮಾದ ತಯಾರಿಯಲ್ಲಿರುವ ತರುಣ್ ಸುಧೀರ್ ಮದುವೆಗೂ ಕೂಡ ತಯಾರಿ ನಡೆಸುತ್ತಿದ್ದಾರೆ ಎನ್ನುವ ಮಾತು ಹರಿದಾಡುತ್ತಿದೆ.

ಖಳನಟ ಸುಧೀರ್ ಹಾಗೂ ಮಾಲತಿ ಅವರ ಕಿರಿಯ ಪುತ್ರ ತರುಣ್ ಸುಧೀರ್ 40ರ ವಯಸ್ಸಿನ ಗಡಿಯಲ್ಲಿದ್ದಾರೆ. ಆದ್ರೆ ಈ ಹಿಂದೆ ಮದುವೆ ಬಗ್ಗೆ ಮಾತನಾಡಿದ್ದ ತರುಣ್ ಸುಧೀರ್. ಸದ್ಯಕ್ಕೆ ಮದುವೆ ಬಗ್ಗೆ ಆಲೋಚನೆ ಇಲ್ಲ, ಮದುವೆ ಆಗದೇ ನೆಮ್ಮದಿಯಾಗಿ ಇದ್ದೇನೆ ಎಂದು ಹೇಳುತ್ತಿದ್ದರು. ಆದರೆ ತಾಯಿ ಮಾಲತಿ ಮಾತ್ರ ಮಗನಿಗೆ ಮದುವೇ ಮಾಡಲೇ ಬೇಕು ಎಂದು ಹಠದಲ್ಲಿದ್ದರು. ಇದೀಗ ಮತ್ತೆ ತರುಣ್ ಸುಧೀರ್ ಮದುವೆ ಸುದ್ದಿ ಮುನ್ನೆಲೆಗೆ ಬಂದಿದ್ದು, ತೆರೆಮರೆಯಲ್ಲಿ ಮದುವೆ ಸಿದ್ಧತೆಗಳು ಕೂಡ ಶುರುವಾಗಿದೆ ಎನ್ನುವ ವದಂತಿ ಹರಿದಾಡುತ್ತಿದೆ.

ಆದ್ರೆ ತರುಣ್ ಸುಧೀರ್ ಮದುವೆ ಬಗ್ಗೆ ತನ್ನ ಆಪ್ತರಿಗೂ ಗೊತ್ತಿಲ್ಲ ಎನ್ನುತ್ತಿದ್ದು ಇನ್ನೂ ಕೆಲವರು ಖಚಿತವಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಮದುವೆನೇ ಬೇಡ ಎನ್ನುತ್ತಿದ್ದ ತರುಣ್‌ ಈಗ ಒಬ್ಬರು ಖ್ಯಾತ ನಟಿಯ ಕೈ ಹಿಡಿಯಲಿದ್ದಾರಂತೆ. ಹೌದು ನಟ, ನಿರ್ದೇಶಕ ತರುಣ್ ಸುಧೀರ್ ಕನ್ನಡ ಚಿತ್ರರಂಗದ ಖ್ಯಾತ ನಟಿ ಸೋನಾಲ್ ಮೊಂತೆರೊ ಅವರ ಕೈ ಹಿಡಿಯಲಿದ್ದಾರೆ ಎನ್ನುವ ಸುದ್ದಿ ಜೋರಾಗಿಯೇ ಕೇಳಿ ಬರುತ್ತಿದೆ. ಸೋನಾಲ್ ಮೊಂತೆರೊ ರಾಬರ್ಟ್‌ ಚಿತ್ರದಲ್ಲಿ ವಿನೋದ್‌ ಪ್ರಭಾಕರ್‌ ಜೋಡಿಯಾಗಿ ಕಾಣಿಸಿಕೊಂಡಿದ್ದರು.

ಸದ್ಯ ತರುಣ್ ಸುಧೀರ್ ಹಾಗೂ ಸೋನಲ್ ಆಗಸ್ಟ್ 10ರಂದು ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ಯಾವುದೇ ಅಧೀಕೃತ ಮಾಹಿತಿ ಹೊರ ಬಿದ್ದಿಲ್ಲ.

https://www.hosakannada.com/2024/06/23/pavitra-gowda-actor-darshan-is-de-boss-for-fans-%ca%bcsubba%ca%bc-for-pavitra-gowda/

You may also like

Leave a Comment