Home » Renukaswamy Murder Case: ರೇಣುಕಾ ಸ್ವಾಮಿ – ಪವಿತ್ರ ಗೌಡ ನಡುವೆ ನಡೆದ ಮೆಸೇಜ್ ಗಳು ಏನು ?! ತಿಳಿಯಲು ಇನ್ಸ್ಟಾಗ್ರಾಮ್ ಗೆ ಪತ್ರ ಬರೆದ ಪೋಲೀಸರು

Renukaswamy Murder Case: ರೇಣುಕಾ ಸ್ವಾಮಿ – ಪವಿತ್ರ ಗೌಡ ನಡುವೆ ನಡೆದ ಮೆಸೇಜ್ ಗಳು ಏನು ?! ತಿಳಿಯಲು ಇನ್ಸ್ಟಾಗ್ರಾಮ್ ಗೆ ಪತ್ರ ಬರೆದ ಪೋಲೀಸರು

0 comments
Renukaswamy Murder Case

Renukaswamy Murder Case: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣ (Renukaswamy Murder Case) ಇನ್ನೂ ಮುಗಿಯದ ಕತೆ ಆಗಿದೆ. ತನಿಖೆ ನಡೆಯುತ್ತಲೇ ಇದೆ. ಆರೋಪಿಗಳೆಲ್ಲಾ ಜೈಲು ಪಾಲಾಗಿದ್ದಾರೆ. ಈ ನಡುವೆ ರೇಣುಕಾ ಸ್ವಾಮಿ ಮತ್ತು ಪವಿತ್ರ ಗೌಡ (Pavitra Gouda) ನಡುವೆ ನಡೆದ ಸಂದೇಶಗಳೇನು ಎಂಬುದನ್ನು ಪತ್ತೆ ಹಚ್ಚಬೇಕಿದೆ.

Viral Video: ಸಾಕಿ ಸಲಹಿದ ಮಾವುತನನ್ನೇ ತುಳಿದು ಕೊಂದ ಆನೆ – ಭಯಾನಕ ವಿಡಿಯೋ ವೈರಲ್!!

ಹೌದು, ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದ್ದು ರೇಣುಕಾ ಸ್ವಾಮಿ ಮತ್ತು ಪವಿತ್ರ ಗೌಡಳ ನಡುವಿನ ಸಂದೇಶಗಳು. ರೇಣುಕಾಸ್ವಾಮಿ ಕೊಲೆ ನಡೆಯಲು ಪವಿತ್ರಾ ಗೌಡಗೆ ಕಳುಹಿಸಿದ್ದ ಅಶ್ಲೀಲ ಸಂದೇಶ ಎಂದು ತಿಳಿದುಬಂದಿತ್ತು. ಆದರೆ ಯಾವುದು ಸತ್ಯ, ಯಾವುದು ಸುಳ್ಳು ಎಂಬುದು ನೋಡಿದವರಿಲ್ಲ. ಹೀಗಾಗಿ ರೇಣುಕಾಸ್ವಾಮಿ-ಪವಿತ್ರಾ ಸಂದೇಶಗಳನ್ನು ವೀಕ್ಷಿಸಲು ಇನ್ಸ್ಟಾಗ್ರಾಂಗೆ(Instagram)ಪತ್ರ ಬರೆಯಲು ಪೊಲೀಸರು ಮುಂದಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ರೇಣುಕಾ ಸ್ವಾಮಿಯನ್ನು ಹತ್ಯೆ ಮಾಡಿದ ಬಳಿಕ ಹತ್ಯೆ ಮಾಡಿದ ಬಳಿಕ ಆತನ ಮೊಬೈಲ್‌ ಅನ್ನು ಸುಮನಹಳ್ಳಿ ಸಮೀಪದ ಮೋರಿಗೆ ಎಸೆದಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯಿಬಿಟ್ಟಿದ್ದರು. ಆಗಿನಿಂದ ಪೊಲೀಸರು ರೇಣುಕಾಸ್ವಾಮಿ ಫೋನ್‌ಗಾಗಿ ಸುಮನಹಳ್ಳಿಯ ಅಪಾರ್ಟ್‌ಮೆಂಟ್‌ ಬಳಿಯ ಮೋರಿಯಲ್ಲಿ ಹುಡುಕಾಟದಲ್ಲಿ ಕಾರ್ಯನಿರತರಾಗಿದ್ದರು. ಆದರೂ ರೇಣುಕಾಸ್ವಾಮಿ ಮೊಬೈಲ್‌ ಪತ್ತೆ ಆಗಿಲ್ಲ. ಆದರೆ ರೇಣುಕಾಸ್ವಾಮಿ ಮೊಬೈಲ್‌ ದತ್ತಾಂಶವನ್ನು ಪಡೆಯಬೇಕಿದೆ.

ಇದೀಗ ರೇಣುಕಾಸ್ವಾಮಿ ಹಾಗೂ ದರ್ಶನ್‌ ಸ್ನೇಹಿತೆ ಪವಿತ್ರಾ ಗೌಡ ನಡುವಿನ ಸಂದೇಶಗಳ ವಿವರ ನೀಡುವಂತೆ ಕೋರಿ ಇನ್‌ಸ್ಟಾಗ್ರಾಂಗೆ ಪತ್ರ ಬರೆಯಲು ಪೊಲೀಸರು ಮುಂದಾಗಿದ್ದಾರೆ. ನಟಿ ಪವಿತ್ರಾ ಗೌಡ ಫೋನ್‌ ವಶಪಡಿಸಿಕೊಂಡು ರಿಟ್ರೈವ್‌ ಮಾಡಲು ಎಫ್ಎಸ್‌ಎಲ್‌ಗೆ ಕಳುಹಿಸಲಾಗಿದೆಯಂತೆ !!

Paneer Fried Rice: ನೀವೂ ಸಹ ಸುಲಭ ಮತ್ತು ಅತೀ ಕಡಿಮೆ ಸಮಯದಲ್ಲಿ ಪನ್ನೀರ್ ಪ್ರೈಡ್ ರೈಸ್ ಮಾಡಿ!

You may also like

Leave a Comment