Mangalore Expert: ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರಿಸರ್ಚ್ ಈ ವರ್ಷ ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಮಿಹಿರ್ ಗಿರೀಶ್ ಕಾಮತ್ ಮತ್ತು ನಿಹಾರ್ ಎಸ್. ಆರ್ ರವರು ಸಾಮಾನ್ಯ ಮೆರಿಟ್ ವಿಭಾಗದಲ್ಲಿ ಕ್ರಮವಾಗಿ ಅಖಿಲ ಭಾರತ ರ್ಯಾಂಕ್ (AIR) 16 ಮತ್ತು 36 ನೆಯ ರಾಂಕ್ ಗಳಿಸಿದ್ದಾರೆ. ಐಸರ್ ಪರೀಕ್ಷೆಯು ಭಾರತದಲ್ಲಿ ಮುಂದಿನ ವಿಜ್ಞಾನಿಗಳನ್ನು ತಯಾರು ಮಾಡಲು ಗಳಿಸುವ ಪರೀಕ್ಷೆಯಾಗಿದೆ.
ಉತ್ತಮ ಗುಣಮಟ್ಟದ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆಯನ್ನು ಉತ್ತೇಜಿಸುವ ಉದ್ದೇಶದಿಂದ ಭಾರತ ಸರ್ಕಾರವು ದೇಶಾದ್ಯಂತ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳನ್ನು (IISERs) ಸ್ಥಾಪಿಸಿತು. ಈ ಸಂಸ್ಥೆಗಳು ಕೋಲ್ಕತ್ತಾ, ಪುಣೆ, ಬರ್ಹಾಂಪುರ, ಭೋಪಾಲ್, ಮೊಹಾಲಿ, ತಿರುವನಂತಪುರಂ ಮತ್ತು ತಿರುಪತಿಯಲ್ಲಿವೆ.
ಪ್ರತಿ IISER ವಿವಿಧ ವೈಜ್ಞಾನಿಕ ಕ್ಷೇತ್ರಗಳಲ್ಲಿ ಮುಂದುವರಿದ ಸಂಶೋಧನೆ ನಡೆಸುವುದರ ಜೊತೆಗೆ ವಿಜ್ಞಾನದಲ್ಲಿ ಸಮಗ್ರ ಪದವಿಪೂರ್ವ ಮತ್ತು ಸ್ನಾತಕೋತ್ತರ ಪದವಿಗಳನ್ನು ನೀಡುತ್ತದೆ. ಯುವ ಪ್ರತಿಭೆಗಳನ್ನು ಪೋಷಿಸುವಲ್ಲಿ ಮತ್ತು ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಮುನ್ನಡೆಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಾರೆ.
ಮಿಹಿರ್ ಕಾಮತ್ ಮತ್ತು ನಿಹಾರ್ ಎಸ್. ಆರ್ ಇದೀಗ ಈ ಪ್ರತಿಷ್ಠಿತ ಸಂಸ್ಥೆಗಳ ಪ್ರವೇಶಕ್ಕೆ ಆಯ್ಕೆಯಾಗಿದ್ದಾರೆ. ದೇಶಾದ್ಯಂತ 40,000ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದರು. ಕೇವಲ 1933 ಸೀಟುಗಳನ್ನು ಹೊಂದಿರುವ ಈ ಬಿಎಸ್ ಎಂಸ್ ಪದವಿಗಳ ಸೀಟು ಪಡೆಯುವ ಸ್ಪರ್ಧೆಯಲ್ಲಿ ಮಂಗಳೂರಿನ ಈ ಎರಡು ವಿದ್ಯಾರ್ಥಿಗಳು ಮುಂಚೂಣಿಯ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಎಕ್ಸ್ಪರ್ಟ್ ಕಾಲೇಜಿನ ನಿಹಾರ್ ಎಸ್. ಆರ್ ಮತ್ತು ಮಿಹಿರ್ ಕಾಮತ್ ಜಿಇಬಿ ಮತ್ತು ನೀಟ್ ವಿಭಾಗಗಳಲ್ಲಿ ಕೂಡ ಉತ್ತಮ ಸಾಧನೆ ಮಾಡಿದ್ದರು. ಜತೆಗೆ ನಿಹಾರ್ ಎಸ್. ಆರ್ ಎರಡು 1st ರಾಂಕ್ ಸಹಿತ ಸಿಇಟಿಯಲ್ಲಿ ಒಟ್ಟು 7 ಅಂಕ ಪಡೆದಿದ್ದರು.
ವಿದ್ಯಾರ್ಥಿಗಳು ವಿಜ್ಞಾನದಲ್ಲಿ ಸಂಶೋಧನೆ ಮಾಡಲು ಮತ್ತು ಆ ಮೂಲಕ ದೇಶವು ತನ್ನ ಪ್ರಗತಿಯ ಹಾದಿಯಲ್ಲಿ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಅನುವು ಮಾಡಿಕೊಡುವ ಉದ್ದೇಶದಿಂದ IISER ಅನ್ನು ಸ್ಥಾಪಿಸಲಾಗಿದೆ. IISER ನಿಂದ ಅನೇಕ ಸಂಶೋಧನಾ ಕೃತಿಗಳನ್ನು ಪ್ರಕಟಿಸಲಾಗಿದೆ ಮತ್ತು ಕಡಿಮೆ ಅವಧಿಯಲ್ಲಿ ಹೆಚ್ಚಿನ ಬೌದ್ಧಿಕ ಆಸ್ತಿಯನ್ನು ಪೇಟೆಂಟ್ ಮಾಡಲಾಗಿದೆ.
