Home » Subramanya: ಕುಡಿದು ತೂರಾಡುತ್ತಿದ್ದ ವ್ಯಕ್ತಿ- ಎತ್ತಿ ಬಿಸಾಡಿದ ಸುಬ್ರಹ್ಮಣ್ಯ ದೇವಾಲಯ ಆನೆ !!

Subramanya: ಕುಡಿದು ತೂರಾಡುತ್ತಿದ್ದ ವ್ಯಕ್ತಿ- ಎತ್ತಿ ಬಿಸಾಡಿದ ಸುಬ್ರಹ್ಮಣ್ಯ ದೇವಾಲಯ ಆನೆ !!

0 comments

Subramanya: ಕುಡಿದು ತೂರಾಡುತ್ತಿದ್ದ ವ್ಯಕ್ತಿಯನ್ನು ಕುಕ್ಕೆ ಸುಬ್ರಹ್ಮಣ್ಯ (Kukke Subramanya Temple) ದೇವಾಲಯದ ಆನೆ ಯಶಸ್ವಿನಿ (Elephant Yashaswini) ಎತ್ತಿ ಬಿಸಾಡಿದಂತ ಪ್ರಸಂಗ ನಡೆದಿದೆ.

ಹೌದು, ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ದೇವಳದ ಆನೆಯೊಂದಿಗೆ ಪೋಲೀಸರು ಫೋಟೋ ತೆಗೆಯುತ್ತಿದ್ದರು. ಈ ಸಂದರ್ಭದಲ್ಲಿ ಕುಡಿತದ ಮತ್ತಿನಲ್ಲಿದ್ದ ವ್ಯಕ್ತಿಯೋರ್ವ ಆನೆಯ ಎದುರು ಸಾಗಿದ್ದ. ವ್ಯಕ್ತಿಯನ್ನು‌ ನೋಡಿದ ಕೂಡಲೇ ಆನೆ ತನ್ನ ಸೊಂಡಿಲಿನಿಂದ ಎತ್ತಿ ಎಸೆದಿದೆ.

ವ್ಯಕ್ತಿ ಕುಡಿತದ ಮತ್ತಿನಲ್ಲೇ ತೂರಾಡಿಕೊಂಡು ಬಂದಿರೋದ್ರಿಂದಲೇ ಆನೆ ಕೋಪಗೊಂಡು ಎತ್ತಿ ಬಿಸಾಡಿದೆ ಎನ್ನಲಾಗಿತ್ತಿದೆ. ಅಂದಹಾಗೆ ಆನೆ ಎಸೆದ ರಭಸಕ್ಕೆ ವ್ಯಕ್ತಿ ನೆಲಕ್ಕೆ ಅಪ್ಪಳಿಸಿದ್ದಾನೆ. ಆದರೆ ಯಾವುದೇ ಗಾಯಗಳಾಗದೇ ಪಾರಾಗಿದ್ದಾನೆ ಈ ಆಸಾಮಿ.

 

You may also like

Leave a Comment