Home » Chandrashekharnath Swamiji: ಮುಖ್ಯಮಂತ್ರಿ ಸ್ಥಾನವನ್ನು ಡಿ ಕೆ ಶಿವಕುಮಾರ್’ಗೆ ಬಿಟ್ಟುಕೊಡಿ – ಸಿದ್ದರಾಮಯ್ಯ ಎದುರಲ್ಲೇ ಪ್ರಬಲ ಸ್ವಾಮೀಜಿ ಆಗ್ರಹ !!

Chandrashekharnath Swamiji: ಮುಖ್ಯಮಂತ್ರಿ ಸ್ಥಾನವನ್ನು ಡಿ ಕೆ ಶಿವಕುಮಾರ್’ಗೆ ಬಿಟ್ಟುಕೊಡಿ – ಸಿದ್ದರಾಮಯ್ಯ ಎದುರಲ್ಲೇ ಪ್ರಬಲ ಸ್ವಾಮೀಜಿ ಆಗ್ರಹ !!

1,152 comments
Chandrashekharnath Swamiji

Chandrashekharnath Swamiji: ರಾಜ್ಯದಲ್ಲಿ ಸಿಎಂ(CM) ಬದಲಾವಣೆ ವಿಚಾರ ಆಗಾಗ ಚರ್ಚೆಗೆ ಬರುತ್ತಿದೆ. ಕಾಂಗ್ರೆಸ್ ಸರ್ಕಾರ(Congress Government) ಅಧಿಕಾರಕ್ಕೆ ಬಂದಾಗಿನಿಂದ ಈ ವಿಚಾರ ಜೀವಂತವಾಗಿದೆ. ಸಿದ್ದರಾಮಯ್ಯನವರು(CM Siddaramaiah)ಎರಡೂವರೆ ವರ್ಷ ಮಾತ್ರ, ಮುಂದೆ ಡಿ ಕೆ ಶಿವಕುಮಾರ್(D K Shivkumar) ಈ ಪಟ್ಟ ಅಲಂಕರಿಸುತ್ತಾರೆ ಎಂಬುದು ಇದರ ತರ್ಕ.

Middle Birth Collapse: ರೈಲಿನ ಮಿಡಲ್‌ ಬರ್ತ್‌ ಕುಸಿದು ಪ್ರಯಾಣಿಕ ಸಾವು

ಇದುವರೆಗೂ ರಾಜಕೀಯ ವ್ಯಕ್ತಿಗಳು, ಸಿದ್ದು-ಡಿಕೆಶಿ ಬಣದ ನಾಯಕರು ಈ ವಿಚಾರವಾಗೆ ಚರ್ಚೆ ಮಾಡುತ್ತಿದ್ದರು. ಆದರೀಗ ಮಠದ ಸ್ವಾಮಿಗಳು ಕೂಡ ಈ ಕೂಗನ್ನು ಜೋರು ಮಾಡುತ್ತಿದ್ದಾರೆ. ಅಚ್ಚರಿ ಎಂಬಂತೆ ಕಾರ್ಯಕ್ರಮವೊಂದರಲ್ಲಿ ನಾಡಿನ ಹಿರಿಯ ಹಾಗೂ ಪ್ರಬಲ ಸ್ವಾಮೀಜಿಯೊಬ್ಬರು ಸಿದ್ದರಾಮಯ್ಯ ಎದರುದಲ್ಲೇ ಮುಖ್ಯಮಂತ್ರಿ ಸ್ಥಾನವನ್ನು ಡಿ ಕೆ ಶಿವಕುಮಾರ್ ಅವರಿಗೆ ಬಿಟ್ಟುಕೊಡಿ ಎಂದು ಆಗ್ರಹಿಸಿದ್ದಾರೆ.

ಹೌದು, ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ 515 ನೇ ಜಯಂತೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ (Chandrashekharnath Swamiji) ಅವರು ಸಿದ್ದರಾಮಯ್ಯನವರ ಮುಂದೆಯೇ ಡಿ.ಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು ಎಂದು ಹೇಳಿದ್ದಾರೆ.

ಅಲ್ಲದೆ ಸಿದ್ದರಾಮಯ್ಯನವರು ಮನಸ್ಸು ಮಾಡಿದರೆ ಮಾತ್ರ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲು ಸಾಧ್ಯ. ಈಗಾಗಲೇ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿ ಅನುಭವ ಹೊಂದಿದ್ದಾರೆ. ನಮ್ಮ ಸಮುದಾಯದ ಡಿ.ಕೆ ಶಿವಕುಮಾರ್ ಅವರಿಗೆ ಮುಂದೆ ಅವಕಾಶ ಮಾಡಿಕೊಡಲಿ ಎಂದು ಹೇಳಿದರು. ಆದರೆ ಅಚ್ಚರಿ ಏನಂದ್ರೆ ಸ್ವಾಮೀಜಿ ಸಿಎಂ ಸ್ಥಾನ ಬಿಟ್ಟುಕೊಡಿ ಎಂದು ಹೇಳುವಾಗ ಸಿಎಂ ಹಾಗೂ ಡಿಸಿಎಂ ಅಕ್ಕಪಕ್ಕದಲ್ಲೆ ಮೌನವಾಗಿ ಕುಳಿತಿದ್ದರು.

ಸಿದ್ದರಾಮಯ್ಯ ಗರಂ:
ಮುಖ್ಯಮಂತ್ರಿ ಸ್ಥಾನವನ್ನು ಡಿಕೆ ಶಿವಕುಮಾರ್ (DK Shivakumar) ಅವರಿಗೆ ಬಿಟ್ಟುಕೊಡಬೇಕು ಎಂಬ ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ (Chandrashekarnath Swamiji) ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು ಸಿಎಂ ಸ್ಥಾನ ಹೈಕಮಾಂಡ್ ತೀರ್ಮಾನ ಮಾಡುತ್ತೆ ಸ್ವಾಮೀಜಿ ಅವರಲ್ಲ ಎಂದು ಗರಂ ಆದರು.

Urolagnia: ಈಕೆಯ ಗಂಡನಿಗೆ ವೇಶ್ಯೆಯರು ಮೂತ್ರ ಮಾಡೋದನ್ನು ನೋಡೋ ಅಭ್ಯಾಸವಂತೆ, ಅದಕ್ಕಾಗೆ ದುಡ್ಡು ಕೊಟ್ಟು ಹೋಗ್ತಾನಂತೆ – ಯಪ್ಪಾ.. ಏನಿದು ‘ಮೂತ್ರ ಕಾಮ’ !!

You may also like

Leave a Comment