Home » Relationship: ಮದುವೆಯಾಗಿ ವರ್ಷ ಕಳೆದ್ರು ಫಸ್ಟ್‌ನೈಟ್‌ಗೆ ಒಪ್ಪದ ಪತಿ! ಕೊನೆಗೂ ಬಯಲಾಯ್ತು ರಹಸ್ಯ!

Relationship: ಮದುವೆಯಾಗಿ ವರ್ಷ ಕಳೆದ್ರು ಫಸ್ಟ್‌ನೈಟ್‌ಗೆ ಒಪ್ಪದ ಪತಿ! ಕೊನೆಗೂ ಬಯಲಾಯ್ತು ರಹಸ್ಯ!

0 comments
Relationship

Relationship: ಮದುವೆಯಾದ ದಂಪತಿಗಳಿಗೆ ತಮ್ಮ ಹೊಸ ಜೀವನದ ಬಗ್ಗೆ ಹಲವಾರು ಕನಸುಗಳು ಇರುತ್ತದೆ. ಆದ್ರೆ ಕೆಲವರ ವೈವಾಹಿಕ ಜೀವನದಲ್ಲಿ ತಾವು ಊಹಿಸದಂತ ಘಟನೆಗಳು ನಡೆದು ಹೋಗುತ್ತದೆ. ಹೌದು, ಇಲ್ಲೊಬ್ಬಳ ಕಥೆ ಹಾಗೆಯೇ ಆಗಿದೆ.

Financial Deadlines: ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ನಿಯಮದಲ್ಲಿ ಪರಿಷ್ಕರಣೆ; ಶುಲ್ಕ ಹೆಚ್ಚಳ ಇನ್ನಿತರ 6 ಮುಖ್ಯ ಹಣಕಾಸು ಡೆಡ್‌ಲೈನ್‌ಗಳು ಇಂದಿನಿಂದಲೇ ಜಾರಿ

ಉತ್ತರಪ್ರದೇಶದ ಗೊರಖ್‌ಪುರ ಜಿಲ್ಲೆಯ ಕೈಂಪಿರಗಂಜ್ ನ ಯುವತಿಯ ಮದುವೆ ಅದ್ಧೂರಿಯಾಗಿ ಖಾಸಗಿ ಶಾಲೆಯ ಶಿಕ್ಷಕನ ಜೊತೆ ನಡೆದಿತ್ತು. ಆದ್ರೆ ಮದುವೆಯಾಗಿ ವರ್ಷ ಕಳೆದರು ಪತ್ನಿ ಜೊತೆ ಸಂಬಂಧ ಬೆಳೆಸಲು ಪತಿ ನಿರಾಕರಿಸುತ್ತಿದ್ದನು. ಒಂದು ವೇಳೆ ಪತ್ನಿಯೇ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ರೆ ಏನಾದರೂ ಹೊಸ ಹೊಸ ನೆಪ ಹೇಳಿ ದೂರ ಆಗುತ್ತಿದ್ದನು. ಒಟ್ಟಿನಲ್ಲಿ ಯಾವಾಗಲೂ ಏನಾದ್ರೂ ಕಾರಣಗಳನ್ನು ನೀಡಿ ಫಸ್ಟ್‌ನೈಟ್‌ಗೆ ಪತಿ ನಿರಾಕರಿಸುತ್ತಾನೆ ಎಂದು  ನಿರಾಸೆಯಾದ ಮಹಿಳೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.

ಒಂದು ದಿನ ಪತ್ನಿ ದೈಹಿಕ ಸಂಪರ್ಕ (Relationship) ಹೊಂದಲು ಗಂಡನಿಗೆ ಒತ್ತಾಯಿಸಿದ್ದಾರೆ. ಇದರಿಂದ ಕೋಪಗೊಂಡ ಗಂಡ ರಾತ್ರಿ ಸುಮಾರು 11 ಗಂಟೆಗೆ ಪತ್ನಿಯನ್ನು ತವರುಮನೆಗೆ ಕಳುಹಿಸಿದ್ದಾನೆ. ನಂತರ ಕುಟುಂಬಸ್ಥರ ಸಲಹೆಯ ಮೇರೆಗೆ ಗುಲರಿಹಾ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಕರೆಸಿ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.

ವಿಚಾರಣೆ ವೇಳೆ ಪತಿಗೆ ಏನಾದ್ರೂ ಚಿಕಿತ್ಸೆ ಅಗತ್ಯವಿದ್ರೆ ಕೊಡಿಸೋಣ ಎಂದು ಮಾತನಾಡಿದಾಗ, ಆಗ ನಾನು ಸಲಿಂಗಿ ಎಂದು ಹೇಳಿಕೊಂಡಿದ್ದು ಅಲ್ಲದೇ ಪತ್ನಿಯ ಚಾರಿತ್ರ್ಯದ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾನೆ.

Belthangady: ನಾಪತ್ತೆಯಾಗಿದ್ದ ಬೆಳ್ತಂಗಡಿ ಆಟೋ ಚಾಲಕ – ಕಾರ್ಕಳದಲ್ಲಿ ಶವವಾಗಿ ಪತ್ತೆ

You may also like

Leave a Comment