Home » Bhushi Dam: ನೀರಿನ ರಭಸಕ್ಕೆ ಕೊಚ್ಚಿ ಹೋದ ಕುಟುಂಬ! ಮನಕಲಕುವ ವಿಡಿಯೋ ವೈರಲ್

Bhushi Dam: ನೀರಿನ ರಭಸಕ್ಕೆ ಕೊಚ್ಚಿ ಹೋದ ಕುಟುಂಬ! ಮನಕಲಕುವ ವಿಡಿಯೋ ವೈರಲ್

2 comments
Bhushi Dam

Bhushi Dam: ಲೋನಾವಾಲಾದ (Lonavala) ಭೂಶಿ ಅಣೆಕಟ್ಟಿನ (Bhushi Dam) ನೀರಿನಲ್ಲಿ ನಾಲ್ವರು ಮಕ್ಕಳು ಮತ್ತು ಮಹಿಳೆ ಸೇರಿದಂತೆ ಐದು ಜನರು ನೀರಿನಲ್ಲಿ ಸಿಲುಕಿ ಸಾವನ್ನಪ್ಪಿದ್ದು, ಇನ್ನೂ ಐವರು ಈಜಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬೆಳಕಿಗೆ ಬಂದಿದೆ.

Celebrities Body Parts Insurance: ಯಾವೆಲ್ಲ ಸೆಲಬ್ರಿಟಿಗಳು ತಮ್ಮ ಖಾಸಗಿ ಭಾಗಗಳಿಗೆ ವಿಮೆ ಮಾಡಿಸಿಕೊಂಡಿದ್ದಾರೆ? ಇಲ್ಲಿದೆ ಸಂಪೂರ್ಣ ವಿವರ

ಭಾನುವಾರ  ಪುಣೆಯ ಹಡಪ್ಸರ್‌ನ ಲಿಯಾಕತ್ ಅನ್ಸಾರಿ ಮತ್ತು ಯೂನಸ್ ಖಾನ್ ಅವರ ಕುಟುಂಬ ಸದಸ್ಯರು ಭೂಶಿ ಅಣೆಕಟ್ಟಿಗೆ ಭೇಟಿ ನೀಡಿದ್ದರು. ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಏಕಾಏಕಿ ನೀರಿನ ಮಟ್ಟ ಹೆಚ್ಚಾದ ಪರಿಣಾಮ 10 ಮಂದಿ ಕುಟುಂಬದವರು ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಈ ಪೈಕಿ ಐವರು ಈಜಿ ಪ್ರಾಣ ಕಾಪಾಡಿಕೊಂಡಿದ್ದು, 5 ಮಂದಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಘಟನೆಯ ಸಂದರ್ಭದಲ್ಲಿ ಇನ್ನಷ್ಟು ಪ್ರವಾಸಿಗಳು ಈ ಘಟನೆಗೆ ಪ್ರತ್ಯಕ್ಷ ದರ್ಶಿಗಳಿದ್ದು ಮನಕಲುಕವ ಘಟನೆಯನ್ನು ವಿಡಿಯೋ ಮಾಡಿದ್ದಾರೆ. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಮಾಹಿತಿಯ ಪ್ರಕಾರ, ಮೃತರನ್ನು ಸಹಿಸ್ತಾ ಲಿಯಾಕತ್ ಅನ್ಸಾರಿ (36), ಅಮಿಮಾ ಆದಿಲ್ ಅನ್ಸಾರಿ (13), ಉಮೇರಾ ಅಲಿಯಾಸ್ ಸಲ್ಮಾನ್ ಆದಿಲ್ ಅನ್ಸಾರಿ (8) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇನ್ನೂ ಇಬ್ಬರು ಕಾಣೆಯಾಗಿದ್ದಾರೆ. ನಾಪತ್ತೆಯಾದವರನ್ನು ಅದ್ನಾನ್ ಶಾಬತ್ ಅನ್ಸಾರಿ (4), ಮತ್ತು ಮರಿಯಾ ಅನ್ಸಾರಿ (9) ಎಂದು ಗುರುತಿಸಲಾಗಿದ್ದು, ಇಂದು (ಸೋಮವಾರ) ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಸದ್ಯ ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳದ ಸೇವೆಗಳು, ಶಿವದುರ್ಗ ಮಿತ್ರ ಮಂಡಲ್, ಆಪಾದ ಮಿತ್ರ ಮಾವಲ್ ಮತ್ತು ವನ್ಯ ಜೀವ್ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ದಿನದ ಅಂತ್ಯದ ವೇಳೆಗೆ, ಅಧಿಕಾರಿಗಳು ಮೂರು ಮೃತ ದೇಹಗಳನ್ನು ಹೊರತೆಗೆದಿದ್ದಾರೆ. ಇನ್ನೂ ಇಬ್ಬರಿಗಾಗಿ ಹುಡುಕಾಟ ಮುಂದುವರಿದಿದೆ.

ಈ ಪ್ರದೇಶದಲ್ಲಿ ಮುಂಗಾರು ಪ್ರಾರಂಭವಾದ ನಂತರ, ಭೂಶಿ ಅಣೆಕಟ್ಟು, ಘುಬಾದ್ ತಲಾಬ್, ಟಾಟಾ ಅಣೆಕಟ್ಟು, ತುಂಗರ್ಲಿ ಅಣೆಕಟ್ಟು, ರಾಜ್ಮಾಚಿ ಪಾಯಿಂಟ್, ಕುನೆಗಾಂವ್, ಕುರ್ವಂಡೆ ಪಾಯಿಂಟ್‌ಗಳಿಗೆ ಭೇಟಿ ನೀಡುವಾಗ ಪ್ರವಾಸಿಗರು ಜಾಗರೂಕರಾಗಿರಲು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Kidnap: 16 ರ ಹರೆಯದ ಅನ್ಯಧರ್ಮದ ಬಾಲಕಿ-ಹಿಂದೂ ಯುವಕ ನಾಪತ್ತೆ; ದೂರು ದಾಖಲು

You may also like

Leave a Comment