Home » Cricket: ಭಾರತಕ್ಕೆ ಕ್ರಿಕೆಟ್‌ ಒಂದು ಆಟ – ಪಾಕಿಸ್ತಾನಕ್ಕೆ ಅದು `ಕ್ರಿಕೆಟ್ ಜಿಹಾದ್’ ಆಗಿದೆ! – ನ್ಯಾಯವಾದಿ ವಿನೀತ್ ಜಿಂದಾಲ್

Cricket: ಭಾರತಕ್ಕೆ ಕ್ರಿಕೆಟ್‌ ಒಂದು ಆಟ – ಪಾಕಿಸ್ತಾನಕ್ಕೆ ಅದು `ಕ್ರಿಕೆಟ್ ಜಿಹಾದ್’ ಆಗಿದೆ! – ನ್ಯಾಯವಾದಿ ವಿನೀತ್ ಜಿಂದಾಲ್

1,241 comments
Cricket

Cricket: ಭಾರತೀಯರು ತಿಳಿದುಕೊಂಡಿರುವಂತೆ ಕ್ರಿಕೆಟ್ (Cricket) ಆಟಕ್ಕೆ ಒಂದು ಒಳ್ಳೆಯ ಇತಿಹಾಸವಿದೆ. ಪ್ರಪಂಚದೆಲ್ಲೆಡೆ ಕ್ರಿಕೆಟ್ ಕ್ರೀಡೆಯಲ್ಲಿ ಭಾರತ ತನ್ನ ಛಾಪನ್ನು ಉಳಿಸಿಕೊಂಡು ಬಂದಿದೆ. ಇನ್ನು ಹತ್ತು ಹಲವಾರು ಪಾಸಿಟಿವ್ ಕಥೆಗಳಿವೆ. ಆದರೆ ಇದರ ಹೊರತು ಕ್ರಿಕೆಟ್ ಬಗೆಗಿನ ಚಿಂತನೆ ಮತ್ತೊಂದು ಇದೆ ಅನ್ನೋದನ್ನು ಒಬ್ಬ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯಗಳ ನ್ಯಾಯವಾದಿ ಹೇಳಿದ್ದಾರೆ.

Reels And Short Videos: ರೀಲ್ಸ್ ಕ್ರೇಜಿನಿಂದ ಬಸ್ ಸ್ಟಾಂಡಿನಲ್ಲಿ ಬೆತ್ತಲಾದ ಯುವಕ – ಮುಂದೆ ಏನಾಯಿತೆಂದು ನೀವೆ ನೋಡಿ

ಈ ಮೊದಲು ಪಾಕಿಸ್ತಾನದ ಮಾಜಿ ಕ್ರಿಕೆಟ ಕ್ಯಾಪ್ಟನ್ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಇವರು, `ಭಾರತಕ್ಕಾಗಿ ಕ್ರಿಕೆಟ್ ಆಟವಾಗಿರಬಹುದು; ಆದರೆ ನಮಗಾಗಿ ಅದು ಜಿಹಾದ್ ಆಗಿದೆ’, ಎಂದಿದ್ದರು. ಇದರಿಂದ ಜಗತ್ತಿನಲ್ಲಿ `ಕ್ರಿಕೆಟ್ ಜಿಹಾದ್’ ಅಸ್ತಿತ್ವದಲ್ಲಿ ಇದೆ, ಎಂದು ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯಗಳ ನ್ಯಾಯವಾದಿ ವಿನೀತ ಜಿಂದಾಲ್ ಇವರು ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ , `ಕ್ರಿಕೆಟ್ ಜಿಹಾದ’ ವಿರುದ್ಧ ಮಾಡಿರುವ ನ್ಯಾಯಾಂಗ ಕಾರ್ಯ’, ಈ ವಿಷಯದ ಬಗ್ಗೆ ಮಾತನಾಡುವಾಗ ಹೇಳಿದ್ದಾರೆ.

ಹೌದು, ‘ಕ್ರಿಕೆಟ್ ಜಿಹಾದ್’  ಅನ್ನು ಇನ್ನಷ್ಟು ಸ್ಪಷ್ಟ ಪಡಿಸಿದ ವಿನೀತ ಜಿಂದಾಲ್ ಇವರು, ‘1978 ರಲ್ಲಿ ಭಾರತ ಪಾಕಿಸ್ತಾನದ ನಡುವೆ ನಡೆದ ಹಾಕಿ ಪಂದ್ಯದಲ್ಲಿ ಪಾಕಿಸ್ತಾನವು ಗೆದ್ದ ನಂತರ ಅಲ್ಲಿಯ ಆಟಗಾರರು ಮೈದಾನದಲ್ಲಿ ಸಾಮೂಹಿಕ ನಮಾಜು ಪಠಣ ಮಾಡಿದ್ದರು ಮತ್ತು `ನಾವು ಹಿಂದೂಗಳನ್ನು ಸೋಲಿಸಿದ್ದೇವೆ’, ಎಂದು ಹೇಳಿದ್ದರು. ಇನ್ನು ಇತ್ತೀಚಿಗೆ ಪಾಕಿಸ್ತಾನದ ಓರ್ವ ಬ್ಯಾಟ್ಸ್ಮನ್ ಅವನ ಶತಕ ಪ್ಯಾಲೆಸ್ಟೈನ್ ಗೆ ಅರ್ಪಿಸಿದ್ದನು ಹಾಗೂ ಹಿಂದೆ ವೆಸ್ಟ್ ಇಂಡೀಸ್‌ ಜನಪ್ರಿಯ ಬ್ಯಾಟ್ಸ್ಮನ್ ಬ್ರೈನ್  ಲಾರಾ ಇವರಿಗೆ ಪಾಕಿಸ್ತಾನದ ಆಟಗಾರರು ಇಸ್ಲಾಂ ಸ್ವೀಕರಿಸಲು ಹೇಳಿದ್ದರು. ಈ ರೀತಿ ಪಾಕಿಸ್ತಾನವು ನಿರಂತರ ಕ್ರಿಕೆಟರ್ ಜಿಹಾದಿಗೆ ಪ್ರೋತ್ಸಾಹ ನೀಡುತ್ತಿದೆ.

ಒಟ್ಟಿನಲ್ಲಿ ಕ್ರಿಕೆಟ್ ಆಟವು ಎಷ್ಟು ವ್ಯಾವಹಾರಿಕರಣವಾಗಿದೆ ಎಂದರೆ, ಈ ಜಿಹಾದನ್ನು ಅಂತರಾಷ್ಟ್ರೀಯ ಕ್ರಿಕೆಟ್ ಸಂಘಟನೆ ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ. ಈ ಜಿಹಾದ್ ನಿಲ್ಲಿಸುವುದಕ್ಕಾಗಿ ನಾನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್ ಸಂಘಟನೆ ಜೊತೆಗೆ ಪತ್ರ ವ್ಯವಹಾರ ನಡೆಸಿದ್ದೇನೆ ಎಂದು ವಿನೀತ ಜಿಂದಾಲ್ ಸ್ಪಷ್ಟಪಡಿಸಿದ್ದಾರೆ.

ಅದಲ್ಲದೆ ಈಗಾಗಲೇ 2023 ರಲ್ಲಿ ವಿಶ್ವಕಪ್ ಪಂದ್ಯದ ವೇಳೆ  ಪಾಕಿಸ್ತಾನದ ಆಂಕರ್ ಜೈನಬ್ ಅಬ್ಬಾಸ್ ಭಾರತಕ್ಕೆ ಬಂದಿದ್ದ ಸಮಯದಲ್ಲಿ ಆಕೆ ಹಿಂದೂಗಳ ದೇವತೆಗಳು ಮತ್ತು ಸಚಿನ್ ತೆಂಡೂಲ್ಕರ್ ಇವರ ವಿರುದ್ಧ ಅವಮಾನಕಾರಿಯಾಗಿ ಟೀಕೆ ಮಾಡಿದ್ದಳು. ಅದರ ವಿರುದ್ಧ ನಾನು ದೆಹಲಿಯಲ್ಲಿ ಸೈಬರ್ ದೂರು ದಾಖಲಿಸಿದೆ. ಅನಂತರ ಜೈನಬ್ ಹೆದರಿ ದುಬೈಗೆ ಪಲಾಯನ ಮಾಡಿದಳು. ತಪ್ಪು ಮಾಡಿದ ಭಯದಲ್ಲಿ ಆಕೆ ಓಡಿ ಹೋಗಿದ್ದು ಸತ್ಯ! ಇನ್ನು ಆ ಸಮಯದಲ್ಲಿ ಓರ್ವ ಕ್ರಿಕೆಟ್ ಆಟಗಾರನು ಮೈದಾನದಲ್ಲಿ ನಮಾಜು ಪಠಣ ಮಾಡಿದ್ದನು. ಚಪ್ಪಲಿ ಧರಿಸಿ ನಮಾಜು ಪಠಣ ಮಾಡುವುದು ಇಸ್ಲಾಂ ವಿರೋಧಿ ಆಗಿದ್ದರು ಕೂಡ ಅವನ ಜನರು ಇದನ್ನು ನಿರ್ಲಕ್ಷಿಸಿದರು. ಇದರಿಂದ ಮೈದಾನದಲ್ಲಿ ನಮಾಜು  ಪಠಣ ಮಾಡುವುದರ ಹಿಂದಿನ ಉದ್ದೇಶ ಇಸ್ಲಾಮಿನ ಪ್ರಚಾರ ಮಾಡುವುದೇ ಆಗಿದೆ , ಎಂದು ನ್ಯಾಯವಾದಿ ವಿನೀತ ಜಿಂದಾಲ್ ಅವರು ಹೇಳಿದ್ದಾರೆ.

Rahul Gandhi: ನನಗೆ ಶೇಕ್ ಹ್ಯಾಂಡ್ ಮಾತ್ರ ಕೊಟ್ರಿ, ಮೋದಿಗೆ ತಲೆಬಾಗಿ ನಮಸ್ಕರಿಸಿದ್ರಿ, ಯಾಕೆ ಎಂದ ರಾಹುಲ್ ಗೆ ಮುಟ್ಟಿನೋಡುವಂತ ಉತ್ತರ ಕೊಟ್ಟ ಸ್ಪೀಕರ್ !!

C

 

You may also like

Leave a Comment