Home » Karthik Mahesh: ʼಡೆವಿಲ್‌ʼ ಸಿನಿಮಾದಲ್ಲಿ ಕಾರ್ತಿಕ್‌ ನಟಿಸುತ್ತಿದ್ದಾರಾ?

Karthik Mahesh: ʼಡೆವಿಲ್‌ʼ ಸಿನಿಮಾದಲ್ಲಿ ಕಾರ್ತಿಕ್‌ ನಟಿಸುತ್ತಿದ್ದಾರಾ?

0 comments
Karthik Mahesh

Kartik Mahesh: ಕನ್ನಡ ಬಿಗ್‌ಬಾಸ್‌ ಸೀಸನ್‌ -10 ರ ವಿಜೇತರಾದ ಕಾರ್ತಿಕ್‌ ಮಹೇಶ್‌ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹಲವಾರು ವಿಷಯಗಳನ್ನು ತೆರೆದಿಟ್ಟಿದ್ದಾರೆ.

ತನಗೇ ರೆಸ್ಟೋರೆಂಟ್‌ ಮಾಡುವ ಆಸೆ ನನಗೆ ಇದೆ. ಆದರೆ ಈಗ ಎರಡು ದೋಣಿಯ ಮೇಲೆ ಕಾಲಿಡೋಕೆ ಇಷ್ಟವಿಲ್ಲ. ಈಗ ನನ್ನ ಒಂದೇ ಉದ್ದೇಶ ಸಿನಿಮಾ ಮಾಡೋದು. ಬಿಗ್‌ಬಾಸ್‌ನಲ್ಲಿ ಗೆದ್ದ ಕಾರು ಇನ್ನೂ ಕಾರ್ತಿಕ್‌ ಕೈಗೆ ದೊರಕಿಲ್ಲ. ನಾನು ಕಾಯುತ್ತಿದ್ದೀನಿ ಎಂದು ಹೇಳಿದ್ದಾರೆ.

ವಿನಯ್‌ ಅವರು ಡೆವಿಲ್‌ ಸಿನಿಮಾದಲ್ಲಿ ನಟಿಸುತ್ತಿದ್ದು, ಕಾರ್ತಿಕ್‌ ಮಹೇಶ್‌ ಅವರು ಕೂಡಾ ಈ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದೀರಾ ಎಂಬ ಪ್ರಶ್ನೆಗೆ ಇಲ್ಲ ನಾನು ಅದರಲ್ಲಿ ನಟಿಸುತ್ತಿಲ್ಲ ಎಂಬ ಉತ್ತರ ಕೊಟ್ಟಿದ್ದಾರೆ.

ಭಾರತದ ಲೆವೆಲ್‌ ಗೆ ಸಿನಿಮಾವನ್ನು ನೆಕ್ಸ್ಟ್‌ ಲೆವಲ್‌ಗೆ ತೆಗೆದುಕೊಂಡು ಹೋಗಬೇಕೆನ್ನುವುದು ನನ್ನ ಡ್ರೀಮ್‌. ಕನ್ನಡದಲ್ಲೇ ಒಳ್ಳೊಳ್ಳೆ ಸ್ಕ್ರಿಪ್ಟ್‌ ಬಂದಿದೆ. ನನ್ನ ಆಸೆ ಇರುವುದು ಕನ್ನಡ ಸಿನಿಮಾದಲ್ಲಿ ಒಳ್ಳೆ ಹೆಸರು ತಗೊಂಡು ಬೇರೆ ಭಾಷೆಯ ಚಿತ್ರಗಳಿಗೆ ಹೋಗೋಣ ಎನ್ನುವುದು ನನ್ನ ಉದ್ದೇಶ ಎಂದು ಕಾರ್ತಿಕ್‌ ಮಹೇಶ್‌ ಹೇಳಿದ್ದಾರೆ.

ಬಿಗ್‌ಬಾಸ್‌ನಿಂದ ಬಂದ ಮೇಲೆ ಎಲ್ಲರ ಜೊತೆ ಅದೇ ರೀತಿಯ ರಿಲೇಷನ್‌ಶಿಪ್‌ ಇದೆಯಾ? ಎಲ್ಲರ ಜೊತೆನೂ ಚೆನ್ನಾಗಿದ್ದೀನಿ. ಸಂಗೀತ ಅವರ ಜೊತೆ ಟಚ್‌ನಲ್ಲಿ ಇಲ್ಲ ಎಂದು ಕಾರ್ತಿಕ್‌ ಹೇಳಿದ್ದಾರೆ. ಬಿಗ್‌ಬಾಸ್‌ ಮುಗಿಯಿತು ಅನಂತರ ಯಾವುದೇ ಟಚ್‌ ಇಲ್ಲ ಸಂಗೀತ ಜೊತೆ ಎಂದು ಕಾರ್ತಿಕ್‌ ಹೇಳಿದ್ದಾರೆ.

ಸದ್ಯಕ್ಕೆ ಕಾರ್ತಿಕ್‌ ಅವರು ರಾಮರಸ ಎಂಬ ಸಿನಿಮಾದಲ್ಲಿ ಸದ್ಯಕ್ಕೆ ನಟಿಸುತ್ತಿದ್ದು,  ಶೂಟಿಂಗ್‌ ನಡೆತಿದೆ.

 

You may also like

Leave a Comment