Actor Darshan Case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಪರಪ್ಪನ ಅಗ್ರಹಾರ ಸೇರಿದ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ಗೆ 6106 ಕೈದಿ ನಂಬರ್ ಕೊಡಲಾಗಿದ್ದು, ದರ್ಶನ್ ಅಭಿಮಾನಿಗಳು ಈ ನಂಬರ್ ನ್ನು ತಮ್ಮ ವಾಹನಗಳ ಮೇಲೆ ಸ್ಟಿಕ್ಕರ್, ಕೈ ಮೇಲೆ ಟ್ಯಾಟೂ ಹಾಕಿಸುವ ಕೆಲಸ ಮಾಡಿ ವೈರಲ್ ಮಾಡಿದ್ದಾರೆ. ಇದರ ಜೊತೆಗೆ ಪುಟ್ಟ ಮಗುವಿಗೆ ಕೈದಿ ನಂಬರ್ ಕೊಟ್ಟು ಫೋಟೋ ಶೂಟ್ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಘಟನೆಯೊಂದು ನಿನ್ನೆ ನಡೆದಿತ್ತು. ಇದೀಗ ಪೊಲೀಸರು ಮಗುವಿನ ತಂದೆ ತಾಯಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಈ ಫೋಟೋವನ್ನು ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಇದನ್ನು ಶೇರ್ ಮಾಡಿಕೊಂಡಿದ್ದರೂ ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಮಗುವಿಗೆ ಫೋಟೋಶೂಟ್ ಮಾಡಿಸಿದವರ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಸಿನಿಮಾ ನಟನೋರ್ವ ಕ್ರಿಮಿನಲ್ ಕೇಸಿನ ಅಪರಾಧಿ ಎಂದು ಗೊತ್ತಿದ್ದರೂ ಆತನನ್ನು ಬೆಂಬಲಿಸಿ ಅಂಧಾಭಿಮಾನ ಪ್ರದರ್ಶನ ಮಾಡಿದವರಿಗೆ ಕಾನೂನು ಕಂಟಕ ಸಮಸ್ಯೆ ಎದುರಾಗಿದೆ.
ಮಗುವಿನ ತಂದೆ ತಾಯಿ ವಿರುದ್ಧ ಬಾಲ ನ್ಯಾಯ ಕಾಯ್ದೆ ಉಲ್ಲಂಘನೆ ಅಡಿಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕೇಸು ದಾಖಲು ಮಾಡಿಕೊಂಡಿದೆ.
ಅಪರಾಧಿ ಕೃತ್ಯ ಸಂಬಂಧಿಸಿದಂತೆ ಹಾಗೂ ಮಕ್ಕಳಿಗೆ ಅಂದ ವೇಷಭೂಷಣ ಮಾಡಿದ ಫೋಟೋಗಳನ್ನು ಬಾಲ ನ್ಯಾಯ ಕಾಯ್ದೆಯ ನಿಯಮಾವಳಿ ಅನ್ವಯ ಹಾಕುವಂತಿಲ್ಲ. ಕ್ರಿಮಿನಲ್ ಆರೋಪಿಯೊಬ್ಬನಿಗೆ ನIಡಿದ ಕೈದಿ ಸಂಖ್ಯೆಯನ್ನು ನೀಡಿ ಫೋಟೋ ಶೂಟ್ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಬಾಲನ್ಯಾಯ ಕಾಯ್ದೆ ಉಲ್ಲಂಘನೆ ಮಾಡಿದರ ಕಾರಣ ಮಗುವಿನ ಕುಟುಂಬಸ್ಥರಿಗೆ ಸಮನ್ಸ್ ಜಾರಿ ಮಾಡಲಾಗುತ್ತಿದೆ.
ಕೈದಿ ರೀತಿಯ ಪೋಷಾಕು ಧರಿಸಿ ಮಗುವಿನ ಫೋಟೋ ಹಂಚಿದ್ದು, ಇದರ ಅರ್ಥ ಅನ್ವರ್ಥನಾಮವಾಗಿ ಕೈದಿ ಎಂದು ಕರೆಯಬಹುದು. ಇದು ಮಗುವಿನ ಮನಸ್ಸಿನ ಮೇಲೆ ಮಾನಸಿಕವಾಗಿ ಅಪರಾಧಿ ಕೃತ್ಯಗಳು ಪರಿಣಾಮ ಬೀರುವಂತೆ ಮಾಡುತ್ತದೆ. ಅಪರಾಧಿ ಕೃತ್ಯದಲ್ಲಿ ಮಗು ಭಾಗಿಯಾಗುವಂತೆ ಪ್ರೇರಣೆ ನೀಡಿದಂತಾಗುತ್ತದೆ. ಇದು ಮಗುವಿನ ಮಾನಸಿಕ ಬೆಳವಣಿಗೆ ಮೇಲೆ ಅಡ್ಡ ಪರಿಣಾಮ ಬೀರಬಹುದು. ಬಟ್ಟ ಹಾಗೂ ಸ್ಟಿಕ್ಕರ್ ಹಾಕಿರುವುದು ಅಪರಾಧ, ಇದರ ಜೊತೆಗೆ ಇಂತಹ ಡ್ರೆಸ್ ಹಾಕಿರುವುದು ಮಗುವಿನ ಆಯ್ಕೆಯಲ್ಲದ ಕಾರಣ ಪೋಷಕರು ಮಕ್ಕಳ ಹಕ್ಕುಗಳ ಉಲ್ಲಂಘಟನೆ ಮಾಡಿದ್ದಾರೆ. ಈ ಕಾರಣಕ್ಕೆ ಮಕ್ಕಳ ರಕ್ಷಣಾ ಆಯೋಗದಿಂದ ಕೇಸ್ ದಾಖಲಿಸಕೊಳ್ಳಲಾಗಿರುವ ಕುರಿತು ವರದಿಯಾಗಿದೆ.
Football: ಫುಟ್ಬಾಲ್ ಪಂದ್ಯವನ್ನು ವೀಕ್ಷಿಸಲು ಅಂತ್ಯಕ್ರಿಯೆಯನ್ನು ನಿಲ್ಲಿಸಿದ ಕುಟುಂಬ; ವಿಡಿಯೋ ವೈರಲ್
