Home » Mangaluru: ನಿರ್ಮಾಣ ಹಂತದ ಕಟ್ಟಡ ಭೂಕುಸಿತ ಪ್ರಕರಣ; ಓರ್ವ ಕಾರ್ಮಿಕ ಮೃತ್ಯು

Mangaluru: ನಿರ್ಮಾಣ ಹಂತದ ಕಟ್ಟಡ ಭೂಕುಸಿತ ಪ್ರಕರಣ; ಓರ್ವ ಕಾರ್ಮಿಕ ಮೃತ್ಯು

0 comments
Mangaluru

Mangaluru: ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ ಉಂಟಾಗಿದ್ದು, ಮಣ್ಣಿನಡಿ ಸಿಲುಕಿದ್ದ ಓರ್ವ ಕಾರ್ಮಿಕ ಮೃತಪಟ್ಟ ಘಟನೆ ನಡೆದಿದೆ.

ಮೃತ ಕಾರ್ಮಿಕನನ್ನು ಉತ್ತರ ಪ್ರದೇಶ ಮೂಲದ ಚಂದನ್‌ ಕುಮಾರ್‌ (30) ಎಂದು ಗುರುತಿಸಲಾಗಿದೆ. ಈ ಘಟನೆ ಬಲ್ಮಠ ಬಳಿ ಬುಧವಾರ ಸಂಭವಿಸಿದೆ.

ಕಟ್ಟಡದ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಭುಕುಸಿತ ಉಂಟಾಗಿದ್ದು, ಮಣ್ಣಿನಡಿ ಇಬ್ಬರು ಕಾರ್ಮಿಕರು ಸಿಲುಕಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳ, ಎಸ್‌ಡಿಆರ್‌ಎಫ್‌, ಎನ್‌ಡಿಆರ್‌ಎಫ್‌ ತಂಡ ಬಂದಿದ್ದು, ರಕ್ಷಣಾ ಕಾರ್ಯಾಚರಣೆ ಮಾಡಿ ಓರ್ವ ಕಾರ್ಮಿಕನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಮಣ್ಣಿನಡಿ ಸಿಲುಕಿದ್ದ ಇನ್ನೋರ್ವ ಕಾರ್ಮಿಕ ಚಂದನ್‌ ಪತ್ತೆಗೆ ಕಾರ್ಯಾಚರಣೆ ಮುಂದುವರೆದಿತ್ತು.

ಕಾರ್ಮಿಕನ ರಕ್ಷಣೆಗೆ ರಾತ್ರಿವರೆಗೂ ಕಾರ್ಯಾಚರಣೆ ನಡೆಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಏಳು ಗಂಟೆಯ ಸುಮೃಿ ಎನ್‌ಡಿಆರ್‌ಎಫ್‌ ತಂಡ ಮೃತದೇಹವನ್ನು ಹೊರತೆಗೆದಿದೆ ಎಂದು ವರದಿಯಾಗಿದೆ.

Ambani Family: ಮಗನ ಮದುವೆ ಪ್ರಯುಕ್ತ 50 ಬಡ ಜೋಡಿಗೆ ಅಂಬಾನಿ ಕುಟುಂಬದಿಂದ ಮದುವೆ – ಅಬ್ಬಬ್ಬಾ.. ಅವರಿಗೆ ಕೊಟ್ಟ ಉಡುಗೊರೆ, ಬೆಳ್ಳಿ, ಬಂಗಾರ, ಹಣದ ಬಗ್ಗೆ ಕೇಳಿದ್ರೆ ದಂಗಾಗ್ತೀರಾ !!

You may also like

Leave a Comment