Home » Udupi: ಅಯ್ಯೋ ದುರ್ವಿಧಿಯೇ, ಹೃದಯಾಘಾತಕ್ಕೆ 10 ನೇ ತರಗತಿ ವಿದ್ಯಾರ್ಥಿನಿ ಬಲಿ !!

Udupi: ಅಯ್ಯೋ ದುರ್ವಿಧಿಯೇ, ಹೃದಯಾಘಾತಕ್ಕೆ 10 ನೇ ತರಗತಿ ವಿದ್ಯಾರ್ಥಿನಿ ಬಲಿ !!

0 comments
udupi

Udupi: ವಿಧಿ ತಾನೆಷ್ಟು ಕ್ರೂರಿ ಎಂಬುದನ್ನು ಮತ್ತೆ ಮತ್ತೆ ಪ್ರೂವ್ ಮಾಡುತ್ತಲೇ ಇರುತ್ತದೆ. ಅಂತೆಯೇ ಇದೀಗ ಮತ್ತೊಂದು ಮನ ಮಿಡಿಯುವ ಘಟನೆ ಬೆಳಕಿಗೆ ಬಂದಿದ್ದು ಉಡುಪಿಯ ಮೂಡುಬೆಳ್ಳೆ ಸಂತ ಲಾರೆನ್ಸ್ ಕನ್ನಡ ಮಾಧ್ಯಮ ಪ್ರೌಢ ಶಾಲಾ 10ನೇ ತರಗತಿ ವಿದ್ಯಾರ್ಥಿನಿ ಭಾಗ್ಯಶ್ರೀ (16ವ) ಬುಧವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನಳಾಗಿದ್ದಾಳೆ.

Mangaluru: ನಿರ್ಮಾಣ ಹಂತದ ಕಟ್ಟಡ ಭೂಕುಸಿತ ಪ್ರಕರಣ; ಓರ್ವ ಕಾರ್ಮಿಕ ಮೃತ್ಯು

ಉಡುಪಿಯ ಪಳ್ಳಿ ದಾದಬೆಟ್ಟು(Palli Dadabettu) ಜಯರಾಮ ಆಚಾರ್ಯ ಮತ್ತು ಚಂದ್ರಿಕಾ ಅವರ ಪುತ್ರಿ ಭಾಗ್ಯಶ್ರೀ (16) ಮೃತ ದುರ್ದೈವಿ. ಈಕೆ ಮೂಡುಬೆಳ್ಳೆ ಸಂತ ಲಾರೆನ್ಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಯಾಗಿದ್ದಾಳೆ. ಬೆಳಿಗ್ಗೆ ಮನೆಯಲ್ಲಿ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

ಮುಗ್ಧ ಬಾಲೆ ಭಾಗ್ಯಶ್ರಿಯ ನಿಧನಕ್ಕೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಶಿಕ್ಷಕರು,ವಿದ್ಯಾರ್ಥಿ ವೃಂದದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಗೌರವಾರ್ಥ ನಿನ್ನೆ ಶಾಲೆಗೆ ರಜೆ ನೀಡಲಾಗಿತ್ತು.

Landslide at Mangalore: ಮಣ್ಣು ಕುಸಿತ ದುರಂತ; ಮಳೆಗಾಲ ಮುಗಿಯುವವರೆಗೆ ಕಟ್ಟಡ ಕಾಮಗಾರಿಗೆ ಬ್ರೇಕ್‌- ಮಾನಾಪ ಆಯುಕ್ತ ಆನಂದ್‌ ಸಿ.ಎಲ್‌.ಆದೇಶ

You may also like

Leave a Comment