Home » Purchased Flat: ಖರೀದಿಸಿದ ಫ್ಲ್ಯಾಟ್‌ನಲ್ಲಿ ನೀರು ಸೋರುತ್ತಾ? ಗೋಡೆ ಬಿರುಕು ಬಿಟ್ಟಿದೆಯಾ? ಹಾಗಿದ್ರೆ ಇನ್ಮೇಲೆ ಏನೇ ದೋಷ ಕಂಡುಬಂದ್ರೂ 5 ವರ್ಷ ಬಿಲ್ಡರ್‌ಗಳೇ ಹೊಣೆ !! ಖಡಕ್ ಆದೇಶ

Purchased Flat: ಖರೀದಿಸಿದ ಫ್ಲ್ಯಾಟ್‌ನಲ್ಲಿ ನೀರು ಸೋರುತ್ತಾ? ಗೋಡೆ ಬಿರುಕು ಬಿಟ್ಟಿದೆಯಾ? ಹಾಗಿದ್ರೆ ಇನ್ಮೇಲೆ ಏನೇ ದೋಷ ಕಂಡುಬಂದ್ರೂ 5 ವರ್ಷ ಬಿಲ್ಡರ್‌ಗಳೇ ಹೊಣೆ !! ಖಡಕ್ ಆದೇಶ

0 comments

Purchased Flat: ಜೀವನದಲ್ಲಿ ಒಂದು ಸ್ವಂತ ಮನೆ ಬೇಕು ಅಂತ ಎಷ್ಟೋ ವರ್ಷ ಹಣ ಕೂಡಿಟ್ಟು ಫ್ಯ್ಲಾಟ್‌ ಖರೀದಿಸಿಸುತ್ತೀರಿ ಆದ್ರೆ, ಖರೀದಿಸಿಸಿದ ಫ್ಲ್ಯಾಟ್‌ನಲ್ಲಿ ಏನಾದರೂ ಸಮಸ್ಯೆ ಬಂದ್ರೆ ಬಿಲ್ಡರ್ ಗಳು ಕೆಲವೊಮ್ಮೆ ನಮಗೂ ಆ ಸಮಸ್ಯೆಗೂ ಸಂಬಂಧ ಇಲ್ಲವೆಂದು ಜಾರಿಕೊಳ್ಳುವುದೇ ಹೆಚ್ಚು. ಆದ್ರೆ ಇನ್ಮೇಲೆ ನೀವು ಖರೀದಿಸಿಸಿದ ಫ್ಲ್ಯಾಟ್‌ನಲ್ಲಿ (Purchased Flat) ಏನಾದರೂ ಸಮಸ್ಯೆ ಬಂದ್ರೆ 5 ವರ್ಷ ಬಿಲ್ಡರ್‌ಗಳೇ ಹೊಣೆ ಎಂದು ಮಹತ್ವದ ಆದೇಶ ಹೊರಡಿಸಲಾಗಿದೆ.

ಹೌದು, ಫ್ಲ್ಯಾಟ್‌ಗಳನ್ನು ಮಾಲೀಕರಿಗೆ ಹಸ್ತಾಂತರಿಸಿದ ನಂತರ ಮುಂದಿನ ಐದು ವರ್ಷಗಳ ಕಾಲ ಕಟ್ಟಡದಲ್ಲಿಯಾವುದೇ ಸಮಸ್ಯೆ ಎದುರಾದರೂ ಬಿಲ್ಡರ್‌ಗಳು ಅದನ್ನು ಸರಿಪಡಿಸಬೇಕಾಗುತ್ತದೆ. ಈ ಕುರಿತು ಸರ್ಜಾಪುರದ ತಿಂಡ್ಲುಗ್ರಾಮದ ಎಸ್‌ಎನ್‌ಆರ್‌ ವೆರಿಟಿ ಅಪಾರ್ಟ್‌ಮೆಂಟ್‌ನ ನಿವಾಸಿ ಪಂಕಜ್‌ಸಿಂಗ್‌ ದಾಖಲಿಸಿದ್ದ ದೂರು ಆಲಿಸಿದ ಪ್ರಾಧಿಕಾರದ ಸದಸ್ಯ ಜಿ.ಆರ್‌.ರೆಡ್ಡಿ ಅವರಿದ್ದ ಪೀಠ ಈ ಆದೇಶ ನೀಡಿದೆ.

ರಿಯಲ್‌ ಎಸ್ಟೇಟ್‌ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯಿದೆ 2016ರ ಸೆಕ್ಷನ್‌ 31ರಡಿ ಸಲ್ಲಿಸಿದ್ದ ದೂರನ್ನು ಮಾನ್ಯ ಮಾಡಿರುವ ಪ್ರಾಧಿಕಾರ, ಪ್ರತಿವಾದಿ ಎಸ್‌ಎನ್‌ಆರ್‌ ಸ್ಕೆರ್‌ ಪ್ರೈವೇಟ್‌ ಲಿಮಿಟೆಡ್‌ಗೆ ಅರ್ಜಿದಾರರ ಫ್ಲ್ಯಾಟ್‌ನಲ್ಲಿ ನೀರು ಸೋರಿಕೆ ತಡೆಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದೆ. ಒಂದು ವೇಳೆ ಪ್ರತಿವಾದಿ ಬಿಲ್ಡರ್‌ ಆದೇಶ ಪಾಲಿಸದಿದ್ದರೆ ಅರ್ಜಿದಾರರು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬಹುದು ಎಂದೂ ಪ್ರಾಧಿಕಾರ ಹೇಳಿದೆ.

ಈ ಪ್ರಕರಣದಲ್ಲಿ, ದೂರುದಾರರಾದ ಪಂಕಜ್‌ಸಿಂಗ್‌, ಎಸ್‌ಎನ್‌ಆರ್‌ ವೆರಿಟಿ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್‌ ಸಂಖ್ಯೆ 302 ಅನ್ನು ಖರೀದಿಸಿದ್ದರು. 2020ರ ಡಿ.29ರಂದು ಸ್ವಾಧೀನಪತ್ರ ನೀಡಲಾಗಿತ್ತು ಮತ್ತು 2021ರ ನ.18ರಂದು ಸೇಲ್‌ ಡೀಡ್‌ ಮಾಡಿಕೊಡಲಾಗಿತ್ತು. ಅರ್ಜಿದಾರರು 2022ರ ಫೆಬ್ರವರಿಯಿಂದ ಅದೇ ಫ್ಲ್ಯಾಟ್‌ನಲ್ಲಿ ವಾಸ ಮಾಡುತ್ತಿದ್ದರು. ಒಂದು ದಿನ ಇದ್ದಕ್ಕಿದ್ದಂತೆ ಚಾವಣಿಯಿಂದ ನೀರು ಸೋರಲಾರಂಭಿಸಿತು. ಆಗ ದೂರುದಾರರು ಬಿಲ್ಡರ್‌ಗೆ ಮಾಹಿತಿ ನೀಡಿ, ನೀರು ಸೋರಿಕೆ ಸರಿಪಡಿಸಿಕೊಡುವಂತೆ ಕೋರಿದ್ದರು. ಆದರೆ ಬಿಲ್ಡರ್‌ ಕಡೆಯಿಂದ ಯಾವುದೇ ಉತ್ತರ ಬರಲಿಲ್ಲ. ಆಗ ಪಂಕಜ್‌ ಸಿಂಗ್‌ ರೇರಾಗೆ ಬಿಲ್ಡರ್‌ ವಿರುದ್ಧ ದೂರು ನೀಡಿದ್ದರು. ಆಗ ಮಧ್ಯಸ್ಥಿಕೆದಾರರ ಮುಂದೆ ದೂರು ವಿಚಾರಣೆಗೆ ಬಂದಾಗ ಬಿಲ್ಡರ್‌, ನೀರು ಸೋರಿಕೆಯನ್ನು ಸರಿಪಡಿಸಿಕೊಡುವುದಾಗಿ ಹೇಳಿದ್ದರು. ಆಗ ಪರಸ್ಪರ ಒಪ್ಪಿಗೆ ಮೇರೆಗೆ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿತ್ತು.

ಆದರೆ ಮತ್ತೆ ಮಳೆ ನೀರು ಸೋರಿಕೆ ಆರಂಭವಾಯಿತು. ಆಗ ಅವರು ಮತ್ತೆ ಬಿಲ್ಡರ್‌ ವಿರುದ್ಧ ದೂರು ನೀಡಿದ್ದರು. ಆಗ ಪ್ರಾಧಿಕಾರ ಬಿಲ್ಡರ್‌ಗೆ ನೋಟಿಸ್‌ ನೀಡಿತ್ತು. ಮೊದಲಿಗೆ ಪ್ರತಿವಾದಿ ಬಿಲ್ಡರ್‌ ಪ್ರಾಧಿಕಾರದ ಮುಂದೆ ಹಾಜರು ನೀಡಲಿಲ್ಲ. ಆನಂತರ ಪ್ರಾಧಿಕಾರ ದೂರು ಪರಿಶೀಲನೆ ನಡೆಸಿದಾಗ, 2023ರ ಜೂ.19ರಂದು ಪತ್ರವನ್ನು ಸಲ್ಲಿಸಿದ ಬಿಲ್ಡರ್‌, 2023ರ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ವಾಟರ್‌ ಪ್ರೂಫಿಂಗ್‌ ಮಾಡಲಾಗಿದೆ. ಆದರೆ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಮತ್ತೆ ನೀರು ಸೋರಿಕೆಯಾಗಿತ್ತು. ಆಗ ಮತ್ತೆ ಆರು ತಿಂಗಳ ಗ್ಯಾರಂಟಿಯೊಂದಿಗೆ ವಾಟರ್‌ ಪ್ರೂಫಿಂಗ್‌ ಮಾಡಲಾಗಿತ್ತು ಎಂದು ಉತ್ತರ ನೀಡಿದ್ದರು.

ವಾಟರ್‌ ಪ್ರೂಫಿಂಗ್‌ ಕಂಪನಿ ಜತೆ ಈ ಸಂಬಂಧ ಸಂವಹನ ನಡೆಸಿದ್ದು, ನೀರು ಸೋರಿಕೆಗೆ ಕಾರಣವನ್ನು ಪತ್ತೆ ಹಚ್ಚಲು ಸೂಚಿಸಲಾಗಿದೆ. ನೀರು ಸೋರಿಕೆ ತಡೆ ಸಂಬಂಧ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಬಿಲ್ಡರ್‌ ಭರವಸೆ ನೀಡಿದ್ದರು. ಆದರೆ ಅದನ್ನು ಪಾಲಿಸಿರಲಿಲ್ಲ. ಹಾಗಾಗಿ ಪ್ರಾಧಿಕಾರವು ಖರೀದಿಸಿಸಿದ ಫ್ಲ್ಯಾಟ್‌ನಲ್ಲಿ ಏನಾದರೂ ಸಮಸ್ಯೆ ಬಂದ್ರೆ 5 ವರ್ಷ ಬಿಲ್ಡರ್‌ಗಳೇ ಹೊಣೆ ಎಂದು ಮಹತ್ವದ ಆದೇಶ ಹೊರಡಿಸಿದೆ.

 

You may also like

Leave a Comment