Home » K S Eshwarappa: ಕೆ ಎಸ್ ಈಶ್ವರಪ್ಪ ಮರಳಿ ಬಿಜೆಪಿ ಸೇರ್ಪಡೆ?! ಹೈಕಮಾಂಡ್ ಒಪ್ಪಿಗೆಯೊಂದೇ ಬಾಕಿ

K S Eshwarappa: ಕೆ ಎಸ್ ಈಶ್ವರಪ್ಪ ಮರಳಿ ಬಿಜೆಪಿ ಸೇರ್ಪಡೆ?! ಹೈಕಮಾಂಡ್ ಒಪ್ಪಿಗೆಯೊಂದೇ ಬಾಕಿ

133 comments
K S Eshwarappa

K S Eshwarappa: ಬಿಜೆಪಿ ಸೇರ್ಪಡೆ ಯಾವಾಗ ಎಂದ ಮಾಧ್ಯಮಗಳ ಪ್ರಶ್ನೆಗೆ’ ನಾನು ಈಗಲೂ ಬಿಜೆಪಿಯಲ್ಲಿಯೇ ಇದ್ದೇನೆ. ಆದರೆ ತುರ್ತಾಗಿ ಬಿಜೆಪಿ ಸೇರುವ ಚಿಂತನೆ ಇಲ್ಲ, ರಾಯಣ್ಣ ಬ್ರಿಗೇಡ್ ಆರಂಭಿಸುವ ಆಲೋಚನೆ ಇದೆ’ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ(Parliament Election) ತನ್ನ ಮಗನಿಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಹಾಗೂ ಪಕ್ಷದಲ್ಲಿ ಕಡೆಗಣನೆ ಶುರುವಾಗಿದೆ ಎಂದು ಬಿಜೆಪಿ ಹಾಗೂ ಯಡಿಯೂರಪ್ಪರ(Yadiyurappa) ಕುಟುಂಬದ ವಿರುದ್ಧ ಸಿಡಿದೆದ್ದು, ಶಿವಮೊಗ್ಗ ಲೋಕಸಭಾ(Shivamogga Lokasabha) ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಹೀನಾಯವಾಗಿ ಸೋತಿದ್ದರು. ಈ ಹಿನ್ನೆಲೆಯಲ್ಲಿ ಕೆಲವು ಸಮಯದ ಹಿಂದೆ ಕೆ ಎಸ್ ಈಶ್ವರಪ್ಪನವರು(K S Eshwarappa) ಮರಳಿ ಬಿಜೆಪಿ(BJP) ಸೇರುವುದು ಬಹುತೇಕ ಫಿಕ್ಸ್ ಆಗಿದ್ದು, ಇದಕ್ಕೆ ಹೈಕಮಾಂಡ್ ನಿಂದ ಒಪ್ಪಿಗೆ ಸಿಗಬೇಕಿದೆ ಎಂದು ಮೂಲಗಳು ತಿಳಿಸಿದ್ದವು. ಆದರೀಗ ಈಶ್ವರಪ್ಪ ಉಲ್ಟಾಹೊಡೆದಂತೆ ಕಾಣುತ್ತಿದೆ.

ಶಿವಮೊಗ್ಗದಲ್ಲಿ (Shivamogga) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪ್ಪ ಮಕ್ಕಳ ಕೈಯಲ್ಲಿ ಬಿಜೆಪಿ ಇರುವುದು ತಪ್ಪು. ಹಿಂದೂ ಹೋರಾಟಗಾರರಿಗೆ ಮತ್ತು ಹಿಂದುತ್ವಕ್ಕೆ ನ್ಯಾಯ ಸಿಗಲಿ ಎಂದು ಚುನಾವಣೆಗೆ ಸ್ಪರ್ಧೆ ಮಾಡಿದ್ದೆ. ಮುಂದೆ ರಾಯಣ್ಣ ಬ್ರಿಗೇಡ್ (Sangolli Rayanna Brigade) ಆರಂಭಿಸುವ ಚಿಂತನೆ ಇದೆ. ಈ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಅವರು ಹೇಳಿದ್ದಾರೆ.

ಅಂದಹಾಗೆ ಲೋಕಸಭಾ ಚುನಾವಣೆಯಲ್ಲಿ ಈಶ್ವರಪ್ಪನವರು ಪ್ರತ್ಯೇಕವಾಗಿ ಸ್ಪರ್ಧೆಗಿಳಿದ ಕಾರಣ ಹಾಗೂ ವರಿಷ್ಠರ ಮಾತು ಕೇಳದ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು. ಈಶ್ವರಪ್ಪನವರು ನಾನು ಇದಕ್ಕೆ ಹೆದರಲ್ಲ. ಚುನಾವಣೆಯಲ್ಲಿ ಗೆದ್ದು ಮೋದಿಗೆ ಬೆಂಬಲ ನೀಡುವುದಾಗಿ ಹೇಳಿದ್ದರು. ಆದರೆ ಶಿವಮೊಗ್ಗದಲ್ಲಿ ಈಶ್ವರಪ್ಪನವರಿಗೆ ಸಿಕ್ಕಿದ್ದು ಬರೀ 30,000 ಮತಗಳು.

Pavitra Gowda: ಪವಿತ್ರ ಗೌಡ ದರ್ಶನ್ ಹಿಂದೆ ಬಿದ್ದಿದ್ದೇ ‘ಅದಕ್ಕಾಗಿ’ ಅಂತೆ- ಡೈರೆಕ್ಟರ್ ಒಬ್ಬರಿಂದ ಸ್ಫೋಟಕ ಸತ್ಯ ಬಯಲು !!

You may also like

Leave a Comment