Home » BPL Card: ನೀವೇನಾದರೂ ಈ ಸೌಲಭ್ಯ ಹೊಂದಿದ್ದರೆ ಬಿಪಿಎಲ್‌ ಕಾರ್ಡ್‌ ರದ್ದು; ಸರಕಾರದಿಂದ ಖಡಕ್ ಆದೇಶ

BPL Card: ನೀವೇನಾದರೂ ಈ ಸೌಲಭ್ಯ ಹೊಂದಿದ್ದರೆ ಬಿಪಿಎಲ್‌ ಕಾರ್ಡ್‌ ರದ್ದು; ಸರಕಾರದಿಂದ ಖಡಕ್ ಆದೇಶ

0 comments
APL-BPL Card

BPL Card: ಬಿಪಿಎಲ್‌ ಬಳಕೆದಾರರ ಪಟ್ಟಿಯಲ್ಲಿ ಅನರ್ಹರೂ ಸರಕಾರದ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಸರಕಾರ ಇಂತಹ ಕಾರ್ಡ್‌ಗಳನ್ನು ರದ್ದು ಮಾಡಿ ಅರ್ಹರಿಗೆ ನೀಡುವಂತೆ ಸೂಚಿಸಿದ್ದಾರೆ.

Heavy Rain: Heavy Rain: ಕರಾವಳಿಗೆ ರೆಡ್‌ ಅಲರ್ಟ್‌; 4-5 ದಿನ ಭಾರೀ ಮಳೆ

ಕಾರ್ಡ್‌ ಪಡೆಯಲು ಅನರ್ಹರಾದರೂ ಅಕ್ರಮವಾಗಿ ಪಡೆದುಕೊಂಡಿರುವ ಕುರಿತು ಸಿಎಂ ಗಮನಿಸಿದ್ದು, ಇದೀಗ ಇದರ ಕುರಿತು ಕ್ರಮ ಜರುಗಿಸುವಂತೆ ಸಿಎಂ ಹೇಳಿದ್ದಾರೆ.

ನೀತಿ ಆಯೋಗದ ಪ್ರಕಾರ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ ಶೇ.5.67 ಇರಬೇಕು. ಇದೀಗ ಸಿಎಂ ಆದೇಶದ ನಂತರ ಈಗಾಗಲೇ ಪರಿಶೀಲನೆ ಮಾಡಿಟ್ಟಿರುವ ಪಟ್ಟಿ ಪುನರ್‌ ಪರಿಶೀಲನೆ ಮಾಡಿ ನಿಯಮ ಮೀರಿ ಪಡೆದಿರುವ ಕಾರ್ಡ್‌ಗಳನ್ನು ಅನರ್ಹ ಪಡಿಸಲು ಅಧಿಕಾರಿಗಳು ಟೊಂಕ ಕಟ್ಟಿದ್ದಾರೆ.

ಹಾಗೆನೇ ಬಡತನ ರೇಖೆಗಿಂತ ಮೇಲಿರುವವರ ಕಾರ್ಡ್‌ಗಳ ಪರಿಶೀಲನೆ ಕೂಡಾ ಮಾಡಲಿದ್ದು, ಇದರಲ್ಲಿ ಆದಾಯ ತೆರಿಗೆ ಪಾವತಿದಾರರು, ವೈಟ್‌ ಬೋರ್ಡ್‌ ಕಾರು ಹೊಂದಿರುವವರು, ಸರಕಾರಿ ನೌಕರರು, ಸ್ವಂತ ಕೃಷಿ ಉಪಕರಣ (ಟ್ರಾಕ್ಟರ್‌, ಟಿಲ್ಲರ್‌) ಹೊಂದಿರುವವರು, ಹಲವು ಫ್ಲ್ಯಾಟ್‌ ಹೊಂದಿರುವವರು, ಸ್ವಂತ ಜಮೀನು ಹೊಂದಿರುವವರ ಮೇಲೆ ಇದೀಗ ಅಧಿಕಾರಿಗಳ ದೃಷ್ಟಿ ನೆಟ್ಟಿದೆ.

ಇದೀಗ ಆಹಾರ ಇಲಾಖೆ ಖಡಕ್‌ ನಿರ್ಧಾರ ಮಾಡಿಕೊಂಡಿದ್ದು, ಇನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಈ ಕುರಿತು ಪರಿಶೀಲನೆ ಮಾಡಲಿದ್ದು, ಬಿಪಿಎಲ್‌ ಕಾರ್ಡ್‌ನಿಂದ ಅನರ್ಹರ ಹೆಸರನ್ನು ರದ್ದುಪಡಿಸುತ್ತದೆ.

ಈ ರೀತಿ ಕ್ಯಾನ್ಸಲ್‌ ಆದ ಬಿಪಿಎಲ್‌ ಕಾರ್ಡ್‌ ಕೇವಲ ಅನ್ನಭಾಗ್ಯ ಯೋಜನೆ, ಗೃಹಲಕ್ಷ್ಮಿ ಯೋಜನೆ ಲಾಭ ಕೂಡಾ ದೊರಕುವುದಿಲ್ಲ. ಬಿಪಿಎಲ್‌ ಕಾರ್ಡ್‌ ಕ್ಯಾನ್ಸಲ್‌ ಮಾಡಿದರೆ ಈ ಎಲ್ಲಾ ಸೌಲಭ್ಯ ಕೈತಪ್ಪುತ್ತದೆ.

K S Eshwarappa: ಕೆ ಎಸ್ ಈಶ್ವರಪ್ಪ ಮರಳಿ ಬಿಜೆಪಿ ಸೇರ್ಪಡೆ?! ಹೈಕಮಾಂಡ್ ಒಪ್ಪಿಗೆಯೊಂದೇ ಬಾಕಿ

You may also like

Leave a Comment