Home » Actor Darshan Health: 10 ಕೆಜಿ ತೂಕ ಕಳೆದುಕೊಂಡ ಭಯದಲ್ಲಿ ಕೋರ್ಟ್‌ಗೆ ಮೊರೆ ಹೋದ ದರ್ಶನ್‌; ಇಲ್ಲಿದೆ ಬೇಡಿಕೆಗಳ ಲಿಸ್ಟ್‌

Actor Darshan Health: 10 ಕೆಜಿ ತೂಕ ಕಳೆದುಕೊಂಡ ಭಯದಲ್ಲಿ ಕೋರ್ಟ್‌ಗೆ ಮೊರೆ ಹೋದ ದರ್ಶನ್‌; ಇಲ್ಲಿದೆ ಬೇಡಿಕೆಗಳ ಲಿಸ್ಟ್‌

0 comments
Darshan

Actor Darshan Health: ನಟ ದರ್ಶನ್‌ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಸೇರಿದ್ದು, ಇನ್ನೂ ತಿಂಗಳು ಕೂಡಾ ಆಗಿಲ್ಲ. ಆಗೇ ಜೈಲೂಟ ಸೇರಿದೆ 10 ಕೆಜಿ ತೂಕ ಕಳೆದುಕೊಂಡಿದ್ದಾರೆ. ಹಾಗಾಗಿ ದರ್ಶನ್‌ ಅವರು ಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಕೆ ಮಾಡಿದ್ದು, ಊಟ, ಹಾಸಿಗೆ ಜೊತೆ ಇನ್ನಷ್ಟು ವಸ್ತುಗಳನ್ನು ಕೋರಿ ಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಹೊರಗಡೆ ಇದ್ದಾಗ ಲಕ್ಷುರಿ ಲೈಫ್‌ ಲೀಡ್‌ ಮಾಡುತ್ತಿದ್ದ ನಟ ದರ್ಶನ್‌, ಪಾರ್ಟಿ ಮಾಡಿಕೊಂಡು, ಮಾಂಸಾಹಾರ ಸೇವಿಸಿ ದಷ್ಟಪುಷ್ಟವಾಗಿ ಮೈ ಕೈ ತುಂಬಿಸಿಕೊಂಡು ಇದ್ದರು. ಇದೀಗ ಈ ಎಲ್ಲಾ ವ್ಯವಸ್ಥೆ ಕಾರಾಗೃಹದಲ್ಲಿ ಇಲ್ಲ. ಜೈಲಿನಲ್ಲಿರುವ ಊಟ ಸೇರುತ್ತಿಲ್ಲ. ಮನೆ ಊಟಕ್ಕಾಗಿ ಪರಿತಪಿಸುತ್ತಿದ್ದು, ದೇಹದ ತೂಕ ಇಳಿಕೆ ಕೂಡಾ ಭಯ ಆಗುತ್ತಿರುವ ಕಾರಣ ಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಕೋರ್ಟ್‌ಗೆ ದರ್ಶನ್‌ ಅವರು ಊಟ, ಹಾಸಿಗೆ, ಪುಸ್ತಕ, ಬಟ್ಟೆ, ಚಮಚವನ್ನು ಮನೆಯಿಂದ ತರಿಸಿಕೊಳ್ಳಲು ಬೇಡಿಕೆ ಇಟ್ಟಿದ್ದಾರೆ. ಈ ಮೊದಲೇ ಇದನ್ನೆಲ್ಲೆ ಪಡೆಯಲು ಜೈಲು ಅಧಿಕಾರಿಗಳಲ್ಲಿ ಮನವಿ ಮಾಡಿದರೂ ಅನುಮತಿಸಿಲ್ಲ ಎನ್ನಲಾಗಿದೆ. ಜೈಲೂಟ ತಿಂದು ಫುಡ್‌ ಪಾಯಿಸನಿಂಗ್‌ ಆಗುತ್ತಿದ್ದು, ಜೊತೆಗೆ ಭೇದಿ ಆಗುತ್ತಿದೆ ಎಂದು ವರದಿಯಾಗಿದೆ.

ದರ್ಶನ್‌ ತೂಕ ಜೈಲು ಸೇರಿದಾಗಿನಿಂದ ಕಡಿಮೆಯಾಗಿದೆ. ಅತಿಸಾರ/ಭೇದಿ ಉಂಟಾಗಿದ್ದು, ಈ ಕಾರಣದಿಂದ ತೂಕ ಕಡಿಮೆಯಾಗಿದೆ. ಇದನ್ನು ಜೈಲಿನ ವೈದ್ಯರೇ ಅಭಿಪ್ರಾಯ ಪಟ್ಟಿದ್ದಾರೆ. ಮನೆ ಊಟಕ್ಕೆ ಈ ಮೊದಲೇ ಜೈಲು ಅಧಿಕಾರಿಗಳಲ್ಲಿ ವಿನಂತಿಸಿದರೂ ಕೋರ್ಟ್‌ ಆದೇಶವಿಲ್ಲವೆಂದು ಜೈಲು ಅಧಿಕಾರಿಗಳು ಅನುಮತಿ ನೀಡಿಲ್ಲ ಎಂದು ದರ್ಶನ್‌ ವಕೀಲರು ಹೇಳಿದ್ದಾರೆ.

Kadri Shree Manjunatha Temple: ದೇವಸ್ಥಾನದೊಳಗೆ ಬೈಕ್‌ನಲ್ಲಿಯೇ ನುಗ್ಗಿದ ಯುವಕ; ಗುಡಿಯ ಬಾಗಿಲು ಒದ್ದು ಹುಚ್ಚಾಟ

You may also like

Leave a Comment