Home » Tamilnadu: DSP, PSI ಯನ್ನೂ ಬಿಡದೆ 50 ಜನರೊಂದಿಗೆ ಕಿಲಾಡಿ ಲೇಡಿಯ ಮದುವೆ – ಎಲ್ಲರೊಂದಿಗೆ ಫಸ್ಟ್ ನೈಟ್ ಮುಗಿಸಿಕೊಂಡೇ ಎಸ್ಕೇಪ್ !!

Tamilnadu: DSP, PSI ಯನ್ನೂ ಬಿಡದೆ 50 ಜನರೊಂದಿಗೆ ಕಿಲಾಡಿ ಲೇಡಿಯ ಮದುವೆ – ಎಲ್ಲರೊಂದಿಗೆ ಫಸ್ಟ್ ನೈಟ್ ಮುಗಿಸಿಕೊಂಡೇ ಎಸ್ಕೇಪ್ !!

0 comments
Tamilnadu

Tamilnadu: ಇಂದು ವಂಚನೆಯ ಜಾಲ ಯಾವ ಮಟ್ಟಕ್ಕೆ ಬೆಳೆದಿದೆ ಎಂದರೆ ಮೋಸ ಮಾಡುವ ಸುಳಿವೇ ಸಿಗದು. ಆ ಮೋಸ ಸರಪಳಿಯಾಗಿ ಬೆಸೆದರೂ ಅದರ ವಾಸನೆ ನಮಗೆ ಬಡಿಯದು. ಅಂತೆಯೇ ಇದೀಗ ಇಲ್ಲೊಂದೆಡೆ ಕಿಲಾಡಿ ಲೇಡಿ(Kilady Lady) ಮಾಡಿರೋ ಆಟ ಕೇಳಿದ್ರೆ ನೀವೇ ಶಾಕ್ ಆಗ್ತೀರಾ.

ಭಾರತೀಯ ಸಂಸ್ಕೃತಿಯಲ್ಲಿ ಮದುವೆಗೆ ತನ್ನದೇ ಆದ ಮಹತ್ವವವಿದೆ. ಆದರೆ ಇಲ್ಲೊಬ್ಬಳು ಲೇಡಿ ಅದನ್ನೇ ತನ್ನ ಮೋಸದ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾಳೆ. ಹೌದು, ಮದುವೆಯನ್ನೇ ಬಂಡವಾಳ ಮಾಡಿಕೊಂಡ ಈ ಕಿಲಾಡಿ ಲೇಡಿ ಅವಿವಾಹಿತರನ್ನೇ ಟಾರ್ಗೆಟ್ ಮಾಡಿ ಬರೋಬ್ಬರಿ 50 ಜನರನ್ನು ವಂಚಿಸಿದ ಘಟನೆ ಇದೀಗ ಬೆಳಕಿಗೆ ಬಂದಿದೆ. ಅಷ್ಟಕ್ಕೂ ಇವಳ ಧೈರ್ಯ ಮೆಚ್ಚಬೇಕು. ಯಾಕೆಂದರೆ ಅವಳು ವಂಚಿಸಿದ 50 ಜನರಲ್ಲಿ PSI, DSP ಕೂಡ ಇದ್ದಾರೆ. ಅದೂ ಅಲ್ಲದೆ ಈ ಕಿರಾತಕಿ ಮದುವೆ ಆಗಿ ಫಸ್ಟ್ ನೈಟ್ ಮುಗಿಸಿಕೊಂಡು ಎಸ್ಕೇಪ್ ಆಗ್ತಿದ್ಲು !!

ಅಂದಹಾಗೆ ತಮಿಳುನಾಡು(Tamilunadu) ಪೊಲೀಸರ ವರದಿಯ ಪ್ರಕಾರ 35 ವರ್ಷದ ತಿರುವುರ್ ಎನ್ನುವ ವ್ಯಕ್ತಿಯೊಬ್ಬರು, ಮದುವೆಗಾಗಿ ವಧುವಿನ ಹುಡುಕಾಟದಲ್ಲಿದ್ದಾಗ ‘ದಿ ತಮಿಳ್ ವೇ’ ಎನ್ನುವ ವೆಬ್‌ಸೈಟ್‌ನಲ್ಲಿ ಸಂಧ್ಯಾ ಎನ್ನುವ ಮಹಿಳೆಯ ಪ್ರೊಫೈಲ್ ಕಣ್ಣಿಗೆ ಬಿದ್ದಿದೆ. ಇಬ್ಬರು ಮೆಚ್ಚಿಕೊಂಡ ಮದುವೆಯಾದರು. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿದ್ದಾಗ, ಮೊದಲ ರಾತ್ರಿಯೂ ಮುಗಿದ ಬಳಿಕ ಸಂಧ್ಯಾಳ ಅವರ ವರ್ತನೆಯಲ್ಲಿ ಬದಲಾವಣೆ ಕಂಡಿದೆ. ಇದನ್ನು ಗಮನಿಸಿದ ಪತಿ ಹಾಗೂ ಅವರ ಕುಟುಂಬಸ್ಥರು ಆಕೆಯ ಆಧಾರ್ ಕಾರ್ಡ್ ಪರಿಶೀಲನೆ ನಡೆಸಿದ್ದಾರೆ. ಅಲ್ಲಿ ಆಕೆಯ ಗಂಡನ ಹೆಸರು ಬೇರೆಯದ್ದೇ ಆಗಿತ್ತು. ಇದಾದ ಬಳಿಕ ಪೊಲೀಸರಿಗೆ ದೂರು ಕೊಡಲಾಯಿತು. ನಂತರ ಪೋಲಿಸರು ಬಲೆ ಬೀಸಿ ಈಕೆಯನ್ನು ವಶಕ್ಕೆ ಪಡೆದಿದ್ದಾರೆ.

ಇನ್ನು ಈಕೆಯನ್ನು ಕೂಲಂಕುಶವಾಗಿ ವಿಚಾರಣೆ ನಡೆಸಿದಾಗ ಸುಮಾರು 50ಕ್ಕೂ ಹೆಚ್ಚು ಜನರನ್ನು ಮದುವೆಯಾಗಿ ವಂಚಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜೊತೆಗೆ ಈ ಕಿಲಾಡಿ ಲೇಡಿ DSP, ಓರ್ವ ಇನ್‌ಸ್ಪೆಕ್ಟರ್ ಹಾಗೂ ಮಧುರೈನ ಓರ್ವ ಪೊಲೀಸ್ ಅಧಿಕಾರಿಯೂ ಸೇರಿದಂತೆ 50 ಮಂದಿಯನ್ನು ಈಕೆ ವಂಚಿಸಿರುವುದೂ ಬಯಲಾಗಿದೆ. ಮದುವೆಯಾಗುವುದು, ಪರ್ಸ್ಟ್ ನೈಟ್ ಮುಗಿಸುವುದು, ಮರುದಿನ ಪತಿಯ ಜತೆ ಜಗಳ ಮಾಡಿಕೊಂಡು ಹಣ ಹಾಗೂ ಆಭರಣ ಪಡೆದುಕೊಂಡು ಪರಾರಿಯಾಗುವುದೇ ಈಕೆಯ ಖಯಾಲಿಯಾಗಿದೆ ಎಂದು ತಿಳಿದುಬಂದಿದೆ.

7th Pay Commission: 7ನೇ ವೇತನ ಆಯೋಗ ಜಾರಿ ಸದ್ಯಕ್ಕಿಲ್ಲ – ಜಾರಿಗಾಗಿ ಎಲ್ಲಾ ರೆಡಿಯಾದಾಗ ಕೊನೇ ಕ್ಷಣದಲ್ಲಿ ಸರ್ಕಾರ ಹಿಂದೇಟು ಹಾಕಿದ್ದೇಕೆ ?!

You may also like

Leave a Comment