Home » Udupi: ಪೇಜಾವರಶ್ರೀಗಳ ಪೂರ್ವಾಶ್ರಮದ ಸಹೋದರ ವಿದ್ವಾನ್‌ ರಾಮಚಂದ್ರ ಭಟ್‌ ವಿಧಿವಶ

Udupi: ಪೇಜಾವರಶ್ರೀಗಳ ಪೂರ್ವಾಶ್ರಮದ ಸಹೋದರ ವಿದ್ವಾನ್‌ ರಾಮಚಂದ್ರ ಭಟ್‌ ವಿಧಿವಶ

0 comments
Udupi

Udupi: ಪೇಜಾವರಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಪೂರ್ವಾಶ್ರಮದ ಸಹೋದರ ವಿದ್ವಾನ್‌ ಅಂಗಡಿಮಾರು ರಾಮಚಂದ್ರ ಭಟ್‌ (72) ಅವರು ನಿಧನ ಹೊಂದಿದ್ದಾರೆ.

ಇವರು ಅನಾರೋಗ್ಯದಿಂದ ಬಳಲುತ್ತಿದ್ದರೆನ್ನಲಾಗಿದೆ. ಇಂದು ಉಡುಪಿ ಪೇಜಾವರ ಮಠದ ಅತಿಥಿಗೃಹದಲ್ಲಿ ಕೊನೆಯುಸಿರೆಳಿದಿದ್ದಾರೆ. ಇವರು ಓರ್ವ ಪುತ್ರ, ಸಹೋದರ, ಪತ್ನಿ, ಸಹೋದರಿಯರನ್ನು ಹಾಗೂ ಅಪಾರ ಶಿಷ್ಯ ಬಳಗವನ್ನು ಅಗಲಿದ್ದಾರೆ.

ಇವರು ಮುಂಬಯಿಯ ಅದಮಾರು ಮಠದ ವ್ಯವಸ್ಥಾಪಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಇವರು ಜ್ಯೋತಿಷ್ಯ, ವೇದಾಂತ ಶಾಸ್ತ್ರಗಳಲ್ಲಿ ಪಾರಂಗತರಾಗಿದ್ದರು.

ವಿದ್ವಾನ್‌ ರಾಮಚಂದ್ರ ಭಟ್ಟರ ಅಪೇಕ್ಷೆಯ ಮೇರೆಗೆ ಪಾರ್ಥಿವ ಶರೀರವನ್ನು ಮಣಿಪಾಲದ ಕೆಎಂಪಿ ಕಾಲೇಜಿನ ವಿದ್ಯಾರ್ಥಿಗಳ ಅಧ್ಯಯನಕ್ಕೆ ನೀಡಲಾಗಿದೆ.

Medical College: ರಾಜ್ಯಕ್ಕೆ 3 ಹೊಸ ಮೆಡಿಕಲ್ ಕಾಲೇಜು ಮಂಜೂರು ಮಾಡಿದ ಕೇಂದ್ರ – ನಿಮ್ಮ ಜಿಲ್ಲೆಗೂ ಹೊಡಿತಾ ಲಾಟ್ರಿ?

You may also like

Leave a Comment