Home » Suryakumar Yadav;: ಕರಾವಳಿಯಲ್ಲಿ ಸೂರ್ಯ ಕುಮಾರ್ ಯಾದವ್ ಸುತ್ತಾಟ, ಉಡುಪಿಯಲ್ಲಿ ಬಗೆಬಗೆಯ ಮೀನಿನ ಭೂರಿ ಭೋಜನದೂಟ !!

Suryakumar Yadav;: ಕರಾವಳಿಯಲ್ಲಿ ಸೂರ್ಯ ಕುಮಾರ್ ಯಾದವ್ ಸುತ್ತಾಟ, ಉಡುಪಿಯಲ್ಲಿ ಬಗೆಬಗೆಯ ಮೀನಿನ ಭೂರಿ ಭೋಜನದೂಟ !!

0 comments
Suryakumar Yadav

Suryakumar Yadav: T20 ವಿಶ್ವ ಕಪ್ ನಲ್ಲಿ ಭರ್ಜರಿ ಜಯಗಳಿಸುವ ಮೂಲಕ ಭಾರತ ತಂಡವು ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಆಸೆಯನ್ನು ಈಡೇರಿಸಿ, ತನ್ನ ಕನಸನ್ನು ನನಸಾಗಿಸಿಕೊಂಡಿದೆ. ಈ ಕಪ್ ಗೆಲ್ಲುವಲ್ಲಿ ಸೂರ್ಯ ಕುಮಾರ್(Surya Kumar Yadav) ಯಾದವ್ ಪಾತ್ರ ತುಂಬಾ ಮುಖ್ಯವಾದುದು ಎಂದು ಎಲ್ಲರಿಗೂ ತಿಳಿದಿದೆ. ಅಂತೆಯೇ ಸೂರ್ಯಕಾಂತ್ ಅಭಿಮಾನಿಗಳ, ಭಾರತೀಯರ ಮನ ಗೆದ್ದಿದ್ದಾರೆ. ಇದೀಗ ರಿಲೀಫ್ ಮೂಡ್ ನಲ್ಲಿರೋ ಸೂರ್ಯಕಾಂತ್ ಸುತ್ತಾಟದಲ್ಲಿ ತೊಡಗಿದ್ದಾರೆ.

ಅಂತೆಯೇ ಖಾಸಗಿ ಕಾರ್ಯಕ್ರಮಕ್ಕಾಗಿ ಉಡುಪಿಗೆ ಆಗಮಿಸಿದ ಟೀಂ ಇಂಡಿಯಾ(Team India) ಕ್ರಿಕೆಟಿಗ ಸೂರ್ಯಕುಮಾರ್ ಯಾದವ್, ಪತ್ನಿ ದೇವಿಶಾ ಶೆಟ್ಟಿ(Devish Shetty ) ಜೊತೆ ಮಂಗಳವಾರ ಇಲ್ಲಿನ ಕಾಪು ಮಾರಿಗುಡಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಿಶಾ ಶೆಟ್ಟಿ ಕರಾವಳಿಯವರಾಗಿದ್ದು, ಖಾಸಗಿ ಕಾರ್ಯಕ್ರಮಕ್ಕೆ ಮಂಗಳೂರಿಗೆ ಬಂದಿದ್ದ ಅವರಿಬ್ಬರೂ ಜೀರ್ಣೋದ್ಧಾರಗೊಳ್ಳುತ್ತಿರುವ ಮಾರಿಗುಡಿಗೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ತುಳುವಿನಲ್ಲೇ ಮಾತನಾಡಿ ತುಳುವರ ಮನ ಗೆದ್ದರು.

ಈ ವೇಳೆ ಮಾತನಾಡಿದ ಅವರು ದೇವಿಶಾ, ಐದು ವರ್ಷಗಳ ಹಿಂದೆ ಇಲ್ಲಿಗೆ ಬಂದಿದ್ದೆ, ಮತ್ತೊಮ್ಮೆ ಕಾಪು ಅಮ್ಮನ ಭೇಟಿ ಮಾಡಬೇಕು ಎಂಬ ಇಚ್ಛೆ ಇತ್ತು. ಇದೀಗ ಪತಿಯೊಂದಿಗೆ ಬಂದಿರುವುದು ತುಂಬಾ ಸಂತೋಷ ನೀಡುತ್ತಿದೆ ಎಂದರು.

ಭಾರತವನ್ನು ಪ್ರತಿನಿಧಿಸಬೇಕು, ವಿಶ್ವಕಪ್ ಗೆಲ್ಲಬೇಕು ಎಂಬುದು ಎಲ್ಲ ಕ್ರಿಕೆಟ್ ಆಟಗಾರರ ಕನಸಾಗಿರುತ್ತದೆ, ಸೂರ್ಯಕುಮಾರ್ ಅವರ ಕನಸು ಸಾಕಾರಗೊಂಡಿದೆ. ಮುಂದೆ ಇನ್ನೂ ಹಲವಾರು ಕನಸುಗಳಿವೆ. ದೇವಿಯಲ್ಲಿ ಏನು ಪ್ರಾರ್ಥನೆ ಮಾಡಿದ್ದೇವೆ, ಏನು ಹರಕೆ ನೀಡಿದ್ದೇವೆ ಅದನ್ನು ಹೇಳುವುದಿಲ್ಲ ಎಂದರು.


ಇನ್ನು ಇದೆಲ್ಲ ಮುಗಿದ ಬಳಿಕ ಸೂರ್ಯಕುಮಾರ್ ಉಡುಪಿಯ ಹೋಟೆಲ್‌ನಲ್ಲಿ ಭರ್ಜರಿಯಾಗಿಯೇ ಮೀನೂಟ ಸವಿದಿದ್ದಾರೆ. ಸೂರ್ಯ, ಪಾಂಪ್ರೇಟ್ ಘೀ ರೋಸ್ಟ್‌, ಅಂಜಲ್ ತವಾ ಫ್ರೈ, ಫ್ರೋನ್ಸ್ ಘೀ ರೋಸ್ಟ್‌ & ನೀರ್ ದೋಸೆ, ಸಿಲ್ವರ್ ಫಿಶ್ ರವಾ, ರೈಸ್, ಕಾಣೆ ಮಸಾಲ ಹಾಗೂ ಬಟರ್ ಮಿಲ್ಕ್ ರುಚಿ ಸವಿದರು.

PM KISAN: ಬಜೆಟ್ ಮಂಡನೆಗೂ ಮೊದಲು ಕೇಂದ್ರ ಸರ್ಕಾರದಿಂದ ರೈತರಿಗೆ ಗುಡ್​ನ್ಯೂಸ್​!

 

You may also like

Leave a Comment