Home » Bank Loan: ಸಾಲಗಾರರಿಗೆ ಸಿಹಿ ಸುದ್ದಿ! ಇನ್ಮುಂದೆ ವಿವಿಧ ರೀತಿಯ ಸಾಲದ ಕಂತು ಕಟ್ಟಬೇಕಾಗಿಲ್ಲ!

Bank Loan: ಸಾಲಗಾರರಿಗೆ ಸಿಹಿ ಸುದ್ದಿ! ಇನ್ಮುಂದೆ ವಿವಿಧ ರೀತಿಯ ಸಾಲದ ಕಂತು ಕಟ್ಟಬೇಕಾಗಿಲ್ಲ!

0 comments
Bank Loan

Bank Loan: ಇತ್ತೀಚಿಗೆ ಹಲವಾರು ವಿಧಗಳಲ್ಲಿ ವೈಯಕ್ತಿಕ ಸಾಲ ಸಿಗುತ್ತದೆ. ಸಾಲ ತೆಗೆದುಕೊಳ್ಳುವುದು ತುಂಬಾ ಸುಲಭ. ಆದ್ರೆ ಹಿಂತಿರುಗಿಸುವುದು ಕಷ್ಟ ಸಾಧ್ಯ. ವೈಯಕ್ತಿಕ ಬಳಕೆಗೆ ವಿವಿಧ ಸಾಲಗಳಾದ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ, ಮುಂತಾದ ಸಾಲವನ್ನು ವಿವಿಧ ಸಂದರ್ಭಗಳಲ್ಲಿ ತೆಗೆದುಕೊಳ್ಳುತ್ತೀರಿ. ಹೀಗೆ ಮೂರ್ನಾಲ್ಕು ಸಾಲ (Bank Loan)  ತೆಗೆದಾಗ ಪ್ರತ್ಯೇಕವಾಗಿ EMI ಕಂತು ಕಟ್ಟಬೇಕು ಆದರೆ ಇದು ತುಂಬಾ ಕಷ್ಟದ ಕೆಲಸ ಏಕೆಂದರೆ ಈ ಇಎಂಐ ಮತ್ತು ಹೆಚ್ಚಳದಿಂದಾಗಿ ಪ್ರತಿ ತಿಂಗಳು ಇಷ್ಟು ಹಣ ಕಟ್ಟುವುದು ತುಂಬಾ ಕಷ್ಟ. ಅದಕ್ಕಾಗಿ ಸಾಲಗಾರರಿಗೆ ಒಂದು ಪರಿಹಾರ ಇಲ್ಲಿದೆ.

ಹೌದು, ಇನ್ಮುಂದೆ ನೀವು ಬಹು ಸಾಲಗಳನ್ನು ವಿವಿಧ EMI ಗಳಲ್ಲಿ ಪಾವತಿಸುವ ಅಗತ್ಯವಿಲ್ಲ, ಅದಕ್ಕಾಗಿ ಈಗ ಮರುಪಾವತಿ ಪ್ರಕ್ರಿಯೆಯನ್ನು ಸುಲಭಗೊಳಿಸಲಾಗಿದೆ. ನೀವು ಒಂದಕ್ಕಿಂತ ಹೆಚ್ಚು ಸಾಲವನ್ನು ಹೊಂದಿದ್ದರೆ, ಉದಾಹರಣೆಗೆ, ವೈಯಕ್ತಿಕ ಸಾಲ, ವಾಹನ ಸಾಲ, ಗೃಹ ಸಾಲ ಇತ್ಯಾದಿ, ಸಾಲದ EMI ಗಳ ಮರುಪಾವತಿ ಪ್ರಕ್ರಿಯೆಯನ್ನು ಈಗ ಒಂದೇ EMI ನಲ್ಲಿ ಒಟ್ಟಿಗೆ ಪಾವತಿಸಲಾಗುತ್ತದೆ.

ಹೌದು, ಇನ್ಮುಂದೆ ಗ್ರಾಹಕರು ಬ್ಯಾಂಕಿನಲ್ಲಿ ಬಹು ಸಾಲುಗಳಿಗೆ ಒಂದೇ EMI ಗಳನ್ನು ತೆಗೆದುಕೊಳ್ಳಬಹುದು. ವಾಸ್ತವದಲ್ಲಿ ವಿವಿಧ ಸಾಲಗಳನ್ನು ತೆಗೆದುಕೊಳ್ಳುವಾಗ ಅವುಗಳನ್ನು ಟ್ರ್ಯಾಕ್ ಮಾಡುವುದು ತುಂಬಾ ಕಷ್ಟ ಅಥವಾ ಕೆಲವೊಮ್ಮೆ ಒಂದು ಕಂತು ಪಾವತಿಸಲು ಮರೆತುಹೋಗುತ್ತದೆ, ಆದ್ದರಿಂದ ನೀವು ಸಮಯಕ್ಕೆ ಸಾಲವನ್ನು ಮರುಪಾವತಿಸದಿದ್ದರೆ ಕ್ರೆಡಿಟ್ ಸ್ಕೊರ್ ಕಡಿಮೆ ಆಗುವ ಸಾಧ್ಯತೆ ಹೆಚ್ಚು. ಒಂದು ವೇಳೆ ಕ್ರೆಡಿಟ್ ಸ್ಕೋರ್ ಕಡಿಮೆಯಿದ್ದರೆ ಸಾಲವನ್ನು ಪಡೆಯುವುದು ತುಂಬಾ ಕಷ್ಟ. ಆದರೆ ನೀವು ಸಾಲವನ್ನು ಒಟ್ಟಿಗೆ ಮರುಪಾವತಿ ಮಾಡಿದರೆ ನಿಮ್ಮ ಕ್ರೆಡಿಟ್ ಸ್ಕೋರ್ ಕೂಡ ಸುಧಾರಿಸುತ್ತದೆ.

ಅದಕ್ಕಾಗಿ ವಿವಿಧ ಸಾಲಗಳ ಎಲ್ಲಾ EMI ಗಳನ್ನು ಒಂದೇ EMI ಆಗಿ ಪಾವತಿಸುವ ಆಯ್ಕೆ ನಿಮಗಿದೆ. ಆದರೆ ಕೆಲವು ನಿಯಮಗಳು ಮತ್ತು ಷರತ್ತುಗಳಿವೆ. ನೀವು ಯಾವ ಬ್ಯಾಂಕ್‌ನಿಂದ ಸಾಲ ಪಡೆಯಲು ಬಯಸುತ್ತೀರೋ, ಆ ಬ್ಯಾಂಕ್‌ಗೆ ಹೋಗಿ ಸರಿಯಾದ ಮಾಹಿತಿಯನ್ನು ಪಡೆದು ಒಪ್ಪಿಗೆ ಪಡೆಯಬೇಕಾಗುತ್ತದೆ.

Weird News: ಮೈ ಒರೆಸುವ ಟವೆಲ್​, ಕಾಲಿಗೆ ಹಾಕೋ ಚಪ್ಪಲಿಗೂ ಕೂಡಾ ಎಕ್ಸ್‌ಪೈರಿ ಡೇಟ್ ಇದೆಯಂತೆ! ವಿಚಿತ್ರ ಆದ್ರು ಸತ್ಯ

You may also like

Leave a Comment