Viral News ತೂಕ ಇಳಿಕೆ ಮಾಡಬೇಕೆನ್ನುವ ಪ್ರಯತ್ನದಲ್ಲಿ ಇಲ್ಲೊಬ್ಬ ಯುವತಿ ತನ್ನ ತೂಕವನ್ನು ಭಾರೀ ಇಳಿಸಿಕೊಂಡಿದ್ದು, ಕೇವಲ ಅಸ್ಥಿಪಂಜರ ರೀತಿಯಾಗಿ ತನ್ನ ದೇಹವನ್ನು ಮಾರ್ಪಾಡು ಮಾಡಿಕೊಂಡಿದ್ದಾರೆ. ಕೇವಲ 25 ಕಿಲೋಗ್ರಾಂಗಳಷ್ಟು (55 ಪೌಂಡ್) ತೂಕವಿರುವ ಚೀನಾದ ಯುವತಿಯೊಬ್ಬಳು ಆನ್‌ಲೈನ್‌ನಲ್ಲಿ ತನ್ನ ತೆಳ್ಳಗಿನ ದೇಹವನ್ನು ಆನ್‌ಲೈನ್‌ನಲ್ಲಿ ಹೇಳಿದ್ದು, ಇದೀಗ ಹೆಚ್ಚು ಗಮನ ಸೆಳೆದಿದ್ದಾಳೆ. ಅಷ್ಟು ಮಾತ್ರವಲ್ಲದೇ ತಾನು ಇನ್ನೂ ತೆಳ್ಳಗಾಗಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾಳೆ.
ಚೀನಾದ ಗುವಾಂಗ್‌ಡಾಂಗ್‌ನಲ್ಲಿ ವಾಸ ಮಾಡುವ ಈ ಯುವತಿಯ ಹೆಸರು ಟಿಂಗ್ಜಿ. ಯುವತಿಯು 160 ಸೆಂ.ಮೀ ಎತ್ತರವಿದ್ದರೂ ಕೇವಲ 25 ಕೆ.ಜಿ ತೂಕವನ್ನು ಹೊಂದಿದ್ದಾಳೆ ಮತ್ತು ಇನ್ನೂ ಹೆಚ್ಚಿನ ತೂಕವನ್ನು ಕಳೆದುಕೊಳ್ಳುವ ಗುರಿಯನ್ನು ಹೊಂದಿದ್ದಾಳೆ. ಈಕೆ ಸಾಮಾಜಿಕ ಜಾಲತಾಣದಲ್ಲಿ 42,000 ಕ್ಕೂ ಹೆಚ್ಚು ಫಾಲೋವರ್ಸ್ ನ್ನು ಹೊಂದಿದ್ದಾಳೆ. ಈ ಮಹಿಳೆ ತುಂಬಾ ತೆಳ್ಳಗಾಗಲು ಆದ್ಯತೆ ನೀಡುತ್ತಾಳೆ ಮತ್ತು ಅವಳ ಅಸ್ಥಿಪಂಜರದ ರೀತಿ ತನ್ನ ದೇಹವಿದ್ದರೂ ಇದು ತನ್ನ ಜೀವನದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರಿಲ್ಲ ಎಂದು ಹೇಳಿದ್ದಾಳೆ.
ಸಾಮಾಜಿಕ ಮಾಧ್ಯಮದಲ್ಲಿ ಈಕೆ ವೈರಲ್ ಆದ ನಂತರ, ಈಕೆ ಅನೋರೆಕ್ಸಿಯಾದಿಂದ ಬಳಲುತ್ತಿದ್ದಾಳೆ ಮತ್ತು ತುರ್ತು ವೈದ್ಯಕೀಯ ಸಹಾಯದ ಅಗತ್ಯವಿದೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.
