Home » Divya Vasantha: ದಿವ್ಯಾ ವಸಂತ ತಾಯಿಯಿಂದ ದರ್ಶನ್‌ ಫ್ಯಾನ್ಸ್‌ ಕುರಿತು ಶಾಕಿಂಗ್‌ ಹೇಳಿಕೆ

Divya Vasantha: ದಿವ್ಯಾ ವಸಂತ ತಾಯಿಯಿಂದ ದರ್ಶನ್‌ ಫ್ಯಾನ್ಸ್‌ ಕುರಿತು ಶಾಕಿಂಗ್‌ ಹೇಳಿಕೆ

0 comments
Divya Vasantha

Divya Vasantha: ಸ್ಪಾ ಮಾಲೀಕರಿಗೆ ಮೇಲ್‌ ಮಾಡಿ ಹಣ ಸುಲಿಗೆ ಯತ್ನ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ದಿವ್ಯಾ ವಸಂತ ಅವರನ್ನು ಬೆಂಗಳೂರಿನ ಜೀವನ್‌ ಭೀಮಾ ನಗರ ಪೊಲೀಸರು ಬಂಧನ ಮಾಡಿದ್ದು, ತನಿಖೆ ಮುಂದುವರಿದಿದೆ. ಇದೀಗ ದಿವ್ಯಾ ವಸಂತ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಟ್ರೋಲ್‌ ಮಾಡಲಾಗುತ್ತಿದೆ. ಇವುಗಳೆಲ್ಲದರ ಮಧ್ಯೆ, ದಿವ್ಯಾ ವಸಂತ ಅವರ ತಾಯಿ ವಸಂತಮ್ಮ ಬೇಸರಗೊಂಡಿದ್ದಾರೆ. ಹಾಗೂ ದರ್ಶನ್‌ ಫ್ಯಾನ್ಸ್‌ಗಳು ನನ್ನ ಮಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಹೇಳಿ ಕಣ್ಣೀರಿಟ್ಟಿದ್ದಾರೆ.

ವಸಂತಮ್ಮ ಅವರು ಭಾವುಕರಾಗಿ ಕಣ್ಣೀರಿಡುತ್ತಾ ವೀಡಿಯೋ ಮಾಡಿದ್ದು, ನಾನು ದಿವ್ಯಾಳ ತಾಯಿ ವಸಂತ. ನನಗೆ ಅಳು ಬರುತ್ತಿದೆ. ನಿಜವಾಗ್ಲೂ ನನ್ನ ಮಗಳ ಬಗ್ಗೆ ಎಷ್ಟು ಕೆಟ್ಟದಾಗಿ ಮಾತನಾಡಿದ್ದೀರಾ ಹಾಗೆಲ್ಲ ಮಾತಾಡುವವರು ದರ್ಶನ್‌ ಫ್ಯಾನ್ಸ್‌ ಎಂದು ನನಗೆ ಗೊತ್ತಿದೆ ಎಂದು ಹೇಳಿದ್ದು, ಅವಳು ತಪ್ಪು ಮಾಡಿದ್ದಾಳೋ, ಇಲ್ಲವೋ ದಿವ್ಯಾ ಬಂದ ಮೇಲೆ ಎಲ್ಲಾ ಗೊತ್ತಾಗುತ್ತೆ. ದರ್ಶನ್‌ ಅವರು ಎಲ್ಲರಿಗೂ ಬೇಕಾದವರೇ. ನಂಗೂ ದರ್ಶನ್‌ ಇಟ್ಟ, ನಮ್ಮ ಮಗಳಿಗೂ ಇಷ್ಟ ಎಂದು ಹೇಳಿದ್ದಾರೆ.

ನನ್ನ ಮಗಳು ಹೊರಗಡೆ ಬರುವವರೆಗೆ ಕೆಟ್ಟದಾಗಿ ವೈರಲ್‌ ಮಾಡಬೇಡಿ. ನಿಮ್ಮ ಸಪೋರ್ಟ್‌ ಆಕೆಗೆ ಬೇಕು. ನನ್ನ ಮಗಳು ಬೇಗ ಬರಲಿ ಎಂದು ಕೇಳಿಕೊಳ್ಳುತ್ತೀನಿ. ಅವಳು ತಪ್ಪು ಮಾಡಿದ್ದರೆ ದೇವರು ನೋಡಿಕೊಳ್ತಾನೆ. ನಿಮ್ಮ ಮನೆ ಹೆಣ್ಣು ಮಗಳೆಂದು ತಿಳ್ಕೊಳ್ಳಿ ಎಂದು ಹೇಳಿದ್ದು, ನೀವುಗಳು ಅಂದುಕೊಂಡ ರೀತಿಯಲ್ಲಿ ಆಕೆ ಕೆಟ್ಟವಳಲ್ಲ. ಅವಳೂ ದರ್ಶನ್‌ ಫ್ಯಾನ್‌. ನಾನೂ ಫ್ಯಾನ್‌ ಎಂದು ದಿವ್ಯಾ ತಾಯಿ ವಸಂತಮ್ಮ ಅವರು ಕೈ ಮುಗಿದು ಮನವಿ ಮಾಡಿದ್ದಾರೆ.

 

You may also like

Leave a Comment