Sai Pallavi: 2015ರಲ್ಲಿ, ಮಲಯಾಳಂ ಚಿತ್ರ ‘ಪ್ರೇಮಂ’ ಮೂಲಕ ಚಿತ್ರ ರಂಗಕ್ಕೆ ಪ್ರವೇಶಿಸಿದ ಸಾಯಿ ಪಲ್ಲವಿ ನಂತರದಲ್ಲಿ ದಕ್ಷಿಣ ಭಾರತದ ಚಿತ್ರರಂಗದ ಅತ್ಯಂತ ನಿಪುಣ ನಟಿ ಎಂದೇ ಖ್ಯಾತಿ ಪಡೆದಿದ್ದಾರೆ. ಮೊದಲ ಸಿನಿಮಾದಿಂದಲೇ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಒಳ್ಳೆಯ ಹೆಸರು ಗಳಿಸಿರುವ ಸಾಯಿ ಪಲ್ಲವಿ ಇತರ ನಟಿಯರ ಪೈಕಿ ವಿಶೇಷ ಕ್ರೇಜ್ ಪಡೆದುಕೊಂಡಿದ್ದಾರೆ ಎಂದರೆ ತಪ್ಪಾಗಲಾರದು.
Tulu Language: ತುಳು 2ನೇ ಹೆಚ್ಚುವರಿ ಭಾಷೆಯಾಗಿ ಘೋಷಿಸಬೇಕು: ಕಾಂಗ್ರೆಸ್ ಶಾಸಕ ಅಶೋಕ್ ರೈ
ಸಾಯಿ ಪಲ್ಲವಿ (Sai Pallavi) , ಉತ್ತಮ ಕಂಟೆಂಟ್ ಸಿನಿಮಾಗಳನ್ನು ಆಯ್ದುಕೊಂಡು ಚಿತ್ರರಂಗದಲ್ಲಿ ತನಗೊಂದು ವಿಶಿಷ್ಟ ಇಮೇಜ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ಸಾಯಿ ಪಲ್ಲವಿ ಡಾನ್ಸ್‌ಗೆ ವಿಶೇಷವಾದ ಅಭಿಮಾನಿಗಳ ಬಳಗವೇ ಇದೆ. ಇನ್ನು ಇವರು ತೆಲುಗು, ತಮಿಳು ಭಾಷೆಗಳಲ್ಲಿ ಸಿನಿಮಾ ಮಾಡುವ ಮೂಲಕ ಅತ್ಯಂತ ಪ್ರತಿಭಾವಂತ ನಾಯಕಿ ಎಂದು ಗುರುತಿಸಿಕೊಂಡಿದ್ದಾರೆ.
ಸಾಯಿ ಪಲ್ಲವಿ ಅವರಿಗೆ ಕಥೆ ಇಷ್ಟವಾದರೆ ಮತ್ತು ಅದರಲ್ಲಿ ತಮ್ಮ ಪಾತ್ರಕ್ಕೆ ಮಹತ್ವವಿದ್ದರೆ ಮಾತ್ರ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡುತ್ತಾರೆ ಎಂಬ ಮಾತು ಇಂಡಸ್ಟ್ರಿಯಲ್ಲಿ ಇದೆ. ಸಾಯಿ ಪಲ್ಲವಿ ಎಲ್ಲೆ ಮೀರಿದ ಪಾತ್ರಗಳಿಂದ ದೂರವಿರುತ್ತಾರೆ. ಇದೇ ಸಾಯಿ ಪಲ್ಲವಿಯನ್ನು ಇಂಡಸ್ಟ್ರಿಯಲ್ಲಿ ವಿಶೇಷ ಸ್ಥಾನ ನೀಡಿದೆ.
ಆದ್ರೆ ಈ ನಡುವೆ ಸಾಯಿ ಪಲ್ಲವಿ ವೈಯಕ್ತಿಕತೆಗೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು, ನಟಿ ವಿವಾಹಿತ ನಾಯಕನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಅದೂ ಅಲ್ಲದೆ ನಾಯಕನಿಗೆ ಮದುವೆಯಾಗಿ ಮಕ್ಕಳಿದ್ದಾರೆ. ಈ ಸುದ್ದಿ ಸಾಯಿ ಪಲ್ಲವಿ ಅಭಿಮಾನಿಗಳಿಗೆ ಶಾಕ್ ನೀಡಿದೆ. ಆದರೆ ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಅಭಿಮಾನಿಗಳು ಸುಮ್ಮನಾಗಿದ್ದು, ಯಾರೋ ಏನೋ ಹೇಳುತ್ತಾರೆ ಅಂತಾ ಎಲ್ಲಾ ನಿಜ ಆಗಲು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
