Home » Gruhalakshmi Scheme: ಈ ದಿನ ಒಟ್ಟಿಗೆ ಬರಲಿದೆ ಗೃಹಲಕ್ಷ್ಮೀಯ 2 ತಿಂಗಳ ಹಣ – ಸಚಿವೆ ಹೆಬ್ಬಾಳ್ಕರ್ ಮಾಹಿತಿ!!

Gruhalakshmi Scheme: ಈ ದಿನ ಒಟ್ಟಿಗೆ ಬರಲಿದೆ ಗೃಹಲಕ್ಷ್ಮೀಯ 2 ತಿಂಗಳ ಹಣ – ಸಚಿವೆ ಹೆಬ್ಬಾಳ್ಕರ್ ಮಾಹಿತಿ!!

0 comments
Gruhalakshmi Scheme

Gruhalakshmi Scheme: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಪೈಕಿ ಪ್ರಮುಖವಾಗಿರುವ ಯೋಜನೆ ‘ಗೃಹಲಕ್ಷ್ಮಿ ಯೋಜನೆ'(Gruhalakshmi Scheme). ಈ ಯೋಜನೆಯಡಿ ರಾಜ್ಯದ ಪ್ರತಿಯೊಂದು ಮನೆಯ ಯಜಮಾನಿಯರ ಖಾತೆಗೆ ಪ್ರತಿ ತಿಂಗಳು 2000 ರೂ ಹಣ ಜಮೆಯಾಗುತ್ತಿದೆ. ಆದರೀಗ ಕಳೆದೆರಡು ತಿಂಗಳಿಂದ ಮಹಿಳೆಯರಿಗೆ ಹಣ ಜಮಾ ಆಗಿಲ್ಲ. ಇದೀಗ ಈ ಕುರಿತು ರಾಜ್ಯ ಸರ್ಕಾರವು ಯಜಮಾನಿಯರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ.

ಹೌದು, ರಾಜ್ಯ ಸರ್ಕಾರವು ಗೃಹ ಲಕ್ಷ್ಮಿ ಯೋಜನೆಯ 2 ತಿಂಗಳ ಬಾಕಿ ಹಣ 10 ದಿನಗಳ ಒಳಗಾಗಿ ಫಲಾನುಭವಿಗಳ ಖಾತೆಗೆ ಹಾಕಲಾಗುವುದು ಎಂದು ಹೇಳಿದೆ. ಈ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌(Lakshmi Hebbalkar) ಮಾಹಿತಿ ನೀಡಿದ್ದು, ಗೃಹಲಕ್ಷ್ಮಿ ಹಣ ಮೂರ್ನಾಲ್ಕು ತಿಂಗಳಿನಿಂದ ಬರುತ್ತಿಲ್ಲ ಎನ್ನುವುದು ತಪ್ಪು, ಗೃಹಲಕ್ಷ್ಮಿ ಹಣವನ್ನು ಮೇ ತಿಂಗಳಲ್ಲಿ ಹಾಕಿದ್ದೇವೆ. ಜೂನ್‌, ಜುಲೈ ತಿಂಗಳ ಗೃಹಲಕ್ಷ್ಮಿ ಹಣ ಹಾಕಲು ತಾಂತ್ರಿಕ ದೋಷವಾಗಿದ್ದು, ಈಗಾಗಲೇ ಡಿಬಿಟಿ ಪುಶ್‌ ಮಾಡುತ್ತಿದ್ದೇವೆ. 8-10 ದಿನದೊಳಗೆ ಗೃಹಲಕ್ಷ್ಮಿ ಹಣ ಖಾತೆಗೆ ಜಮಾ ಮಾಡಲಾಗುವುದು ಎಂದು ಹೇಳಿದ್ದಾರೆ.

ಈ ಕೆಲಸ ಮಾಡಿದರೆ ಸರಿಯಾದ ಸಮಯಕ್ಕೆ ಸಿಗುತ್ತ ಹಣ:
ಹಣವನ್ನು ಸರಿಯಾದ ಸಮಯಕ್ಕೆ ನಿಮ್ಮ ಖಾತೆಗೆ ಬರಬೇಕೆಂದರೆ ಈಗಾಗಲೇ ಇಲಾಖೆ ತಿಳಿಸಿರುವ ರೀತಿಯಲ್ಲಿ KYC ಅಪ್ಡೇಟ್ ಅನ್ನು ಸರಿಯಾದ ರೀತಿಯಲ್ಲಿ ಮಾಡಿಸಿರಬೇಕು ಇಲ್ಲವಾದಲ್ಲಿ ಹಣವನ್ನು ಸರಿಯಾದ ಸಮಯಕ್ಕೆ ಪಡೆದುಕೊಳ್ಳಲು ಸಾಧ್ಯವಿರುವುದಿಲ್ಲ.

You may also like

Leave a Comment