Home » Punith Rajkumar: ದಿಢೀರ್ ಎಂದು ಕಾಮಿಡಿ ಶೋನಲ್ಲಿ ಪ್ರತ್ಯಕ್ಷವಾದ ಪುನೀತ್ ರಾಜ್ ಕುಮಾರ್, ನಾಡಿನ ಜನತೆ ಫುಲ್ ಶಾಕ್ !! ಏನಿದು ಅಪ್ಪು ಜಮತ್ಕಾರ

Punith Rajkumar: ದಿಢೀರ್ ಎಂದು ಕಾಮಿಡಿ ಶೋನಲ್ಲಿ ಪ್ರತ್ಯಕ್ಷವಾದ ಪುನೀತ್ ರಾಜ್ ಕುಮಾರ್, ನಾಡಿನ ಜನತೆ ಫುಲ್ ಶಾಕ್ !! ಏನಿದು ಅಪ್ಪು ಜಮತ್ಕಾರ

0 comments

Punith Rajkumar: ಕರ್ನಾಟಕ ರತ್ನ ಪುನೀತ್ ರಾಜ್(Punith Raj Kumar) ಕುಮಾರ್ ಅವರು ಕನ್ನಡಿಗರನ್ನು ಅಗಲಿ ವರ್ಷಗಳು ಉರುಳುತ್ತಿವೆ. ಆದರೆ ಆ ವ್ಯಕ್ತಿತ್ವ ಮಾತ್ರ ಕನ್ನಡಿಗರ ಮನದಲ್ಲಿ ಅಳಿಸದೇ ಉಳಿಯುತ್ತದೆ ಎಂಬುದು ಸತ್ಯ. ಅವರು ಚಿಕ್ಕಮಕ್ಕಳಿಂದ ಹಿಡಿದು, ಅಜ್ಜ, ಅಜ್ಜಂದಿರವರೆಗೂ ಮನಸಸ್ಸಿನಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿದ್ದಾರೆ. ಸುಮ್ಮನೆ ಅಪ್ಪು(Appu) ಅವರ ಯಾವುದೋ ಕಾರ್ಯಕ್ರಮ, ಸಿನಿಮಾ ನೋಡುವಾಗ ಇದೇ ರೀತಿ ಅವರು ಎದುರು ಬಂದರೆ ಸಾಕಲ್ವಾ ಅನಿಸುವುದುಂಟು. ಆದರೆ ಏನು ಮಾಡೋದು, ಅದು ಅಸಾಧ್ಯ. ಆದರೀಗ ಈ ರೀತಿಯ ಚಮತ್ಕಾರವೊಂದನ್ನು ಖಾಸಗಿ ವಾಹಿನಿ ಮಾಡಿದೆ.

ಹೌದು, ಕಾಮಿಡಿ ಕಿಲಾಡಿಗಳು(Kamidi Kiladigalu) ಪ್ರೀಮಿಯರ್‌ ಲೀಗ್‌ಗೆ ಅಪ್ಪು ಅವರು ಬಂದಿದ್ದು, ಈ ದೃಶ್ಯವನ್ನು ಕಂಡ ನಿರೂಪಕಿ ಅನುಶ್ರೀ ಕಣ್ಣೀರಿಟ್ಟಿದ್ದಾರೆ. ಅಷ್ಟೇ ಅಲ್ಲ ನಾಡಿನ ಜನರೇ ಮೂಕವಿಸ್ಮಿತರಾಗಿದ್ದಾರೆ. ಆದರೆ ಓದುಗರಾದ ನೀವು ಅಪ್ಪು ಹೇಗೆ ಕಾರ್ಯಕ್ರಮಕ್ಕೆ ಬಂದರೆಂದು ಯೋಚಿಸುತ್ತಿರಬಹುದು. ಇಲ್ಲಿದೆ ನೋಡಿ ನಿಜಸಂಗತಿ.

ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ ಶೋನ ಸಣ್ಣ ಪ್ರೋಮೋವೊಂದನ್ನು ಜೀ ಕನ್ನಡ ಬಿಡುಗಡೆ ಮಾಡಿದ್ದು, ಅದರಲ್ಲಿ ಜಗ್ಗಪ್ಪ ಮತ್ತು ಅವರ ತಂಡ ಸ್ಕಿಟ್‌ ಮಾಡುತ್ತಿದೆ. ಟೈಮ್‌ ಮಷಿನ್‌ ಇಟ್ಕೊಂಡು ಎಲ್ಲರನ್ನು ನಗಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನು ಈ ವೇಳೆ ಜಗಪ್ಪ ‘ಏ ಬುಜ್ಜಿ 2021ಕ್ಕೆ ಹೋಗು’ ಅಂತಾ ಟೈಮ್‌ ಮಷಿನ್‌ಗೆ ಹೇಳಿದ್ದಾರೆ. ಆಗ ಕಾಲಚಕ್ರ ಹಿಂದೆ ಹೋಗಿದ್ದು, ಈ ಕ್ಷಣವಂತೂ ತೀರ್ಪುಗಾರರನ್ನು ಅಚ್ಚರಿಗೊಳಿಸಿದೆ. ಅದರಲ್ಲೂ ‌ ನಿರೂಪಾಲಿ ಅನುಶ್ರೀ ಏನ್‌ ಆಗುತ್ತಿದೆ ಅಂತಾ ದಿಟ್ಟಿಸಿ ನೋಡಿದ್ದರು. ಈ ವೇಳೆ ಕತ್ತಲಾಗಿ ಮಿನುಗು ಬೆಳಕಿನಲ್ಲಿ ಪುನೀತ್‌ ರಾಜ್‌ಕುಮಾರ್‌ ಎಂಟ್ರಿ ಕೊಟ್ಟಿದ್ದು, ಇದನ್ನು ಕಂಡು ಅನುಶ್ರೀ ಕಣ್ಣೀರಿಟ್ಟಿದ್ದಾರೆ.

ಹೌದು, ಅಪ್ಪುನೇ ನೋಡಿದಂತಾಗುವಂತ ವ್ಯಕ್ತಿಯೊಬ್ಬರು ಸೂಟು ಬೂಟು ಹಾಕಿಕೊಂಡು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ವೇದಿಕೆ ಮೇಲೆ ಆಗಮಿಸಿದ್ದು, ಈ ವೇಳೆ “ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿವೆ” ಎಂಬ ಅವರ ಧ್ವನಿಯಲ್ಲಿದ್ದ ಹಾಡು ಪ್ಲೇ ಆಗಿದೆ. ಇನ್ನು ಈ ವೇಳೆ ತರುಣ್‌ ಸುಧೀರ್‌ ಎದ್ದು ನಿಂತರೆ, ಅನುಶ್ರೀ, ನಯನಾ ಅಪ್ಪು ಅವರನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಕಮಿಡಿ ಶೋಗೆ ಆಗಮಿಸಿದ್ದ ಎಲ್ಲರ ಕಣ್ಣಲ್ಲೂ ಕಣ್ಣೀರಿಟ್ಟು ಭಾವುಕರಾದರು. ಒಟ್ಟಿನಲ್ಲಿ ಜ್ಯೂನಿಯರ್‌ ಪುನೀತ್‌ ರಾಜ್‌ಕುಮಾರ್‌ ಥೇಟ್‌ ಅಪ್ಪು ರೀತಿಯಲ್ಲೇ ಮಾತನಾಡಿ ಎಲ್ಲರನ್ನೂ ಒಂದು ಕ್ಷಣ ನಿಬ್ಬೆರಗಾಗುವಂತೆ ಮಾಡಿದರು. ಅಪ್ಪು ಅವರ ಶೈಲಿಯಲ್ಲೇ ಮತನಾಡುತ್ತಾ, ನಡೆಯುತ್ತಾ ಗಮನ ಸೆಳೆದರು.

You may also like

Leave a Comment