Home » Alcohol Price Hike: ಮದ್ಯ ಪ್ರಿಯರಿಗೆ ಶಾಕ್! ಮತ್ತೊಮ್ಮೆ ಬಿಯರ್​ ಬೆಲೆ ಏರಿಕೆ

Alcohol Price Hike: ಮದ್ಯ ಪ್ರಿಯರಿಗೆ ಶಾಕ್! ಮತ್ತೊಮ್ಮೆ ಬಿಯರ್​ ಬೆಲೆ ಏರಿಕೆ

7 comments

Alcohol Price Hike: ಬಿಯರ್​ ಕುಡಿಯುವವರಿಗೆ ಕಂಪನಿಗಳು ಮತ್ತೊಮ್ಮೆ ಶಾಕ್​ ನೀಡಿವೆ. ಈಗಾಗಲೇ ಒಂದು ತಿಂಗಳ ಹಿಂದೆಯಷ್ಟೆ ಬಿಯರ್​ ಬೆಲೆ ಏರಿಕೆಯಾಗಿತ್ತು. ಇದೀಗ ಕಚ್ಚಾ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆ ಸದ್ಯ ಮತ್ತೊಮ್ಮೆ ಮದ್ಯ ಪ್ರಿಯರಿಗೆ ಶಾಕ್ ನೀಡಲಾಗಿದೆ. ಅದರಲ್ಲೂ ಬಿಯರ್ ಬೆಲೆ ಮತ್ತಷ್ಟು (Alcohol Price Hike) ಏರಿಕೆಯಾಗಿದೆ.

ಹೌದು, ರಾಜ್ಯದಲ್ಲಿ ಬಿಯರ್ (Beer) ಬೆಲೆ 10 ರಿಂದ 20 ರೂಪಾಯಿ ಏರಿಕೆ ಮಾಡಲಾಗಿದೆ. ರಾಜ್ಯದಲ್ಲಿ ಕಳೆದ 17 ತಿಂಗಳಲ್ಲಿ 5ನೇ ಬಾರಿಗೆ ಬಿಯರ್ ಬೆಲೆ ಏರಿಕೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದ ಕರ್ನಾಟಕ ಸರ್ಕಾರ (Karnataka Government) ಅಧಿಕಾರಕ್ಕೆ ಬಂದ ಮೇಲೆ ಬಿಯರ್ ದರ 50ರಿಂದ 60 ರೂ.ವರೆಗೆ ಏರಿಕೆಯಾಗಿದೆ.

ಸರ್ಕಾರ ಈ ಹಿಂದೆ ಬಿಯರ್‌ ಮೇಲೆ ಶೇ.20ರಷ್ಟು ಹೆಚ್ಚುವರಿ ಸುಂಕ ವಿಧಿಸಿತ್ತು. ಆ ನಂತರ ಉತ್ಪಾದನಾ ವೆಚ್ಚ ಸರಿದೂಗಿಸಿಕೊಳ್ಳಲು ಬಿಯರ್ ಕಂಪನಿಗಳು ಫೆಬ್ರವರಿ ತಿಂಗಳಲ್ಲಿ ಬಿಯರ್​ ಬೆಲೆ 10 ರೂ.ವರೆಗೆ ಏರಿಕೆ ಮಾಡಿತ್ತು. ಈಗ ಕಂಪನಿಗಳು ಕಚ್ಚಾ ವಸ್ತುಗಳ ಬೆಲೆ ಏರಿಕೆ ಕಾರಣ ನೀಡಿ ಬಿಯರ್ ದರ ಏರಿಕೆ ಮಾಡಿವೆ. ಈ ಮೂಲಕ 15 ತಿಂಗಳ ಅಂತರದಲ್ಲಿ ಬಿಯರ್‌ ಬೆಲೆ ಸುಮಾರು 50 ರಿಂದ 60 ರೂ. ವರೆಗೆ ಹೆಚ್ಚಳವಾದಂತಾಗಿದೆ.

ಕೆಲವು ಕಂಪನಿಗಳ ಬಿಯರ್​ ದರ ಕಳೆದ ಗುರುವಾರದಿಂದ ಏರಿಕೆಯಾಗಿದೆ. ಇನ್ನು ಕೆಲವು ಕಂಪನಿಗಳ ಪರಿಷ್ಕೃತ ದರ ಮಂಗಳವಾರ, ಬುಧವಾರದಿಂದ ಜಾರಿಯಾಗಲಿದೆ. ಎಲ್ಲ ಬ್ರ್ಯಾಂಡ್​ಗಳ ಬಿಯರ್ ಬೆಲೆ ಪ್ರತಿ ಬಾಟಲಿಗೆ 10 ರಿಂದ 20 ರೂಪಾಯಿವರೆಗೆ ಹೆಚ್ಚಳವಾಗಿದೆ. ಇಷ್ಟಾದರೂ ಮದ್ಯಪಾನ ಆರೋಗ್ಯ ಹಾನಿಕಾರ ಅಂದ್ರೂ ಮದ್ಯ ಕುಡಿಯುವರ ಸಂಖ್ಯೆ ಕಡಿಮೆಯಾಗಿಲ್ಲ.

ಒಟ್ಟಿನಲ್ಲಿ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಅಧಿಕಾರದ ಬಂದ ನಂತರ ಒಂದಲ್ಲಾ ಒಂದು ವಸ್ತುಗಳು ಏರಿಕೆಯಾಗುತ್ತಲೇ ಬಂದಿವೆ. ರಾಜ್ಯ ಸರ್ಕಾರ ಮೊದಲಿಗೆ ಮದ್ಯದ ಮೇಲಿನ ಸುಂಕ ಏರಿಸಿತ್ತು.

ನಂತರ ಮುಂದ್ರಾಂಕ ಶುಲ್ಕವನ್ನು ಏರಿಕೆ ಮಾಡಿತ್ತು. ಕೊನೆಗೆ ಬಿತ್ತನೆ ಬೀಜದ ಬೆಲೆ ಶೇ50-60 ರಷ್ಟು ಹೆಚ್ಚಳ ಮಾಡಿತ್ತು. ಪೆಟ್ರೋಲ್​ ಡೀಸೆಲ್​ ಬೆಲೆ ಏರಿಕೆ, ನಂತರ ನಂದಿನಿ ಹಾಲಿನ ದರ ಏರಿಕೆ ಮಾಡಿತ್ತು. ಹೀಗೆ ಬೆಲೆ ಏರಿಕೆ ಕ್ರಾಂತಿ ನಡೆಯುತ್ತಲೇ ಇದೆ ಎಂದರೆ ತಪ್ಪಾಗಲಾರದು.

You may also like

Leave a Comment