Actor Darshan: ಸನ್ನಡತೆ ಆಧಾರದ ಮೇಲೆ ಜೈಲಿನಿಂದ ಹೊರಬಂದಿದ್ದ ಮಾಜಿ ಖೈದಿ ಸಿದ್ದಾರೂಢಗೆ ಇದೀಗ ಮತ್ತೆ ಪೊಲೀಸರು ಜೈಲು ದರ್ಶನ ಮಾಡುವ ಸಿದ್ಧತೆಯಲ್ಲಿದ್ದಾರೆ ಎಂದು ವರದಿಯಾಗಿದೆ. ಜೈಲಿನಿಂದ ಬಿಡುಗಡೆ ಹೊಂದಿದ್ದ ಬಳಿಕ ಹೊರಬಂದು ನಟ ದರ್ಶನ್‌ರನ್ನು ಜೈಲಿನಲ್ಲಿ ಭೇಟಿ ಮಾಡಿದ್ದೆ ಎಂದು ಸುಳ್ಳು ಹೇಳಿದ್ದೇ ಇದೀಗ ಈತನ ಮೇಲಿರುವ ಆರೋಪ.
ಕೊಲೆ ಪ್ರಕರಣದಲ್ಲಿ ಸಿದ್ದಾರೂಢ ಬಳ್ಳಾರಿ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸಿದ್ದರು. ಸನ್ನಡತೆ ಆಧಾರದಲ್ಲಿ ಬಿಡುಗಡೆಯಾಗುವ ಮೊದಲು ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. ಹಾಗಾಗಿ ಶಿಕ್ಷೆ ಪೂರ್ತಿಯಾಗುವ ಮೊದಲೇ ಸನ್ನಡತೆ ಆಧಾರದಲ್ಲಿ ಈತ ಹೊರಗೆ ಬಂದಿದ್ದು, ನಟ ದರ್ಶನ್ ವಿಚಾರದಲ್ಲಿ ಸುಳ್ಳು ಹೇಳಿ ಓಡಾಡಿಕೊಂಡಿದ್ದ ಎನ್ನಲಾಗಿದೆ. ಈಗ ಅದೇ ಈತನ ಪಾಲಿಗೆ ಮುಳುವಾಗಿದೆ.
ನಟ ದರ್ಶನ್ ಅವರನ್ನು ಭೇಟಿ ಮಾಡಿದ್ದು, ಅವರಿಗೆ ಧ್ಯಾನ ಮಾಡುವುದನ್ನು ಹೇಳಿಕೊಟ್ಟಿದ್ದೇನೆ ಎಂದು ಹೇಳಿದ್ದು, ದರ್ಶನ್‌ಗೆ ವಿಐಪಿ ಸೆಲ್ ನೀಡಲಾಗಿದ್ದು, ಅಲ್ಲಿ ಟಿವಿ ಇರುತ್ತದೆ. ಜೊತೆಗೆ ಜೈಲು ಊಟವನ್ನು ನಾಯಿ ಕೂಡಾ ತಿನ್ನುವುದಿಲ್ಲ, ದರ್ಶನ್ ಹೇಗೆ ತಿನ್ನುತ್ತಾರೆ ಎಂದು ಮಾಧ್ಯಮವೊಂದರಲ್ಲಿ ಕುಳಿತು ಹೇಳಿದ್ದರು.
ಇದು ಜೈಲಾಧಿಕಾರಿಗಳಿಗೆ ಸಂಕಷ್ಟ ತಂದಿದ್ದು, ದರ್ಶನ್ ಅವರನ್ನು ಭೇಟಿ ಮಾಡಲು ಅವಕಾಶ ಇಲ್ಲದಿದ್ದರೂ ಈತ ಭೇಟಿ ಮಾಡಿದ್ದು ಹೇಗೆ ಎಂದು ಉನ್ನತ ಅಧಿಕಾರಿಗಳು ಜೈಲು ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇದಕ್ಕೆ ಕಾನೂನು ಮುಖಾಂತರ ಉತ್ತರ ಕೊಡಲು ಇದೀಗ ಕಾರಾಗೃಹ ಅಧಿಕಾರಿಗಳು ಮುಂದಾಗಿದ್ದಾರೆ.
ಜೈಲಿನ ವ್ಯವಸ್ಥೆ ಕುರಿತು ಅವಹೇಳನ ಮಾಡಿದ್ದಲ್ಲದೇ, ಜೈಲಿನ ಊಟ ನಾಯಿ ಕೂಡಾ ತಿನ್ನಲ್ಲ ಎಂದು ಹೇಳಿರುವ ಸಿದ್ದಾರೂಢಗೆ ಪೊಲೀಸರು ಬಿಸಿ ಮುಟ್ಟಿಸಲು ಶೀಘ್ರದಲ್ಲೇ ಸಿದ್ದಾರೂಢರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
Viral Video: ಏನಿದು ಆಶ್ಚರ್ಯ.. ಸೈಕಲ್ ಹೊಡೆಯುವ ಹಸು, ವಿಡಿಯೋ ನೋಡಿದ್ರೆ ನೀವೇ ಬೆರಗಾಗ್ತೀರಾ !!
