Home » Kissing Video: ಬೈಕ್‌ನಲ್ಲಿ ತ್ರಿಬಲ್ ರೈಡಿಂಗ್, ಪ್ರೇಮಿಗಳ ಕಿಸ್ಸಿಂಗ್ ಕ್ರೇಜ್: ವಿಡಿಯೋ ವೈರಲ್! ಕೊನೆಗೆ ಏನಾಯ್ತು ಗೊತ್ತಾ?

Kissing Video: ಬೈಕ್‌ನಲ್ಲಿ ತ್ರಿಬಲ್ ರೈಡಿಂಗ್, ಪ್ರೇಮಿಗಳ ಕಿಸ್ಸಿಂಗ್ ಕ್ರೇಜ್: ವಿಡಿಯೋ ವೈರಲ್! ಕೊನೆಗೆ ಏನಾಯ್ತು ಗೊತ್ತಾ?

0 comments
Kissing Video

Kissing Video: ಗೆಳೆಯನ ಬೈಕ್‌ನಲ್ಲಿ ಹೆಲ್ಮೆಟ್ ಹಾಕದೇ ತ್ರಿಬಲ್ ರೈಡಿಂಗ್ ಮಾಡಿದ್ದು ಅಲ್ಲದೇ ಬೈಕ್ ಹಿಂದೆ ಕುಳಿತ ಪ್ರೇಮಿಗಳು ರಸ್ತೆಯುದ್ದಕ್ಕೂ ಚುಂಬಿಸುತ್ತಾ ಸಾಗಿದ್ದಾರೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಕಿಸ್ಸಿಂಗ್ ವಿಡಿಯೋ ಭಾರಿ ವೈರಲ್ ಆಗಿದೆ. ಆದ್ರೆ ಇದೇ ವೇಳೆ ಜೋಡಿಗಳಿಗೆ ಸಂಕಷ್ಟವೂ ಹೆಚ್ಚಾಗಿದೆ. ಮೋಟಾರು ವಾಹನ ನಿಯಮ ಉಲ್ಲಂಘನೆ ಜೊತೆಗೆ ಸಾರ್ವಜನಿಕ ರಸ್ತೆಯಲ್ಲಿ ಅಸಭ್ಯವಾಗಿ ವರ್ತಿಸಿರುವುದು ಹಾಗೂ ಚುಂಬನ ಸಾಹಸದ ಮೂಲಕ ರಸ್ತೆಯಲ್ಲಿ ನಿಯಮ ಅನುಸರಿಸದ ಕೇಸು ದಾಖಲು ಮಾಡಲಾಗಿದೆ.

ಹೌದು, ರಾಜಾ ಇನ್‌ಸ್ಟಾ ಅನ್ನೋ ಖಾತೆಯಲ್ಲಿ ಈ ಕಿಸ್ಸಿಂಗ್ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ಗೆಳೆಯ ಬೈಕ್‌ನ ಹಿಂಭಾದಲ್ಲಿ ಈ ಪ್ರೇಮಿಗಳು (Couple) ಕುಳಿತುಕೊಂಡು ಬೈಕ್ ವೇಗವಾಗಿ ಸಾಗುತ್ತಿದ್ದಂತೆ ಈ ಜೋಡಿ ಮೊಬೈಲ್ ಕ್ಯಾಮೆರಾದಲ್ಲಿ ವಿಡಿಯೋ ರೆಕಾರ್ಡ್ ಆರಂಭಿಸಿದ್ದಾರೆ. ಬಳಿಕ ಕ್ಯಾಮೆರಾ ನೋಡಿಕೊಂಡು ಚುಂಬಿಸಿದ್ದಾರೆ. ಹಲವು ಬಾರಿ ಈ ಜೋಡಿ ರಸ್ತೆಯಲ್ಲಿ ಈ ರೀತಿ ಚುಂಬಿಸುತ್ತಾ ಸಾಗಿದೆ.

ಈ ವಿಡಿಯೋ ಕೆಲ ಹೊತ್ತಲ್ಲೇ ಭಾರಿ ವೈರಲ್ ಆಗಿದೆ. ಜೊತೆಗೆ ಅಷ್ಟೇ ಆಕ್ರೋಶಗಳು ವ್ಯಕ್ತವಾಗಿದೆ. ಟ್ರಾಫಿಕ್ ನಿಯಮ ಉಲ್ಲಂಘನೆ ಜೊತೆಗೆ ಅಸಭ್ಯ ನಡೆದೆ ಎಲ್ಲಾ ಪ್ರಕರಣ ದಾಖಲಿಸಿ ಈ ಜೋಡಿಗೆ ಪಾಠ ಕಲಿಸಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ಈ ಜೋಡಿಗಳ ಕಿಸ್ಸಿಂಗ್ ಇದೇ ಮೊದಲಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿ ಕಿಸ್ಸಿಂಗ್ ಮೂಲಕವೇ ಭಾರಿ ಜನಪ್ರಿಯತೆ ಪಡೆದುಕೊಂಡಿದೆ. ವಿವಿಧ ಕಡೆಗಳಲ್ಲಿ, ವಿವಿಧ ಬಗೆಯಲ್ಲಿ ಚುಂಬಿಸಿದ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿ ಪೋಸ್ಟ್ ಮಾಡಿದೆ. ಚುಂಬನ ರೀಲ್ಸ್ ಮೂಲಕವೇ ಈ ಜೋಡಿ ವೈರಲ್ ಆಗಿದೆ. ಇಷ್ಟು ದಿನ ಈ ವಿಡಿಯೋಗಳಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿತ್ತು. ಆದರೆ ಇದೀಗ ಸಾರ್ವಜನಿಕ ಪ್ರದೇಶದಲ್ಲಿ ಚುಂಬಿಸಿ ವಿವಾದಕ್ಕೆ ಗುರಿಯಾಗಿದೆ.

You may also like

Leave a Comment