Home » Darshan Thoogudeepa: ನಟ ದರ್ಶನ್ ಅರೆಸ್ಟ್ ಮಾಡಿದ ಪೊಲೀಸ್ ಅಧಿಕಾರಿ ಎಸಿಪಿ ಚಂದನ್‌ ಅವರಿಗೆ ಸಂಕಷ್ಟ !?

Darshan Thoogudeepa: ನಟ ದರ್ಶನ್ ಅರೆಸ್ಟ್ ಮಾಡಿದ ಪೊಲೀಸ್ ಅಧಿಕಾರಿ ಎಸಿಪಿ ಚಂದನ್‌ ಅವರಿಗೆ ಸಂಕಷ್ಟ !?

0 comments
Darshan Thoogudeepa

Darshan Thoogudeepa: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಆಗಿದ್ದ ಖ್ಯಾತ ನಟ, ಹಣ ಬಲ, ಅಭಿಮಾನ ಬಳಗ, ಇನ್ಫ್ಯೂಲೆನ್ಸ್ ಇರುವ ದರ್ಶನ್ ತೂಗೂದೀಪ್ ಅವರನ್ನು ಮೈಸೂರಿಗೆ ಹೋಗಿ ನೇರವಾಗಿ ಅರೆಸ್ಟ್ ಮಾಡಿಕೊಂಡು, ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರು ಎಸಿಪಿ ಚಂದನ್. ಇದೇನು ಸುಲಭದ ಕೆಲಸವಲ್ಲ. ಸದ್ಯ ದರ್ಶನ್ ತೂಗುದೀಪ್ ಅವರನ್ನ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಅರೆಸ್ಟ್ ಮಾಡಿದ್ದ & ನಿರ್ಭಯವಾಗಿ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ಎಸಿಪಿ ಚಂದನ್ ಅವರಿಗೆ ದೊಡ್ಡ ಕಂಟಕ ಎದುರಾಗಿದೆ ಎಂಬ ಆರೋಪ ಕೇಳಿಬಂದಿದೆ.

ಕರ್ನಾಟಕ ಪೊಲೀಸ್ ಖದರ್ ಸ್ವಲ್ಪ ಖಾರವಾಗಿಯೇ ಇದೆ ಅನ್ನೋದು ಮತ್ತೇ ಮತ್ತೇ ಸಾಬೀತು ಆಗಿದೆ. ಯಾಕಂದ್ರೆ ಕರ್ನಾಟಕ ಖಾಕಿ ಪಡೆ ಕಂಡರೆ ಕಳ್ಳರು, ರೌಡಿಗಳು, ಸಮಾಜಘಾತುಕರು ಹೆದರುತ್ತಾರೆ. ಹೌದು, ಕರ್ನಾಟಕದ ಪೊಲೀಸರ ಹವಾ ಜೋರಾಗಿಯೇ ಇದೆ ಅಂದರೆ ತಪ್ಪಾಗಲಾರದು. ಹೀಗೆ ಭಾರಿ ಹೆಸರು ಮಾಡಿರುವ ಪೊಲೀಸ್ ಅಧಿಕಾರಿಗಳ ಪೈಕಿ ಎಸಿಪಿ ಚಂದನ್ ಅವರು ಕೂಡ ಒಬ್ಬರು. ಆದರೆ ಇದೇ ಎಸಿಪಿ ಚಂದನ್ ಅವರನ್ನು ಇದೀಗ ಬೇಕು ಅಂತಾ ಟಾರ್ಗೆಟ್ ಮಾಡಿ ಸುಳ್ಳು ಆರೋಪ ಹೊರಿಸುತ್ತಿರುವ ಮಾತು ಕೇಳಿಬಂದಿದೆ.

ಮುಖ್ಯವಾಗಿ ದರ್ಶನ್ ತೂಗುದೀಪ್ (Darshan Thoogudeepa) ಅವರನ್ನು ಬಂಧಿಸಿದ್ದ ದಕ್ಷ ಅಧಿಕಾರಿ ಎಸಿಪಿ ಚಂದನ್ ಅವರ ವಿರುದ್ಧ ಪ್ರತಾಪ್ ಸಿಂಹ ಇದೀಗ ಗಂಭೀರ ಆರೋಪ ಒಂದನ್ನ ಮಾಡಿದ್ದಾರೆ. ಈ ಕುರಿತಾಗಿ ಟ್ವೀಟ್ ಒಂದನ್ನ ಮಾಡಿರುವ ಪ್ರತಾಪ್ ಸಿಂಹ, ‘ಸಹೋದರ ಪುನೀತ್ ಕೆರೆಹಳ್ಳಿ ಬಿಡುಗಡೆ ಆಗಿದ್ದಾನೆ. ಆತನನ್ನು ಠಾಣೆಯಲ್ಲಿ ಬೆತ್ತಲುಗೊಳಿಸಿ ಹಿಂಸೆ ಕೊಟ್ಟಿರುವ ACP ಚಂದನ್ ಅವರೇ, ನಾಳೆ ಸ್ಟೇಷನ್ ಗೆ ಬರ್ತೀನಿ, ನೀವು ಇರಬೇಕು.’ ಎಂದು ಹೇಳಿ ಎಚ್ಚರಿಕೆಯ ನೀಡಿದ್ದಾರೆ. ಆದರೆ ಈ ವಿಚಾರಕ್ಕೆ ಮತ್ತು ದರ್ಶನ್ ತೂಗುದೀಪ್ ಬಂಧನಕ್ಕೂ ಲಿಂಕ್ ಮಾಡಿ ಕೆಲವರು ಆರೋಪ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿ ಮಾಡುತ್ತಿದೆ. ಒಟ್ಟಿನಲ್ಲಿ ಇದೊಂದು ಸುಳ್ಳು ಆರೋಪವಾಗಿ ಮಾತ್ರ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ.

ಇನ್ನು ನಟ ದರ್ಶನ್ ತೂಗುದೀಪ್ ಅವರಿಗೆ ಸದ್ಯಕ್ಕೆ ಜಾಮೀನು ಸಿಗುವುದು ಚಾರ್ಜ್ ಶೀಟ್ ಸಲ್ಲಿಕೆ ಆದ ನಂತರ. ಹೀಗಾಗಿ ಎಸಿಪಿ ಚಂದನ್ ಅವರ ನೇತೃತ್ವದ ತಂಡ ಪ್ರಕರಣದ ಬಗ್ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ ನಂತರವಷ್ಟೇ ದರ್ಶನ್ ಅವರು ರಿಲೀಸ್ ಆಗುವುದು ಯಾವಾಗ? ಎಂಬ ಪ್ರಶ್ನೆಗೆ ಪಕ್ಕಾ ಉತ್ತರ ಸಿಗಲಿದೆ.

Maharaja movie: ‘ಮಹಾರಾಜ’ ಸಿನಿಮಾದಲ್ಲಿ ವಿಜಯ್ ಸೇತುಪತಿ ಫ್ರೀ ನಟನೆ: ಅರೆ! ಫ್ರೀ ಕಾಲ್‌ಶೀಟ್ ಕೊಡಲು ಕಾರಣವಾದ್ರು ಏನು?

You may also like

Leave a Comment