Home » Wayanad Landslide: ವಯನಾಡು ದುರಂತಕ್ಕೆ ಕಂಬನಿ ಮಿಡಿದ ಚಿತ್ರರಂಗ : ಲಕ್ಷ ಲಕ್ಷ ದೇಣಿಗೆ ಕೊಟ್ಟ ನಟ ನಟಿಯರು ಯಾರ್ಯಾರು..? ನಮ್ಮ ಕನ್ನಡದ ನಟಿಯೂ ಇದ್ದಾರೆ..!

Wayanad Landslide: ವಯನಾಡು ದುರಂತಕ್ಕೆ ಕಂಬನಿ ಮಿಡಿದ ಚಿತ್ರರಂಗ : ಲಕ್ಷ ಲಕ್ಷ ದೇಣಿಗೆ ಕೊಟ್ಟ ನಟ ನಟಿಯರು ಯಾರ್ಯಾರು..? ನಮ್ಮ ಕನ್ನಡದ ನಟಿಯೂ ಇದ್ದಾರೆ..!

0 comments
Wayanad Landslide

Wayanad landslide: ಕೇರಳದ ವಯನಾಡಿನ ಮುಂಡಕ್ಕೈ, ಚೂರಲ್‌ಮಾಲಾ, ಅತ್ತಮಾಲಾ, ಮತ್ತು ನೂಲ್‌ಪುಳ ಗ್ರಾಮಗಳು ಭೀಕರ ದುರಂತಕ್ಕೆ ನಲುಗಿ ಹೋಗಿವೆ. ದುರಂತ ನಡೆದು 3 ದಿನ ಕಳೆದರು ಇನ್ನು ಸಾವಿನ ಸಂಖ್ಯೆ ಏರುತ್ತಲೇ ಇದೆ. 300ಕ್ಕೂ ಹೆಚ್ಚು ಜನ ಸಾವನ್ನಪ್ಪಿದರೆ, ೨೦೬ ಮಂದಿ ನಾಪತ್ತೆಯಾಗಿರುವ ಬಗ್ಗೆ ಸದ್ಯಕ್ಕೆ ಮಾಹಿತಿ ದೊರೆಕಿದೆ. ಇನ್ನು ಎಷ್ಟು ಮಂದಿ ನಾಪತ್ತೆಯಾಗಿದ್ದಾರೆ, ಹಾಗೂ ಸತ್ತಿದ್ದಾರೆ ಅನ್ನುವುದಕ್ಕೆ ನಿಖರ ಲೆಕ್ಕ ಇಲ್ಲ. ಇನ್ನು ಘಟನೆಯಲ್ಲಿ ಬದುಕುಳಿದವರ ಬದುಕು ಮೂರಾಬಟ್ಟೆಯಾಗಿದೆ. ತಮ್ಮವರನ್ನು, ಮನೆ ಮಠವನ್ನು ಕಳೆದುಕೊಂಡು ಅಕ್ಷರಶಃ ಬದುಕು ನಲುಗಿ ಹೋಗಿದೆ. ಅವರ ಮುಂದಿನ ಬದುಕು ಅವರಿಗೆ ಸಹಾಯ ಚಾಚುವ ದೊಡ್ಡ ಮನಸುಗಳ ಕೈಯಲ್ಲಿದೆ. ಈಗಾಗಲೇ ಅನೇಕ ಚಿತ್ರರಂಗದ ನಟ-ನಟಿಯರು ಸಹಾಯ ಹಸ್ತ ಚಾಚಿದ್ದಾರೆ.

ದುರಂತದಲ್ಲಿ ಉಳಿದವರಿಗಾಗಿ ಸಹಾಯ ಮಾಡುವವರು ದೇಣಿಗೆ ನೀಡಿ ಎಂದು ಕೇರಳ ಸಿರಂ ಪಿಣರಾಯಿ ವಿಜಯನ್ ಕೇಳಿಕೊಂಡಿದ್ದಾರೆ. ಅನೇಕ ಮಂದಿ ತಮ್ಮಿಂದಾದ ಸಹಾಯವನ್ನು ಈಗಾಗಲೇ ಮಾಡಿದ್ದಾರೆ. ಯಾವಾಗ, ಎಲ್ಲೇ ದುರಂತಗಳು ಸಂಭವಿಸಲಿ ಸಿನಿಮಾ ತಾರೆಯರು ಸಹಾಯಹಸ್ತ ಚಾಚದೆ ಇರಲಾರರು. ತಮ್ಮ ಅಭಿಮಂಆಣಿಗಳಿಗಾಗಿ ಕೈಲಾದ ಸಹಾಯವನ್ನು ಮಾಡುತ್ತಾರೆ. ಇದೀಗ ಈ ಬಾರಿಯೂ ವಯನಾಡು ದುರಂತಕ್ಕೆ ಅನೇಕ ಸ್ಟಾರ್‌ಗಳು ಲಕ್ಷ ಲಕ್ಷ ದೇಣೀಗೆ ನೀಡುವ ಮೂಲಕ ಸ್ಪಂದಿಸಿದ್ದಾರೆ. ಮಲಯಾಳಂನ ತಾರೆಯರಾದ ಮಮ್ಮುಟ್ಟಿ, ದುಲ್ಕರ್ ಸಲ್ಮಾನ್, ಫಹಾದ್ ಫಾಸಿಲ್, ನಜ್ರಿಯಾ ಹಾಗೂ ತಮಿಳು ನಟರಾದ ಸೂರ್ಯ ದಂಪತಿ ಮತ್ತು ನಟ ವಿಕ್ರಮ್ ಹಾಗೂ ಇನ್ನಿತರರು ಕೇರಳ ಸಿಎಂ ಸಂಕಷ್ಟ ಪರಿಹಾರ ನಿಧಿಗೆ ದೇಣಿಗೆಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.

ನಟ ವಿಕ್ರಂ ಅವರು ಕೇರಳ ದುರಂತದ ಬಗ್ಗೆ ಕೇಳಿ ಅತೀವ ನೋವುಂಟಾಗಿದೆ. ತಮ್ಮವರನ್ನು ಕಳೆದುಕೊಂಡ ಮನೆಯವರಿಗೆ ನೋವು ಭರಿಸುವ ಶಕ್ತಿ ದೇವರು ನೀಡಲಿ ಎಂದು ಟ್ವೀಟ್‌ ಮಾಡಿ ಕೆರಳ ಸಿಎಂ ಫಂಡ್‌ ಗೆ 20 ಲಕ್ಷ ರೂ. ದೇಣಿಗೆ ನೀಡಿರುವುದಾಗಿ ಬರೆದುಕೊಂಡಿದ್ದಾರೆ. ಇನ್ನು ತಮಿಳು ಚಿತ್ರರಂಗದ ನಟ ಹಾಗೂ ನಟಿ ದಂಪತಿಯಾರಾದ ಸೂರ್ಯ-ಜ್ಯೋತಿಕಾ ಮತ್ತು ಅವರ ಸಹೋದರ ಕಾರ್ತಿ ಜೊತೆಯಾಗಿ 50 ಲಕ್ಷ ರೂ. ದೇಣಿಗೆ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇನ್ನು ತಮ್ಮದೇ ತಾಯಿನೆಲದ ಮಲಯಾಳಂ ನಟ ಮಮ್ಮುಟ್ಟಿ ಮತ್ತು ಅವರ ಪುತ್ರ ದುಲ್ಕರ್ ಸಲ್ಮಾನ್ ಅವರು ಜೊತೆಗೂಡಿ ₹35 ಲಕ್ಷ ಪರಿಹಾರ ನಿಧಿಗೆ ನೀಡಿರುವ ಬಗ್ಗೆ ವರದಿಯಾಗಿದೆ. ಹಾಗೆ ಇನ್ನೂ ಬೇಕಾದಲ್ಲಿ ಮುಂದಿನ ದಿನಗಳಲ್ಲಿ ಸಹಾಯ ಮಾಡಲಾಗುವುದು ಎಂದು ಮಮ್ಮುಟ್ಟಿ ಸುದ್ದಿಗಾರರೊಂದಿಗೆ ಹೇಳಿಕೊಂಡಿದ್ದಾರೆ.

ಹಾಗೆ ಮಲಯಾಳಂ ನಟರಾದ ಫಹಾದ್ ಫಾಸಿಲ್ ಹಾಗೂ ನಜ್ರಿಯಾ ದಂಪತಿ 25 ಲಕ್ಷ ರೂ. ಕೇರಳ ಸಿಎಂ ಫಂಡ್‌ಗೆ ಕೊಟ್ಟಿದ್ದು ಈ ಬಗ್ಗೆ ಪ್ರೆಸ್ ನೋಟ್ ರಿಲೀಸ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ಕೇವಲ ಮಲಯಾಲಂ, ತಮಿಳು ಮಾತ್ರವಲ್ಲದೆ ನಮ್ಮ ಕನ್ನಡ ನಾಡಿನ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಕೂಡ 10 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅವರಿಗೆ ಕೇರಳದಲ್ಲೂ ಬಹು ಸಂಖ್ಯೆಯ ಅಭಿಮಾನಿಗಳು ಇದ್ದಾರೆ ಅನ್ನೋದು ಇತ್ತೀಚೆಗೆ ಅವರು ಕೇರಳ ಭೇಟಿ ನೀಡಿದ್ದಾಗ ಅಲ್ಲಿ ನೆರೆದಿದ್ದ ಅಭಿಮಾನಿಗಳನ್ನು ನೋಡಿ ಆಶ್ಚರ್ಯಗೊಂಡಿದ್ದರು.

You may also like

Leave a Comment