Home » Ilaya Raja: ‘ಮಂಜುಮ್ಮೇಲ್ ಬಾಯ್ಸ್’ ವಿರುದ್ಧ ಸಮರ ಸಾರಿ, ಕೇಸ್​ ಗೆದ್ದ ಇಳಯರಾಜ – ಸಿಕ್ಕ ಪರಿಹಾರ ಮೊತ್ತ ಎಷ್ಟು?

Ilaya Raja: ‘ಮಂಜುಮ್ಮೇಲ್ ಬಾಯ್ಸ್’ ವಿರುದ್ಧ ಸಮರ ಸಾರಿ, ಕೇಸ್​ ಗೆದ್ದ ಇಳಯರಾಜ – ಸಿಕ್ಕ ಪರಿಹಾರ ಮೊತ್ತ ಎಷ್ಟು?

0 comments
Ilaya Raja

Ilaya Raja: ‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಸುಮಾರು 250 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗಿದೆ. ಆದರೀಗ ಈ ಚಿತ್ರದ ನಿರ್ಮಾಪಕರು ಈಗ ತೊಂದರೆ ಸಿಲುಕಿದ್ದಾರೆ. ಅದೇನೆಂದರೆ ಈ ಸಿನಿಮಾ ತಂಡದ ವಿರುದ್ಧ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ಕೇಸ್ ಹಾಕಿದ್ದು, ಕೇಸ್​ನಲ್ಲಿ ಅವರಿಗೆ ಭರ್ಜರಿ ಜಯ ಸಿಕ್ಕಿದೆ.

ಹೌದು, ಮಂಜುಮ್ಮೇಲ್ ಬಾಯ್ಸ್(Manjummel Boys) ಸಿನಿಮಾದಲ್ಲಿ ಇಳಯರಾಜ(Ilaya Raja) ಸಂಗೀತವುಳ್ಳ ಗುಣ ಚಿತ್ರದ ಕಣ್ಮಣಿ ಹಾಡನ್ನು ಬಳಕೆ ಮಾಡಲಾಗಿತ್ತು. ಮಂಜುಮ್ಮೇಲ್ ಸಿನಿಮಾದಲ್ಲಿ ಹಲವು ಭಾಗಗಳಲ್ಲಿ ಕಣ್ಮಣಿ ಹಾಡು ಬಳಸಲಾಗಿದೆ. ಒಪ್ಪಿಗೆ ಪಡೆಯದೇ ಹಾಡು ಬಳಕೆ ಮಾಡಿದ್ದರಿಂದ ಇಳಯರಾಜ ಕೋರ್ಟ್ ಮೆಟ್ಟಿಲೇರಿದ್ದರು. ಇಳಯರಾಜ ಅವರು 2 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ನ್ಯಾಯಾಲಯದ ಬಳಿ ಮನವಿ ಮಾಡಿಕೊಂಡಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದ್ದು, ಇಳಯರಾಜ ಅವರಿಗೆ 60 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸೂಚನೆ ನೀಡಿದೆ.

ಅಂದಹಾಗೆ ಮಂಜುಮ್ಮೇಲ್ ಬಾಯ್ಸ್’ ತಂಡದವರು ಕೋರ್ಟ್​ನಲ್ಲಿ ಸಾಂಗ್ ಹಕ್ಕು ಪಡೆದಿದ್ದಾಗಿ ವಾದ ಮುಂದಿಟ್ಟಿದ್ದಾರೆ. ‘ನಾವು ಮ್ಯೂಸಿಕ್ ಕಂಪನಿಯಿಂದ ಈ ಹಾಡಿನ ಬಳಕೆಗೆ ಹಕ್ಕನ್ನು ಪಡೆದಿದ್ದೇವೆ’ ಎಂದು ಸಿನಿಮಾ ತಂಡದ ಪರ ವಕೀಲರು ಹೇಳಿದರು. ಇದಕ್ಕೆ ಪ್ರತಿವಾದ ಮಂಡಿಸಿದ ಇಳಯರಾಜ ಪರ ವಕೀಲರು, ‘ಇಳಯರಾಜ ಅವರು ಮಾಡಿದ ಕೆಲಸಗಳಿಗೆ ಅವರು ಕೂಡ ಹಕ್ಕನ್ನು ಹೊಂದಿದ್ದಾರೆ’ ಎಂದರು. ಹೀಗಾಗಿ, ಇಳಯರಾಜ ಅವರು ಈ ಹಾಡನ್ನು ಬಳಸಲು ‘ಮಂಜುಮ್ಮೇಲ್ ಬಾಯ್ಸ್’ ತಂಡಕ್ಕೆ ಯಾವುದೇ ಒಪ್ಪಿಗೆ ನೀಡಿರಲಿಲ್ಲ. ಈಗ ರಾಯಲ್ಟಿ ರೂಪದಲ್ಲಿ ಇಳಯರಾಜ ಅವರಿಗೆ 60 ಲಕ್ಷ ರೂಪಾಯಿ ಅನ್ನು ‘ಮಂಜುಮ್ಮೇಲ್ ಬಾಯ್ಸ್’ ತಂಡ ನೀಡಿದೆ.

1991ರಲ್ಲಿ ಬಿಡುಗಡೆಯಾಗಿದ್ದ ತಮಿಳಿನ ಗುಣ ಚಿತ್ರದಲ್ಲಿ ಕಮಲ್ ಹಾಸನ್ ನಟಿಸಿದ್ದರು. ಈ ಚಿತ್ರದ ಹಾಡುಗಳು ಇಳಯರಾಯ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದ್ದವು. ಈ ಚಿತ್ರದ ‘ಕಣ್ಮಣಿ ಇ ಪ್ರೇಮಲೇ’ ಹಾಡು ಇಂದಿಗೂ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತದೆ. ಇದೇ ಹಾಡನ್ನು ಮಂಜುಮ್ಮೇಲ್ ಬಾಯ್ಸ್ ತಂಡ ಬಳಸಿತ್ತು. ಈ ಚಿತ್ರ ಬಿಡುಗಡೆಯಾದ ಬಳಿಕ ಹಾಡಿನ ಕ್ರೇಜ್ ಮತ್ತಷ್ಟು ಹೆಚ್ಚಾಗಿತ್ತು.

ಈ ಮೊದಲು ‘ಕೂಲಿ’ ಸಿನಿಮಾ ತಂಡದ ವಿರುದ್ಧ ಇಳಯರಾಜ ಕೇಸ್ ಹಾಕಿದ್ದರು. ‘ವಾ ವಾ ಪಕ್ಕಮ್ ವಾ..’ ಹಾಡಿನ ಹಕ್ಕು ತಮ್ಮದು ಎಂದಿದ್ದರು. ಆದರೆ, ಈ ಸಾಂಗ್​ನ ಹಕ್ಕು ಸೋನಿ ಬಳಿ ಇದೆ ಎಂಬುದು ಆ ಬಳಿಕ ತಿಳಿದಿತ್ತು. ಈ ಮೊದಲು ಕೂಡ ಇಳಯರಾಜ ಈ ರೀತಿಯ ಅನೇಕ ಕೇಸ್​ಗಳನ್ನು ಹಾಕಿದ್ದರು.

You may also like

Leave a Comment