Home » Sheikh hasina: ಶೇಕ್ ಹಸೀನಾಗೆ ಈ ಸ್ಥಿತಿ ಬರುತ್ತೆ ಅಂತ 2023ರಲ್ಲೇ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ! ಎಚ್ಚರಿಕೆ ವಿಡಿಯೋ ವೈರಲ್!

Sheikh hasina: ಶೇಕ್ ಹಸೀನಾಗೆ ಈ ಸ್ಥಿತಿ ಬರುತ್ತೆ ಅಂತ 2023ರಲ್ಲೇ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ! ಎಚ್ಚರಿಕೆ ವಿಡಿಯೋ ವೈರಲ್!

0 comments
Sheikh hasina

Sheikh hasina: ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ಹತ್ಯೆ ಯತ್ನಗಳು ನಡೆಯುತ್ತೆ. ಬಾಂಗ್ಲಾದೇಶ ಹೊತ್ತಿ ಉರಿಯುತ್ತೆ. ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಶೇಕ್ ಹಸೀನಾ (Sheikh hasina) ಪ್ರಾಣ ಉಳಿಸಿಕೊಳ್ಳಲು ಪರಾರಿಯಾಗುವ ಈ ಘಟನೆ ಕುರಿತು ಈಗಾಗಲೇ 2023ರ ಡಿಸೆಂಬರ್ ತಿಂಗಳಲ್ಲಿ ಭಾರತದ ಜ್ಯೋತಿಷಿ ಪ್ರಶಾಂತ್ ಕಿಣಿ ಭವಿಷ್ಯ ನುಡಿದಿದ್ದರು.

ಹೌದು, ಭಾರತದ ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ 2023ರ ಡಿಸೆಂಬರ್ ತಿಂಗಳಲ್ಲಿ ನುಡಿದ ಭವಿಷ್ಯ ಇದೀಗ ಭಾರಿ ವೈರಲ್ ಆಗುತ್ತಿದೆ. ಬಾಂಗ್ಲಾದೇಶದ ಸದ್ಯದ ಪರಿಸ್ಥಿತಿ, ಶೇಕ್ ಹಸೀನಾಗೆ ಎದುರಾಗುವ ಸಂಕಷ್ಟಗಳ ಕುರಿತು ಜ್ಯೋತಿಷಿ ಪ್ರಶಾಂತ್ ಕಿಣಿ 8 ತಿಂಗಳ ಮೊದಲೇ ಭವಿಷ್ಯ ನುಡಿದಿದ್ದರು. ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ಹತ್ಯೆ ಯತ್ನಗಳು ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದರು. ಇದೀಗ ಪ್ರಶಾಂತ್ ಕಿಣಿ ಮಾಡಿದ ಟ್ವೀಟ್ ಭವಿಷ್ಯ ಭಾರಿ ಸದ್ದು ಮಾಡುತ್ತಿದೆ.

ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾ  ಕುರಿತು ನನ್ನ ಭವಿಷ್ಯ ಎಂದು ಕೆಲ ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದ ಕಿಣಿ ಅವರು, ಶೇಕ್ ಹಸೀನಾ 2024ನೇ ವರ್ಷದ ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ತೀವ್ರ ಎಚ್ಚರಿಕೆ ವಹಿಸಬೇಕು. ಈ ತಿಂಗಳಲ್ಲಿ ಶೇಕ್ ಹಸೀನಾ ಮೇಲೆ ಹತ್ಯೆ ಯತ್ನಗಳು ನಡೆಯುವ ಸಾಧ್ಯತೆ ಇದೆ. ಹೀಗಾಗಿ ಅತೀವ ಎಚ್ಚರಿಕೆಯಿಂದ ಇರಬೇಕು ಎಂದು ಪ್ರಶಾಂತ್ ಕಿಣಿ ಭವಿಷ್ಯ ನುಡಿದಿದ್ದರು.

ಡಿಸೆಂಬರ್ 14, 2023 ರಂದು ಪ್ರಶಾಂತ್ ಕಿಣಿ ಈ ಭವಿಷ್ಯ ನುಡಿದಿದ್ದರು. ಈ ವೇಳೆ ಬಾಂಗ್ಲಾದೇಶದ ಚುನಾವಣೆ ಕಾವು ಜೋರಾಗಿತ್ತು. ಇದೇ ವೇಳೆ ಪ್ರಶಾಂತ್ ಕಿಣಿ ಎಚ್ಚರಿಕೆ ನೀಡಿದ್ದರು. ಇನ್ನು ಜನವರಿ 7, 2024ರಲ್ಲಿ ಬಾಂಗ್ಲಾದೇಶ ಚುನಾವಣೆ ನಡೆದಿತ್ತು. ಈ ವೇಳೆ ಶೇಕ್ ಹಸೀನಾ ನೇತತ್ವದ ಅವಾಮಿ ಲೀಗ್ 300 ಸ್ಥಾನಗಳಲ್ಲಿ 224 ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೇರಿತ್ತು. ಆದ್ರೆ ಯಶಸ್ವಿಯಾಗಿ ಪ್ರಧಾನಿಯಾಗಿರುವ ಶೇಕ್ ಹಸೀನಾ ಹತ್ಯೆ ಸಾಧ್ಯತೆ ಕುರಿತು ಯಾರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದೀಗ ಪ್ರಶಾಂತ್ ಕಿಣಿ ನುಡಿದ ಭವಿಷ್ಯ ನಿಜವಾಗಿದೆ.

You may also like

Leave a Comment