Home » Naga Chaitanya Engagement: ನಾಗ ಚೈತನ್ಯ ಖ್ಯಾತ ನಟಿಯ ಜೊತೆ ನಿಶ್ಚಿತಾರ್ಥ! ಫೋಟೋ ರೀವಿಲ್!

Naga Chaitanya Engagement: ನಾಗ ಚೈತನ್ಯ ಖ್ಯಾತ ನಟಿಯ ಜೊತೆ ನಿಶ್ಚಿತಾರ್ಥ! ಫೋಟೋ ರೀವಿಲ್!

133 comments
Naga Chaitanya Engagement

Naga Chaitanya Engagement: ನಟ ನಾಗ ಚೈತನ್ಯ ಅವರು ಸಮಂತಾ ರುತ್ ಪ್ರಭು ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆ ನಂತರ ಈ ಜೋಡಿ ಪರಸ್ಪರ ಸಮ್ಮತಿಯಿಂದ ವಿಚ್ಛೇದನೆ ಪಡೆದಿದ್ದರು. ಆದ್ರೆ ವಿಚ್ಛೇದನದ ನಂತರ ಇವರಿಬ್ಬರ ಮದುವೆ ಸುದ್ದಿ ಆಗಾಗ ಮುನ್ನೆಲೆಗೆ ಬರುತ್ತಿರುವುದು ಗೊತ್ತೇ ಇದೆ. ಸದ್ಯ ಇದೀಗ ಆಶ್ಚರ್ಯ ಅಂದ್ರೆ ನಟ ನಾಗ ಚೈತನ್ಯ ಇಂದೇ ನಿಶ್ಚಿತಾರ್ಥ (Naga Chaitanya Engagement) ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ.

ಹೌದು, ನಟ ನಾಗ ಚೈತನ್ಯ ಇಂಡಸ್ಟ್ರಿಯ ಖ್ಯಾತ ನಟಿಯ ಜೊತೆ ಆಗಸ್ಟ್ 8ರಂದೇ ಉಂಗುರ ಬದಲಾಯಿಸಿಕೊಳ್ಳಲಿದ್ದು ಎಂಗೇಜ್ ಆಗಲಿದ್ದಾರೆ. ತಂದೆ ನಾಗಾರ್ಜುನ ಫೊಟೋ ಶೇರ್ ಮಾಡಲಿದ್ದಾರಂತೆ. ನಾಗ ಚೈತನ್ಯ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿರುವುದು ಬೇರೆ ಯಾರ ಜೊತೆಗೂ ಅಲ್ಲ. ಅವರ ಜೊತೆ ಸುತ್ತಾಡಿ ಸುದ್ದಿಯಾಗಿದ್ದ, ​ ಗರ್ಲ್​ಫ್ರೆಂಡ್ ಆಗಿದ್ದ ನಟಿ ಶೋಭಿತಾ ಧೂಳಿಪಾಲ ಜೊತೆಗೆ ನಾಗ ಚೈತನ್ಯ ಎಂಗೇಜ್ಮೆಂಟ್ ಆಗಲಿದ್ದಾರೆ ಎಂಬ ಸುದ್ದಿ ಇದೆ.

ನಟ ನಾಗ ಚೈತನ್ಯ ಅವರು ಸಮಂತಾ ರುತ್ ಪ್ರಭು ವಿಚ್ಛೇದನೆ ಪಡೆದ ಆ ನಂತರ ನಾಗ ಚೈತನ್ಯ ಶೋಭಿತಾ ಧೂಳಿಪಾಲ ಜೊತೆ ಸುತ್ತಾಡುತ್ತಿದ್ದರು. ಅವರೊಂದಿಗೆ ವೆಕೇಷನ್​ಗೂ ಹೋಗಿದ್ದರು. ಅದಲ್ಲದೆ 2021 ರಲ್ಲಿ ನಾಗ ಚೈತನ್ಯ ಅವರ ಪತ್ನಿ ಸಮಂತಾ ರುತ್ ಪ್ರಭುವಿನಿಂದ ಬೇರ್ಪಟ್ಟ ನಂತರ ಇಬ್ಬರು ಡೇಟಿಂಗ್ ಮಾಡುತ್ತಿದ್ದರು. ನಾಗ ಚೈತನ್ಯ ಶೋಭಿತಾ ಧೂಳಿಪಾಲ ತಮ್ಮ ರಿಲೇಷನ್​ಶಿಪ್ ಬಗ್ಗೆ ಬಹಿರಂಗವಾಗಿ ಹೇಳದಿದ್ದರೂ ಅವರು ಒಟ್ಟಿಗೆ ಹಲವಾರು ಸಲ ಪ್ರೇಮಿಗಳಂತೆ ಕಾಣಿಸಿಕೊಂಡಿದ್ದಾರೆ. ಇದೆಲ್ಲವನ್ನೂ ನೋಡಿದ ಜನರೇ ಈ ಜೋಡಿ ಪಕ್ಕಾ ಕಮಿಟೆಡ್ ಎಂದು ಅಂದುಕೊಂಡಿದ್ದಾರೆ. ಅದಲ್ಲದೆ ಈಗ ಅವರ ನಿಶ್ಚಿತಾರ್ಥದ ಸುದ್ದಿ ಎಲ್ಲರಿಗೂ ಅಚ್ಚರಿ ಕೊಟ್ಟಿದೆ.

ಈಗಾಗಲೇ ಜೂನ್​ನಲ್ಲಿ ಅವರು ಯುರೋಪ್ ಹಾಲಿಡೇ ಎಂಜಾಯ್ ಮಾಡಿದ್ದರು. ಇದು ಅವರ ರಿಲೇಷನ್​ಶಿಪ್​ ಬಗ್ಗೆ ಮತ್ತಷ್ಟು ಗ್ಯಾರಂಟಿ ನೀಡಿದೆ. ಇನ್ನು ಅವರ ಟ್ರಿಪ್ ಫೋಟೋ ವೈರಲ್ ಆಗಿತ್ತು. ಒಟ್ಟಿನಲ್ಲಿ ನಾಗ ಚೈತನ್ಯ ಅವರ ಅಭಿಮಾನಿಗಳು ಎಂಗೇಜ್ಮೆಂಟ್ ಫೋಟೋಗಳಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಮತ್ತೊಂದು ಕುತೂಹಲಕಾರಿ ವಿಷಯವೆಂದರೆ ನಾಗಾ ಚೈತನ್ಯ ಅವರ ತಂದೆ ನಾಗಾರ್ಜುನ ಅವರು ಮಗನ ಎರಡನೇ ಮದುವೆ ಬಗ್ಗೆ ಅನೌನ್ಸ್ ಮಾಡಲು ಯೋಜಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಇದೆಲ್ಲದರ ನಡುವೆ ಶೋಭಿತಾ ಧೂಳಿಪಾಲ ಅವರು ಜಿಕ್ಯೂ ಇಂಡಿಯಾದ ಇತ್ತೀಚಿನ ಸಂದರ್ಶನದಲ್ಲಿ ಪ್ರೀತಿಯ ಬಗ್ಗೆ ಕೆಲವು ಮಾತುಗಳನ್ನು ಹಂಚಿಕೊಂಡಿದ್ದಾರೆ. ನಾನು ಯಾವಾಗಲೂ ಪ್ರೀತಿಯಲ್ಲಿರುತ್ತೇನೆ. ಪ್ರೀತಿಯು ಅಂತಹ ಉತ್ತಮ ಇಂಧನವಾಗಿದೆ. ಇದು ಬಹುಶಃ ಅವಶ್ಯಕತೆ ಮತ್ತು ಐಷಾರಾಮಿಯಾಗಿರುವ ಏಕೈಕ ವಿಷಯವಾಗಿದೆ ಎಂದಿದ್ದರು.

You may also like

Leave a Comment