10
Ration Card: ರೇಷನ್ ಕಾರ್ಡ್ (Ration Card) ದಾರರಿಗೆ ಗುಡ್ ನ್ಯೂಸ್ ಇಲ್ಲಿದೆ. ಹೌದು, ಆಹಾರ ಇಲಾಖೆ ಸಾರ್ವಜನಿಕರ ಮನವಿ ಹಿನ್ನೆಲೆಯಲ್ಲಿ ಇದೀಗ ಪಡಿತರ ಚೀಟಿ ಇರುವ ಎಲ್ಲರಿಗೂ ರೇಶನ್ ಕಾರ್ಡ್ ತಿದ್ದುಪಡಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಿದೆ. ಸದ್ಯ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ರಾಜ್ಯ ಆಹಾರ ಇಲಾಖೆ ಅವಕಾಶ ನೀಡಿದ್ದು ಸರ್ವರ್ ಓಪನ್ ಆಗಿದೆ ಎಂದು ತಿಳಿಸಿದೆ.
ಆಹಾರ ಇಲಾಖೆ ಸೂಚಿಸಿದ ಪ್ರಕಾರ ನಾವು ರೇಷನ್ ಕಾರ್ಡ್ ನಲ್ಲಿ ಏನೇನು ತಿದ್ದುಪಡಿ ಮಾಡಬಹುದು ಮತ್ತು ಯಾವಾಗ ಮಾಡಬಹುದು ಎಂದು ಇಲ್ಲಿದೆ ಮಾಹಿತಿ.
ಮುಖ್ಯವಾಗಿ ರೇಷನ್ ಕಾರ್ಡ್ ತಿದ್ದುಪಡಿಗೆ ಆಗಸ್ಟ್ 10ರಂದು ಬೆಳಗ್ಗೆ 10 ರಿಂದ ರಾತ್ರಿ 6 ರ ವರಗೆ ಅವಕಾಶವಿದೆ.
ಈ ಕೆಳಗಿನ ತಿದ್ದುಪಡಿಗೆ ಅವಕಾಶ ಇದೆ :
ಹೆಸರು ತಿದ್ದುಪಡಿ
ಹೆಸರು ಸೇರ್ಪಡೆ
ಹೆಸರು ಡಿಲೀಟ್ ಮಾಡುವುದು
ವಿಳಾಸ ಬದಲಾವಣೆ
ಫೋಟೋ ಬದಲಾವಣೆ
ಕುಟುಂಬ ಮುಖ್ಯಸ್ಥರ ಬದಲಾವಣೆ
ನ್ಯಾಯ ಬೆಲೆ ಅಂಗಡಿ ಬದಲಾವಣೆ ಮಾಡಬಹುದಾಗಿದೆ.
ಆದ್ರೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಪ್ರಾರಂಭ ಆಗಿರುವುದಿಲ್ಲ.
