Home » Henna Jihad: ಭುಗಿಲೆದ್ದಿದೆ ಮೆಹಂದಿ ಜಿಹಾದ್! ಹಿಂದೂ ಮಹಿಳೆಯರಿಗೆ ಮುಸ್ಲಿಮರು ಮೆಹಂದಿ ಹಚ್ಚುವಂತಿಲ್ಲ!

Henna Jihad: ಭುಗಿಲೆದ್ದಿದೆ ಮೆಹಂದಿ ಜಿಹಾದ್! ಹಿಂದೂ ಮಹಿಳೆಯರಿಗೆ ಮುಸ್ಲಿಮರು ಮೆಹಂದಿ ಹಚ್ಚುವಂತಿಲ್ಲ!

3 comments
Henna Jihad

Henna Jihad: ಲವ್‌ ಜಿಹಾದ್‌(Love Jihad), ಬೆನ್ನಲ್ಲೇ ಉತ್ತರಪ್ರದೇಶದಲ್ಲಿ ಇದೀಗ ಹೆನ್ನಾ ಜಿಹಾದ್‌(Henna Jihad) ತಲೆ ಎತ್ತಿದೆ. ಹೌದು, ಮುಜಾಫರ್‌ನಗರದಲ್ಲಿ ಹರಿಯಲಿ ತೀಜ್ ಹಬ್ಬದ ಸಂದರ್ಭದಲ್ಲಿ ಮೆಹಂದಿ ಹಚ್ಚುವ ಕುರಿತು ಹೊಸ ವಿವಾದ ಹುಟ್ಟಿಕೊಂಡಿದೆ.

ಹರಿಯಲಿ ತೀಜ್ ಹಬ್ಬದ ಸಂದರ್ಭದಲ್ಲಿ ಯಾವುದೇ ಮುಸ್ಲಿಂ ಯುವಕರು ಹಿಂದೂ ಮಹಿಳೆಯರಿಗೆ ಮೆಹಂದಿ ಹಚ್ಚುವುದು ಕಂಡುಬಂದರೆ, ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕ್ರಾಂತಿ ಸೇನೆಯ ಮಹಿಳಾ ಮೋರ್ಚಾ ಘೋಷಿಸಿದೆ. ಕ್ರಾಂತಿ ಸೇನಾ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಪೂನಂ ಚೌಧರಿ ಮಾತನಾಡಿ, ಹರಿಯಲಿ ತೀಜ್ ಹಿಂದೂಗಳಿಗೆ ಮಹತ್ವದ ಹಬ್ಬವಾಗಿದೆ. ಈ ಸಂದರ್ಭದಲ್ಲಿ ಯಾವುದೇ ಹಿಂದೂ ಮಹಿಳೆ ಮುಸ್ಲಿಂ ಯುವಕರಿಂದ ಮೆಹಂದಿ ಹಚ್ಚಿಸಿಕೊಳ್ಳಬಾರದು. ಇದು ಅವರ ಹಬ್ಬಕ್ಕೆ ಅಗೌರವ ಎಂದು ಪರಿಗಣಿಸಲಾಗಿದೆ.

ಒಂದು ವೇಳೆ ಮುಸ್ಲಿಂ ಯುವಕರು ನಿಯಮ ತಪ್ಪಿದಲ್ಲಿ ಕ್ರಾಂತಿ ಸೇನಾ ವಾಡಿಕೆಯಂತೆ ಇಂತಹ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಯಾವುದೇ ಮುಸ್ಲಿಂ ಯುವಕರು ಹಿಂದೂ ಮಹಿಳೆಯರಿಗೆ ಮೆಹಂದಿ ಹಚ್ಚುವುದು ಕಂಡುಬಂದರೆ ಕ್ರಮ ತೆಗೆದುಕೊಳ್ಳುತ್ತದೆ, ಏಕೆಂದರೆ ಅದು ಅವರ ಧರ್ಮಕ್ಕೆ ಅವಮಾನ ಎಂದು ಅವರು ನಂಬುತ್ತಾರೆ.

ಪಂಚಾಂಗದ ಪ್ರಕಾರ, ಹರಿಯಲಿ ತೀಜ್ ಹಬ್ಬವನ್ನು ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿಯಂದು ಆಚರಿಸಲಾಗುತ್ತದೆ. 2024 ರಲ್ಲಿ, ಹರಿಯಲಿ ತೀಜ್ ಹಬ್ಬವನ್ನು ಆಗಸ್ಟ್ 7 ರಂದು ಬುಧವಾರ ಆಚರಿಸಲಾಗುತ್ತದೆ. ಈ ಹರಿಯಲಿ ತೀಜ್ ಹಬ್ಬ ಉತ್ತರ ಭಾರತದ ರಾಜ್ಯಗಳಲ್ಲಿ ಜನಪ್ರಿಯವಾಗಿರುವ ಪ್ರಮುಖ ಹಬ್ಬವಾಗಿದೆ. ಇದನ್ನು ಶ್ರಾವಣ ಮಾಸದ ಶುಕ್ಲ ಪಕ್ಷ ತೃತೀಯದಂದು ಆಚರಿಸಲಾಗುತ್ತದೆ. ಈ ಸಮಯದಲ್ಲಿ, ವಿವಾಹಿತ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ಈ ಉಪವಾಸವನ್ನು ಆಚರಿಸುತ್ತಾರೆ.

ಇನ್ನು ತೀಜ್ ಹಬ್ಬವನ್ನು ಪಾರ್ವತಿ ದೇವಿಗೆ ಸಮರ್ಪಿಸಲಾಗಿದೆ. ಈ ಮಂಗಳಕರ ಹಬ್ಬದಂದು, ಪಾರ್ವತಿ ದೇವಿಗೆ ಪೂಜೆ, ಉಪವಾಸ ಇತ್ಯಾದಿಗಳನ್ನು ಮಾಡುವ ವಿಧಿ ಇದೆ ಮತ್ತು ಜನರು ಈ ದಿನ ಹಲವಾರು ಅಲಂಕಾರ ವಸ್ತುಗಳನ್ನು ದಾನ ಮಾಡುತ್ತಾರೆ. ಈ ಉಪವಾಸದ ಸಮಯದಲ್ಲಿ, ವಿವಾಹಿತ ಮಹಿಳೆಯರು ಹಸಿರು ಬಟ್ಟೆಗಳನ್ನು ಧರಿಸುತ್ತಾರೆ ಮತ್ತು ಮೆಹೆಂದಿಯನ್ನು ಹಚ್ಚುತ್ತಾರೆ. ಇದು ಅಲ್ಲಿನ ಜನರ ಪವಿತ್ರ ನಂಬಿಕೆಯು ಹೌದು.

You may also like

Leave a Comment