Physical Relation: ಪತ್ನಿಯೊಬ್ಬಳು ತನ್ನ ಪತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಶುಲ್ಕ ವಿಧಿಸುತ್ತಿದ್ದ ವಿಲಕ್ಷಣ ಪ್ರಕರಣ ಬೆಳಕಿಗೆ ಬಂದು ಇದೀಗ ಅದು ಕೋರ್ಟು ಮೆಟ್ಟಿಲೇರಿದೆ. ಈ ಘಟನೆ ತೈವಾನ್ ನಲ್ಲಿ ನಡೆದಿದ್ದು, ಪತ್ನಿಯ ಈ ನಡೆಯಿಂದ ಬೇಸತ್ತ ಪತಿ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ.
2014ರಲ್ಲಿ ಮದುವೆಯಾದ ಈ ಜೋಡಿಗೆ ಇಬ್ಬರು ಮಕ್ಕಳು ಕೂಡಾ ಇದ್ದಾರೆ. ಅವರಿಬ್ಬರಿಗೆ ಮದುವೆಯಾದ ನಂತರ ಮೂರು ವರ್ಷಗಳ ಕಾಲ ಎಲ್ಲವೂ ಸರಿ ಇತ್ತು. ಆದರೆ 2017 ರಲ್ಲಿ ಆತನ ಪತ್ನಿ ಖ್ಯಾತ ತೆಗೆದಿದ್ದಳು. ಅಲ್ಲಿಂದ ಆಕೆ ತಿಂಗಳಿಗೆ ಒಮ್ಮೆ ಮಾತ್ರ ಲೈಂಗಿಕ ಕ್ರಿಯೆ ಎಂಬ ಷರತ್ತನ್ನು ವಿಧಿಸಿದ್ದಳು. ಅಷ್ಟು ಸಮಯ ಹೇಗೋ ಲೈಂಗಿಕ ಕ್ರಿಯೆ ಆಗಾಗ ನಡೆಯುತ್ತಿತ್ತು. ಆದರೆ ನಂತರ 2019 ರ ಸುಮಾರಿಗೆ ಪತಿಯೊಂದಿಗೆ ಮಲಗಲು ಆಕೆ ಖಂಡತುಂಡವಾಗಿ ನಿರಾಕರಿಸಿದ್ದಾಳೆ. ಅಷ್ಟೇ ಅಲ್ಲ ಮಾತನಾಡುವುದನ್ನು ಬಿಟ್ಟಿದ್ದಾಳೆ.
ಆದರೆ ಪತಿ ರತಿ ಕ್ರೀಡೆಗೆ ಒತ್ತಾಯಿಸುತ್ತಿದ್ದ. ಆತನ ಬಲವಂತಕ್ಕೆ ಲೈಂಗಿಕ ಕ್ರಿಯೆಗೆ ಬಲವಂತದ ಮೇರೆಗೆ ಸಮ್ಮತಿ ಸೂಚಿಸಿ, ಒಮ್ಮೆ ಲೈಂಗಿಕ ಸಂಪರ್ಕ ಹೊಂದಲು 1,500 ರೂಪಾಯಿಯ ಶುಲ್ಕ ( ಅನ್ದರೆ ಅಂದಾಜು 15 ಡಾಲರ್) ದುಬಾರಿ ಶುಲ್ಕ ವಿಧಿಸಲು ಆರಂಭಿಸಿದ್ದಾಳೆ. ಸ್ವಲ್ಪ ಸಮಯ ಪತಿಯು ಹಣ ನೀಡಿ ಲೈಂಗಿಕ ಕ್ರಿಯೆ ನಡೆಸಿದ್ದು, ಕೊನೆಗೆ ದುಡ್ಡು ಹೊಂದಿಸಲಾಗದೆ ಬೇಸತ್ತ ಪತಿ, ಆ ಸಂದರ್ಭದಲ್ಲಿ ನ್ಯಾಯಾಲಯದ ಮೆಟ್ಟಿಲು ಏರಿದ್ದಾನೆ, ಮೇಲೆ ಪರಸ್ಪರ ಮಾತುಕತೆ ಮೇರೆಗೆ ಪ್ರಕರಣ ಸುಖಾಂತ್ಯಗೊಂಡಿತ್ತು.
ಆದರೆ ಕಾಲ ನಂತರ ಪರಿಸ್ಥಿತಿ ಮತ್ತೆ ಕoಟ್ರೋಲ್ ತಪ್ಪಿದ್ದು ಪತಿಯೊಂದಿಗೆ ಕೂಡಲು ಆಕೆ ನಿರಾಕರಿಸಿದ್ದು ಮಾತ್ರವಲ್ಲ, ಮೊಬೈಲ್ ಮೆಸೇಜ್ ಹಾಗೂ ಸನ್ನೆಯ ಭಾಷೆ ಮೂಲಕ ಮಾತನಾಡಲು ಶುರು ಮಾಡಿದ್ದಾಳೆ. ಇದರಿಂದ ಬೇಸತ್ತ ಪತಿ ಮತ್ತೊಮ್ಮೆ ನ್ಯಾಯಾಲಯದ ಮೆಟ್ಟಿಲೇರಿದ್ದು, ಇದೀಗ ಆತನ ವಿಚ್ಛೇದನ ಅರ್ಜಿಯನ್ನು ಮನ್ನಿಸಿರುವ ನ್ಯಾಯಾಲಯ ವಿಚ್ಛೇಧನ ಮಾಡಿಕೊಳ್ಳಲು ಅನುಮತಿಸಿದೆ.
