Home » UPI online: ಯುಪಿಐ ವರ್ಗಾವಣೆ 1 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ : ಯಥಾಸ್ಥಿತಿಯಲ್ಲೇ ಇರಲಿದೆ ರೆಪೊ ದರ

UPI online: ಯುಪಿಐ ವರ್ಗಾವಣೆ 1 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ : ಯಥಾಸ್ಥಿತಿಯಲ್ಲೇ ಇರಲಿದೆ ರೆಪೊ ದರ

5 comments

UPI online: ಡಿಜಿಟಲ್ ಹಣ ವರ್ಗಾವಣೆ ಬಂದ ಮೇಲೆ ಹೆಚ್ಚಿನ ಜನರು ಬಿಪಿಎ ಮುಖಾಂತರ ಹಣ ವರ್ಗಾವಣೆ ಮಾಡುತಾರೆ ಬೀದಿ ಬದಿ ತರಕಾರಿ, ಪಾನಿಪು ಅಂಗಡಿಯಿಂದ ಹಿಡಿದು ಎಲ್ಲವೂ ಈಗ ಮೊಬೈಲ್ ಮುಖಾತರ ಹಣದ ವ್ಯವಹಾರ ನಡೆಯುತ್ತದೆ. ಬ್ಯಾಂಕ್‌ಗೆ ಹೋಗಿ ಗಂಟೆಗಟ್ಟಲೆ ಸಾಲು ನಿಂತು ಕಾಯುವ ಪರಿಸ್ಥಿತಿ ಇಲ್ಲ. ಆದರೆ ಯುಪಿಎ ವರ್ಗಾವಣೆ ಮಿತಿ ಒಂದು ದಿನಕ್ಕೆ ಕೇಲವ ಒಂದು ಲಕ್ಷ ಮಾತ್ರ ಇತ್ತು. ಅದರೆ ಈಗ ಯುಪಿಐ (UPI) ಮುಖಾಂತರ 5 ಲಕ್ಷ ರೂ.ವರೆಗೆ ಹಣವನ್ನು ವರ್ಗಾವಣೆ ಮಾಡಬಹುದು.

ಇಲ್ಲಿಯವರೆಗೆ ಒಂದು ಬಾರಿಗೆ T ಗರಿಷ್ಟ 1 ಲಕ್ಷ ಕ್ಷ ರೂ.ವರೆಗೆ ಹಣವನ್ನು ಯುಪಿಐ ಮೂಲಕ ವರ್ಗಾವಣೆ ಮಾಡಲು ಮಾತ್ರ ಅವಕಾಶ ಇತ್ತು. ಈಗ ಈ ಮಿತಿ 5 ಲಕ್ಷ ರೂ. ವರೆಗೆ ಏರಿಸಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕಿನ (RBI) ಹಣಕಾಸು ನೀತಿ ಸಮಿತಿಯ ಸಭೆಯ ಬಳಿಕ ಈ ಮಾಹಿತಿ ಹೊರಬಿದ್ದಿದೆ. ಗವರ್ನರ್ ಶಕ್ತಿಕಾಂತ್ ದಾಸ್ ಅವರು ಯುಪಿಐ ಮೂಲಕ 5 ಲಕ್ಷ ರೂ. ವರೆಗೆ ಹಣವನ್ನು ವರ್ಗಾವಣೆ ಮಾಡಬಹುದು ಎಂದು ಮಾಹಿತಿ ನೀಡಿದ್ದಾರೆ.

ಅಹಾರ ಹಣದುಬ್ಬರ ಇಳಿಕೆಯಾಗದ ಕಾರಣ ನಿರೀಕ್ಷೆಯಂತೆ ಆರ್‌ಬಿಐ ಸತತ 9ನೇ ಬಾರಿಗೆ ರೆಪೊ ದರದಲ್ಲಿ ಯಥಾಸ್ಥಿತಿ ಉಳಿಸಿಕೊಂಡಿದೆ. ರೆಪೊ ದರವನ್ನು 6.5% ರಲ್ಲಿಯೇ ಕಾಯ್ದುಕೊಳ್ಳುವ ನಿರ್ಧಾರ ತೆಗೆದುಕೊಂಡಿದೆ. ಚಿಲ್ಲರೆ ಹಣದುಬ್ಬರವನ್ನು 4% ರ ಮಿತಿಯಲ್ಲಿ ಉಳಿಸಿಕೊಳ್ಳುವ ಹಿನ್ನೆಲೆಯಲ್ಲಿ ರೆಪೊ ದರದಲ್ಲಿ ಬದಲಾವಣೆ ಮಾಡುಲಾಗುತ್ತಿಲ್ಲ. ಹಣದುಬ್ಬರವು 4%ರ ಮಿತಿ ಅಥವಾ ಅದಕ್ಕಿಂತ ಕೆಳಗೆ ಇಳಿಕೆಯಾಗಬಹುದು. ಹಾಗಿದ್ದಲ್ಲಿ ಮಾತ್ರ ಹಣಕಾಸು ನೀತಿಯಲ್ಲಿ ಬದಲಾವಣೆ ತರಬಹುದು ಎಂದು ಶಕ್ತಿಕಾಂತ್ ದಾಸ್ ತಿಳಿಸಿದರು.

You may also like

Leave a Comment