Home » Fire: ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿ ಸಿಲಿಂಡರ್‌ನಲ್ಲಿ ಬೆಂಕಿ : ನಾಗರಪಂಚಮಿಯಂದು ತಪ್ಪಿದ ಭಾರೀ ಅನಾಹುತ

Fire: ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿ ಸಿಲಿಂಡರ್‌ನಲ್ಲಿ ಬೆಂಕಿ : ನಾಗರಪಂಚಮಿಯಂದು ತಪ್ಪಿದ ಭಾರೀ ಅನಾಹುತ

0 comments
Fire

Fire: ಬೆಂಗಳೂರು ನಗರ ಪಾಲಿಕೆ ಕೇಂದ್ರ ಕಛೇರಿ ಆದಿಶಕ್ತಿ ದೇವಾಲಯದಲ್ಲಿ ಸಿಲಿಂಡರ್ ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಗ್ಯಾಸ್ ಲೀಕ್ ಆಗಿ ಸಿಲಿಂಡರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಎಚ್ಚರ ತಪ್ಪಿದ್ರೆ ಪಾಲಿಕೆ ಕೇಂದ್ರ ಕಛೇರಿಯಲ್ಲಿ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಅಡುಗೆ ಭಟ್ಟರ ಸಮಯ ಪ್ರಜ್ಞೆಯಿಂದ ಬಾರಿ ಅನಾಹುತ ತಪ್ಪಿದೆ.

ಇಂದು ನಾಗರ ಪಂಚಮಿ. ಈ ಹಿನ್ನೆಲೆಯಲ್ಲಿ ದೇವಳದಲ್ಲಿ ವಿಶೇಷ ಪ್ರಸಾದ ತಯಾರಿಸಲಾಗುತ್ತಿತ್ತತು. ಈ ವೇಳೆಯಲ್ಲಿ ಈ ಘಟನೆ ನಡೆದಿದೆ. ಸಿಲಿಂಡರ್‌ ಅನ್ನು ಗೋಣಿ ಚೀಲದಿಂದ ಮುಚ್ಚಿ ಸಿಬ್ಬಂದಿಗಳು ಬೆಂಕಿಯನ್ನು ಆರಿಸಿದ್ದಾರೆ. ನಾಗರ ಪಂಚಮಿ ಪ್ರಯುಕ್ತ ದೇವಸ್ಥಾನದಲ್ಲಿ ನೂರಾರು ಮಂದಿ ಭಕ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಲು ಆಗಮಿಸಿದ್ದರು. ಸ್ವಲ್ಪ ಯಾಮಾರಿದ್ದರು ದೊಡ್ಡ ಅನಾಹುತವೇ ನಡೆದು ಹೋಗುತ್ತಿತ್ತು. ಆದರೆ ದೇವರ ದಯೆಯಿಂದ ಯಾವುದೇ ಸಮಸ್ಯೆ ಉಂಟಾಗಲಿಲ್ಲ.

You may also like

Leave a Comment