Home » Actor Darshan: ದೈವವೇ ನುಡಿದಾಯ್ತು ನಟ ದರ್ಶನ್ ಬಿಡುಗಡೆಯ ಭವಿಷ್ಯ! ವಿಡಿಯೋ ವೈರಲ್

Actor Darshan: ದೈವವೇ ನುಡಿದಾಯ್ತು ನಟ ದರ್ಶನ್ ಬಿಡುಗಡೆಯ ಭವಿಷ್ಯ! ವಿಡಿಯೋ ವೈರಲ್

5 comments
Actor Darshan

Actor Darshan: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Actor Darshan)  ಪರಪ್ಪನ ಅಗ್ರಹಾರ ಜೈಲು ಸೇರಿ ಎರಡು ತಿಂಗಳು ಆದರೂ ಇದುವರೆಗೆ ಎಷ್ಟೇ ಪ್ರಯತ್ನ ಪಟ್ಟರು ದರ್ಶನ್ ಬಿಡುಗಡೆ ಬಗ್ಗೆ ಯಾವುದೇ ಪಾಸಿಟಿವ್ ಮಾಹಿತಿ ಸಿಕ್ಕಿಲ್ಲ. ಹೀಗಿರುವಾಗ ನಟ ದರ್ಶನ್ ಯಾವಾಗ ಬಿಡುಗಡೆಯಾಗುತ್ತಾರೆ ಅಂತಾ ದೇವಸ್ಥಾನದ ಅರ್ಚಕನೇ ದೈವದ ಮೊರೆ ಹೋಗಿದ್ದಾರೆ.

ಹೌದು, ಬೆಂಗಳೂರಿನ ಬಾಪೂಜಿನಗರದ ಶಾರದಾಂಬೆ ದೇವಸ್ಥಾನದ ಅರ್ಚಕರ ಮಗಳ ಮೂಲಕ ಕುಟ್ಟೊ ಕಲ್ಲು ಮೂಲವಾಗಿ ದರ್ಶನ್ ಬಗ್ಗೆ ಓಂ ಶಕ್ತಿ ಶಾರದಾಂಬೆ ದೇವಿ ಭವಿಷ್ಯ ನುಡಿದಿದೆ ಎನ್ನಲಾಗಿದೆ.

ಸದ್ಯ ಓಂ ಶಕ್ತಿ ಶಾರದಾಂಬೆ ಬಿಸೋ ಕಲ್ಲು ಮೂಲಕ ಭವಿಷ್ಯ ನುಡಿದ ದೈವ, ದರ್ಶನ್ ಸದ್ಯ ಮೀನ ರಾಶಿಯಲ್ಲಿದ್ದಾರೆ, ಯಾವುದಕ್ಕೂ ಗ್ರಹಚಾರ ಸರಿಯಾಗಿಲ್ಲ. ಗುರುಬಲ ಇಲ್ಲದೇ ಇರುವ ಕಾರಣ ಕೆಟ್ಟ ದೆಸೆ ನಡೆಯುತ್ತಿದೆ. ಶನಿ ಬಂದು ಕೂತಿದ್ದಾನೆ. ಇನ್ನು ರಾಜರಾಜೇಶ್ವರಿನಗರದ ದರ್ಶನ್ ನಿವಾಸಕ್ಕೆ ವಾಸ್ತುದೋಷವಿದೆ. ಮನೆಯ ಮೂಲೆಯೇ ಸರಿಯಿಲ್ಲ. ಈ ಎಲ್ಲಾ ಕಾರಣಕ್ಕೆ ಅವರ ಬಿಡುಗಡೆಗೆ ಅಡ್ಡಿಯಾಗಿದೆ. ಇನ್ನೂ ಎರಡು ತಿಂಗಳು ಬಿಡುಗಡೆಯ ಭಾಗ್ಯ ಇಲ್ಲ. ಬಳಿಕ ಜೈಲಿನಿಂದ ಹೊರಬರ್ತಾರೆ ಎಂದು ದೈವ ಭವಿಷ್ಯ ನುಡಿದಿದೆ.

ಇದೀಗ ದೈವ ಭವಿಷ್ಯ ನುಡಿಯುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಎಲ್ಲೆಡೆ ವೈರಲ್ ಆಗಿದ್ದು, ಭವಿಷ್ಯ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ.

You may also like

Leave a Comment