Home » Aadhar Card: ಇನ್ಮುಂದೆ ವಾಟ್ಸಪ್ ಮೂಲಕವೂ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಬಹುದು !! ಜಸ್ಟ್ ಹೀಗ್ ಮಾಡಿ, ಸೆಕೆಂಡಿನಲ್ಲಿ ಆಧಾರ್ ಪಡೆಯಿರಿ

Aadhar Card: ಇನ್ಮುಂದೆ ವಾಟ್ಸಪ್ ಮೂಲಕವೂ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಬಹುದು !! ಜಸ್ಟ್ ಹೀಗ್ ಮಾಡಿ, ಸೆಕೆಂಡಿನಲ್ಲಿ ಆಧಾರ್ ಪಡೆಯಿರಿ

0 comments
Aadhar Card

Aadhar Card: ಆಧಾರ್ ಕಾರ್ಡ್ ಎಂಬುದು ಪ್ರತಿಯೊಬ್ಬ ಭಾರತೀಯನ ಗುರುತಿನ ಚೀಟಿ ಇದ್ದಂತೆ. ಸರ್ಕಾರದ ಯಾವುದೇ ಪ್ರಯೋಜನವನ್ನು ಪಡೆಯಲು ಈ ಆಧಾರ್ ಕಾರ್ಡ್(Adhar card) ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಅದರಲ್ಲೂ ಈ ಗ್ಯಾರಂಟಿ ಯೋಜನೆಗಳು ಜಾರಿಯಾದಬಳಿಕವಂತೂ ಇದು ಬಹುಮುಖ್ಯವಾಗಿದೆ.

ಹೀಗೆ ಸರ್ಕಾರದ ಕೆಲಸಕ್ಕಾಗಿ ಹೋದಾಗ, ಏನಾದರೂ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಹೋದಾಗ ಅಥವಾ ಬೇರೇನಾದರೂ ಕೆಲಸಗಳಿಗೆ ಹೋದಾಗ ಕೆಲವೊಮ್ಮೆ ಆಧಾರ್ ಕಾರ್ಡ್ ಬೇಕಾಗುತ್ತದೆ. ಆದರೆ ಒಮ್ಮೊಮ್ಮೆ ನಾವು ಆಧಾರ್ ಕಾರ್ಡ್ ಮನೆಯಲ್ಲೇ ಮರೆತು ಹೋಗಿರುತ್ತೇವೆ. ಇದರ ಹೊರತಾಗಿ ಆಧಾರ್ ಕಾರ್ಡ್ ಕಳೆದುಹೋದ ಸಂದರ್ಭಗಳೂ ಇರುತ್ತವೆ. ಇಂತಹ ಸಂದರ್ಭದಲ್ಲಿ ನಿಂತಲ್ಲೇ ವಾಟ್ಸಪ್ ನಲ್ಲಿ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಬಹುದು. ಹೇಗೆ ಗೊತ್ತಾ?

ವಾಟ್ಸಪ್ ನಲ್ಲಿ ಆಧಾರ್ ಡೌನ್ಲೋಡ್ ಮಾಡುವುದು:
ನಿಮ್ಮ ಫೋನ್‌ನಲ್ಲಿ “9013151515” “My Gov” WhatsApp ಸಹಾಯ ಸಂಖ್ಯೆಗೆ HI ಎಂದು ಸಂದೇಶವನ್ನು ಕಳುಹಿಸಬೇಕು. ಆ ಸಂದೇಶದಲ್ಲಿ ನೀವು ‘ಡಿಜಿಲಾಕರ್‌ ಸೇವೆಗಳು” ಅನ್ನು ಕ್ಲಿಕ್‌ ಮಾಡಬೇಕು. ನಂತರ ನೀವು ಡಿಜಿಲಾಕರ್‌ ಖಾತೆಯನ್ನು ಹೊಂದಿದ್ದೀರಾ ಎಂಬ ಪ್ರಶ್ನೆಗೆ ನೀವು ಹೌದು ಅಥವಾ ಇಲ್ಲ ಎಂದು ಆಯ್ಕೆ ಮಾಡಬೇಕು. ಈಗ ನಿಮ್ಮ ಆಧಾರ್‌ ಸಂಖ್ಯೆಯನ್ನು ನಮೂದಿಸಿ. ನಂತರ ನಿಮ್ಮ ಫೋನ್‌ ಗೆ ಬಂದ ಒಟಿಪಿಯನ್ನು ನಮೂದಿಸಿ, ನೀವು ನಿಮ್ಮ ಆಧಾರ್‌ ಡೌನ್‌ ಲೋಡ್‌ ಮಾಡಿಕೊಳ್ಳಬಹುದು.

You may also like

Leave a Comment