Home » Health Tips: ಎಡ ಮಗ್ಗುಲಲ್ಲಿ ಏಕೆ ಮಲಗಬೇಕು? ಇದರ ಪ್ರಯೋಜನಗಳೇನು ?

Health Tips: ಎಡ ಮಗ್ಗುಲಲ್ಲಿ ಏಕೆ ಮಲಗಬೇಕು? ಇದರ ಪ್ರಯೋಜನಗಳೇನು ?

2 comments

Health Tips: ಎಡ ಮಗ್ಗುಲಲ್ಲಿ ಮಲಗುವುದರಿಂದ ಹೃದಯದ ಮೇಲೆ ಒತ್ತಡ ಉಂಟಾಗುವುದಿಲ್ಲ. ಆದ್ದರಿಂದ, ಹೃದಯ ಸರಿಯಾಗಿ ಕೆಲಸ ಮಾಡುತ್ತದೆ. ಇದು ಹೃದಯವನ್ನು(Herat) ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

ಎಡಭಾಗದಲ್ಲಿ(Left Side) ಮಲಗುವುದರಿಂದ ದೇಹದ ವಿವಿಧ ಭಾಗಗಳಿಗೆ ಮತ್ತು ಮೆದುಳಿಗೆ ರಕ್ತದಲ್ಲಿನ ಆಮ್ಲಜನಕದ ಹರಿವು ಸುಧಾರಿಸುತ್ತದೆ. ಇದು ದೇಹದ ಎಲ್ಲಾ ಭಾಗಗಳನ್ನು ಆರೋಗ್ಯಕರವಾಗಿ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.

ಗರ್ಭಿಣಿಯರು ಎಡ ಮಗ್ಗುಲಾಗಿ ಮಲಗುವುದು ಸೂಕ್ತವಾಗಿದೆ. ಏಕೆಂದರೆ, ಇದು ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಿಲ್ಲ. ಜೊತೆಗೆ, ಯಕೃತ್ತಿನ ಮೇಲೆ ಒತ್ತಡ ಕಡಿಮೆಯಾಗುವುದರಿಂದ ಕೈ ಕಾಲುಗಳ ಊತ ಸಮಸ್ಯೆ ನಿವಾರಣೆಯಾಗುತ್ತದೆ.

ಎಡಮಗ್ಗಲಲ್ಲಿ ಮಲಗುವುದರಿಂದ ರಕ್ತದ ಹರಿವು ಸುಧಾರಿಸುತ್ತದೆ ಮತ್ತು ನಿದ್ರೆಯನ್ನು ಸುಧಾರಿಸುತ್ತದೆ. ಈ ಭಂಗಿಯಲ್ಲಿ ಎದ್ದ ನಂತರ ಆಯಾಸದ ಭಾವನೆ ಇರುವುದಿಲ್ಲ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳೂ ದೂರವಾಗುತ್ತವೆ.

ಜೀರ್ಣಕ್ರಿಯೆಯು ಸುಗಮವಾಗುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೆಚ್ಚುವರಿ ಒತ್ತಡವನ್ನು ಬೀರುವುದಿಲ್ಲ. ಎಡ ಭಾಗದಲ್ಲಿ ಮಲಗುವುದರಿಂದ ದುಗ್ಧರಸ ವ್ಯವಸ್ಥೆಯ ಮೂಲಕ ದೇಹದಲ್ಲಿ ಸಂಗ್ರಹವಾದ ವಿಷವನ್ನು ಹೊರಹಾಕುತ್ತದೆ.

ಮಲಬದ್ಧತೆಯ ತೊಂದರೆ ಇದ್ದಲ್ಲಿ ಎಡಮಗ್ಗುಲಾಗಿ ಮಲಗಬೇಕು. ಇದರಿಂದ ಮಲಬದ್ಧತೆಯಲ್ಲಿ ಅನುಕೂಲವಾಗುತ್ತದೆ. ಗುರುತ್ವಾಕರ್ಷಣೆಯು ಆಹಾರವನ್ನು ವ್ಯವಸ್ಥಿತವಾಗಿ ಸಣ್ಣ ಕರುಳಿನಿಂದ ದೊಡ್ಡ ಕರುಳಿಗೆ ತಳ್ಳುತ್ತದೆ ಮತ್ತು ಬೆಳಿಗ್ಗೆ ಸುಲಭವಾಗಿ ಹೊಟ್ಟೆಯನ್ನು ತೆರವುಗೊಳಿಸುತ್ತದೆ.

ಹೊಟ್ಟೆಯ ಆಮ್ಲವು ಮೇಲಕ್ಕೆ ಬರುವ ಬದಲು ಕೆಳಗೆ ಬರುತ್ತದೆ, ಇದು ಆಮ್ಲೀಯತೆ ಮತ್ತು ಎದೆಯುರಿ ಮುಂತಾದ ಸಮಸ್ಯೆಗಳನ್ನು ನಿವಾರಿಸುತ್ತದೆ. ಎಡಮಗ್ಗುಲಾಗಿ ಮಲಗುವುದರಿಂದ ಗೊರಕೆ ಕಡಿಮೆಯಾಗುತ್ತದೆ ಮತ್ತು ನಿಮಗೂ ಮತ್ತು ಇತರರಿಗೂ ಪ್ರಯೋಜನವಾಗುತ್ತದೆ.
ಇದರಿಂದ, ಮನೆಯಲ್ಲಿ ಎಲ್ಲರೂ ಚೆನ್ನಾಗಿ ನಿದ್ರಿಸಲು ಅನುಕೂಲವಾಗುತ್ತದೆ.

You may also like

Leave a Comment