Home » Independence Day: 78ನೇ ಸ್ವಾತಂತ್ರ್ಯೋತ್ಸವ: ಕೆಂಪು ಕೋಟೆ: ದೇಶದ ಜನರನ್ನು ‘ಪರಿವಾರಜನ್’ ಎಂದ ಪ್ರಧಾನಿ ಮೋದಿ, ಹಾಗಂದ್ರೆ ಏನು ?

Independence Day: 78ನೇ ಸ್ವಾತಂತ್ರ್ಯೋತ್ಸವ: ಕೆಂಪು ಕೋಟೆ: ದೇಶದ ಜನರನ್ನು ‘ಪರಿವಾರಜನ್’ ಎಂದ ಪ್ರಧಾನಿ ಮೋದಿ, ಹಾಗಂದ್ರೆ ಏನು ?

by ಹೊಸಕನ್ನಡ
0 comments

Independence Day: ದೇಶದೆಲ್ಲೆಡೆ 78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ದೇಶದ ಜನರನ್ನು ಪರಿವಾರಜನ್ ಅಂತ ಮೋದಿ ಕರೆದಿದ್ದಾರೆ.

ಪ್ರಧಾನಿ ಮೋದಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿದ ನಂತರ ಐಎಎಫ್ ಹೆಲಿಕಾಪ್ಟರ್ ಪುಷ್ಪವೃಷ್ಟಿ ಮಾಡಿತು. ಕೆಂಪು ಕೋಟೆಗೆ ಆಗಮಿಸಿದ ಪ್ರಧಾನಿ ಮೋದಿಗೆ ಮೂರೂ ಸೇನಾಪಡೆಗಳು ಗೌರವ ಸಲ್ಲಿಸಿದವು. ಇದಕ್ಕೂ ಮುನ್ನ ಮಹಾತ್ಮ ಗಾಂಧಿಯವರ ಸಮಾಧಿ ರಾಜ್‌ಘಾಟ್‌ಗೆ ತೆರಳಿ ಮೋದಿ ನಮನ ಸಲ್ಲಿಸಿದ್ದಾರೆ

ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ. 78th Independence Day ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ, ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದಾರೆ. ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಥೀಮ್ ವೀಕ್ಷಿತ್ ಭಾರತ್ @ 2047 ಆಗಿದೆ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪರಿವರ್ತಿಸುವ ಸರ್ಕಾರದ ಪ್ರಯತ್ನಗಳನ್ನು ಈ ಆಚರಣೆಗಳು ಬಿಂಬಿಸುತ್ತವೆ ಎಂದು ಪ್ರಧಾನಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿದೆ.

ತಮ್ಮ ಭಾಷಣದಲ್ಲಿ ಪರಿವಾರಜನ್ ಅಂತ ಮೋದಿ ಸಂಬೋಧಿಸಿದ್ದರು. ಹಾಗಾದ್ರೆ ಪರಿವಾರ ಜನ ಅಂದ್ರೆ ಏನು ಎಂದು ಜನರು ಕುತೂಹಲಗೊಂಡಿದ್ದಾರೆ. ಪರಿವಾರದ ಅಂತ ಮೋದಿ ಹೇಳಿದ್ದು ಕುಟುಂಬಸ್ಥರೇ ಅನ್ನುವ ಅರ್ಥದಲ್ಲಿ. ನಿಜಕ್ಕೂ ಪರಿವಾರ ಅಂದರೆ ಕುಟುಂಬ ಎಂದರ್ಥ.

You may also like

Leave a Comment